ದೂರು ದಾಖಲಿಸಲು ಪೊಲೀಸ್ ಇಲಾಖೆ ಮೌನ ; ಖಾಸಗಿ ಹಣಕಾಸು ಸಂಸ್ಥೆಯವರಿಂದ ಗ್ರಾಹಕರಿಗೆ ಲಕ್ಷಾಂತರ ಹಣ ಪಂಗನಾಮ !!

0
569

ರಿಪ್ಪನ್‌ಪೇಟೆ: ಇಲ್ಲಿನ ಶಿವಮೊಗ್ಗ ರಸ್ತೆಯಲ್ಲಿನ ಖಾಸಗಿ ಶಾರದ ಫೈನಾನ್ಸ್ ಹಣಕಾಸು ಸಂಸ್ಥೆ ಹೆಸರಿನಲ್ಲಿ ಇಲ್ಲಿನ ಅಂಗಡಿ ಹೋಟೆಲ್ ದಿನಸಿ ವಾಪಾರಿಗಳಿಂದ ನಿತ್ಯ ನಿಧಿ ಠೇವಣ ಹಣ ಮತ್ತು ಡಿಪಾಜಿಟ್ ಹಣವನ್ನು ಗ್ರಾಹಕರಿಂದ ಸಂಗ್ರಹಿಸಿ ಲಕ್ಷಾಂತರ ರೂ. ಹಣ ಪಂಗನಾಮ ಹಾಕಿ ಪರಾರಿಯಾದ ಬಗ್ಗೆ ಗ್ರಾಹಕರು ಠಾಣೆಗೆ ದೂರು ನೀಡಿದರು ಪೊಲೀಸರು ಮೌನವಹಿಸಿದ್ದಾರೆಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಣ್ಣ ಪುಟ್ಟ ಅಂಗಡಿಯವರು ಮತ್ತು ಇತರ ವ್ಯಾಪರಸ್ಥರು ವ್ಯಾಪಾರದಿಂದ ಬರುವ ಅಲ್ಪಸ್ವಲ್ಪ ಲಾಭದ ಹಣವನ್ನು ನಿತ್ಯ ನಿಧಿ ಪಿಗ್ಮಿ ಸಂಗ್ರಹಕಾರನಿಗೆ ಸಂದಾಯ ಮಾಡಲಾಗಿದ್ದು ತಮ್ಮ ಕಷ್ಟದ ಸಮಯದಲ್ಲಿ ಇಡಿ ಗಂಟಾಗಿ ಪಡೆದುಕೊಳ್ಳುವ ಉದ್ದೇಶದಿಂದ ಕಟ್ಟಲಾದ ಹಣವನ್ನು ಶಾರದ ಫೈನಾನ್ಸ್ ಮಾಲೀಕ ರಾತ್ರೋರಾತ್ರಿ ಯಾರಿಗೂ ಗೊತ್ತಾಗದಂತೆ ದಾಖಲೆಗಳೊಂದಿಗೆ ಕಛೇರಿಯನ್ನು ಕ್ಲೂಸ್ ಮಾಡಿಕೊಂಡು ಪರಾರಿಯಾಗಿದ್ದಾನೆ.

ಈ ಹಿಂದೆ ರಾಜ್ಯದಲ್ಲಿ ಕುಮಾರಸ್ವಾಮಿ ನೇತೃತ್ವ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವಿದ್ದಾಗ ರಾಜ್ಯದಲ್ಲಿ ಖಾಸಗಿ ಹಣಕಾಸು ಸಂಸ್ಥೆಗಳ ವಿರುದ್ದ ಸಾಕಷ್ಟು ಗ್ರಾಹಕರಿಗೆ ಅನ್ಯಾಯವಾಗುತ್ತಿರುವುದರ ಬಗ್ಗೆ ಸಮಗ್ರ ತನಿಖೆ ನಡೆಸಿ ಅಂತಹ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಜರುಗಿಸುವ ಅದೇಶವನ್ನು ಹೊರಡಿಸಲಾಗಿ ಇದರನ್ವಯ ಇಲ್ಲಿನ ಶಾರದಾ ಖಾಸಗಿ ಹಣಕಾಸು ಸಂಸ್ಥೆ ಸಹಕಾರಿ ನಿಯಮದಡಿ ಪರವಾನಿಗೆ ಪಡೆಯದೆ ಪರವಾನಿಗೆ ನವೀಕರಿಸಿಕೊಳ್ಳದೆ ಗ್ರಾಹಕರಿಂದ ಲಕ್ಷಾಂತರ ಹಣ ಪಿಗ್ಮಿ ಮತ್ತು ಠೇವಣಿ ಪಡೆದು ರಾತ್ರೋರಾತ್ರಿ ಖಾಲಿ ಮಾಡಿಕೊಂಡು ಪರಾರಿಯಾಗಿದ್ದಾನೆ.

ಈ ಬಗ್ಗೆ ಕೆಲವರು ಠಾಣೆಗೆ ದೂರು ಸಲ್ಲಿಸಿದಾಗ ಠಾಣಾಧಿಕಾರಿ ಫೈನಾನ್ಸ್ ಮಾಲೀಕನನ್ನು ಠಾಣೆಗೆ ಕರೆಯಿಸಿ ಸ್ಥಳದಲ್ಲಿ ಕೆಲವರಿಗೆ ಹಣ ಹಿಂತಿರಿಗಿಸುವ ಬಗ್ಗೆ ಚೆಕ್ ನೀಡಲಾಗಿ ಉಳಿದವರು ಠಾಣೆಗೆ ದೂರು ನೀಡಲಾಗಿದ್ದರೂ ಆತನನ್ನು ಕರೆಯಿಸಲು ಪೊಲೀಸ್ ಇಲಾಖೆ ಮೌನವಹಿಸಿರುವುದರ ಹಿಂದಿನ ವರ್ಮ ಏನು ಎಂಬುದು ನಿಗೂಢವಾಗಿದೆ.

ಇನ್ನಾದರೂ ಠಾಣಾಧಿಕಾರಿಗಳು ಮತ್ತು ಜಿಲ್ಲಾ ರಕ್ಷಣಾಧಿಕಾರಿಗಳು ಇತ್ತ ಗಮನಹರಿಸಿ ಈ ರೀತಿ ಗ್ರಾಹಕರನ್ನು ವಂಚಿಸಿ ಪರಾರಿಯಾಗವ ಖಾಸಗಿ ಹಣಕಾಸು ಸಂಸ್ಥೆಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಮುಂದಾಗಬೇಕು ಎಂದು ಹಾಲೇಶ್‌ ಹಾಲುಗುಡ್ಡೆ, ಕವಿತಾ, ಸತೀಶ್, ಮಂಜುನಾಥ ಜೋಗಿ, ನಾಗರಾಜ್ ಭಂಡಾರಿ, ಸುಧಾಕರ್ ಇನ್ನೂ ಹಲವು ನೊಂದ ಗ್ರಾಹಕರು ಠಾಣೆಗೆ ದೂರು ನೀಡಿರುವುದಾಗಿ ಪತ್ರಕರ್ತರಿಗೆ ಮಾಹಿತಿ ನೀಡಿದರು.

ರಾಜ್ಯದ ಗೃಹಸಚಿವರ ಸ್ವಕ್ಷೇತ್ರ ಶಿವಮೊಗ್ಗ ಜಿಲ್ಲೆಯಲ್ಲಿಯೇ ಹೀಗಾದರೆ ಉಳಿದ ಜಿಲ್ಲೆಗಳ ಕಥೆ ಏನು ? ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುವಂತಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here