ಸಾಗರ: ಮಂಗಳೂರು ಜಿಲ್ಲೆಯ ಸ್ವಾಮಿ ಕೊರಗಜ್ಜನ ದೇವಸ್ಥಾನದ ಪ್ರಕರಣ ಇನ್ನೂ ಬಿಸಿಯಿರುವಂತೆಯೇ ಹೊಸಗುಂದ ದೇವಸ್ಥಾನದ ಘಟನೆಯೂ ಇದೀಗ ದೈವ ಶಕ್ತಿಗಳ ಬಗ್ಗೆ ಜನರಲ್ಲಿ ಭಯ ಭಕ್ತಿ ಹುಟ್ಟಿಸುವಂತೆ ಮಾಡುತ್ತಿದೆ.
ತಾಲೂಕಿನ ಪ್ರಸಿದ್ಧ ಹೊಸಗುಂದ ಗ್ರಾಮದ ಕಂಚಿ ಕಾಳಮ್ಮ ದೇವಸ್ಥಾನದಲ್ಲಿ ಕಳ್ಳರು ಕಳೆದ ತಿಂಗಳು 24 ರಂದು ದೇವಸ್ಥಾನದಲ್ಲಿದ್ದ ಕಂಚಿನ ಗಂಟೆಯನ್ನು ಕದ್ದು ಪರಾರಿಯಾಗಿದ್ದರು. ಈ ಕುರಿತು ದೇವಸ್ಥಾನದ ಮ್ಯಾನೇಜರ್ ನಟರಾಜ್ ಹೆಬ್ಬಾರ್ ರವರು ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಪ್ರಕರಣ ದಾಖಲಿಸಿ 15 ದಿನದ ನಂತರ ಕಂಚಿ ಕಾಳಮ್ಮ ದೇವಸ್ಥಾನಕ್ಕೆ ಆಗಮಿಸಿದ ಕಳ್ಳರು ದೇವರ ಎದುರು ಕಂಚಿನ ಗಂಟೆಯನ್ನು ಇಟ್ಟು, ತಪ್ಪುಕಾಣಿಕೆ ರೂಪದಲ್ಲಿ ಅದರ ಅಡಿಯಲ್ಲಿ 501 ರೂ. ಇಟ್ಟು ಕರ್ಪೂರವನ್ನು ಬೆಳಗಿಸಿ ಪರಾರಿಯಾಗಿದ್ದಾರೆ.
ಕಳ್ಳರನ್ನು ಹಿಡಿಯಲು ಪ್ರಯತ್ನಿಸಿದ್ದ ಅರ್ಚಕರು:
ಮಾ.24 ಮೂರು ಜನ ಯುವಕರು ಗಂಟೆಯನ್ನು ಕಳ್ಳತನ ಮಾಡಿ ದೇವಸ್ಥಾನದಿಂದ ಹೊರಹೋಗುವಾಗ ಅರ್ಚಕರು ದೇವಸ್ಥಾನಕ್ಕೆ ಆಗಮಿಸಿದ್ದಾರೆ. ಈ ವೇಳೆ ದೇವರ ಬಳಿ ಗಂಟೆ ಇಲ್ಲದ್ದನ್ನು ಕಂಡ ಅರ್ಚಕರು ಮೂರುಜನ ಯುವಕರನ್ನು ವಿಚಾರಿಸಲು ತೆರಳಿದಾಗ ಅವರನ್ನು ದೂಡಿ ಅಲ್ಲಿಂದ ಪರಾರಿಯಾಗಿದ್ದರು. ಆದರೇ ಇದೀಗ ಗಂಟೆ ಕದ್ದ ತಪ್ಪಿನ ಅರಿವಾಗಿ ಕಳ್ಳರು ದೇವರಿಗೆ ತಪ್ಪು ಕಾಣಿಕೆ ನೀಡಿ, ಗಂಟೆಯನ್ನು ಮರಳಿಸಿ ತೆರಳಿರುವುದು ಇದೀಗ ದೈವ ಶಕ್ತಿಗಳ ಬಗ್ಗೆ ಜನರಲ್ಲಿ ಭಯ ಭಕ್ತಿ ಹೆಚ್ಚಿಸಲು ಕಾರಣವಾಗುತ್ತಿದೆ.
🕉️🕉️🙏🏻🙏🏻