20.6 C
Shimoga
Friday, December 9, 2022

ದೇವಸ್ಥಾನದ ದೀಪೋತ್ಸವ ಮುಗಿಸಿಕೊಂಡು ಬರುವಾಗ ಹಿಟ್ ಅಂಡ್ ರನ್’ಗೆ ಇಬ್ಬರು ಬಲಿ ! ಓರ್ವ ಮಹಿಳೆ ಸ್ಥಿತಿ ಗಂಭೀರ

ಹೊಸನಗರ: ಹುಲಿಕಲ್ ನಲ್ಲಿ ನಡೆದ ಹಿಟ್ ಅಂಡ್ ರನ್ ಗೆ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು ಓರ್ವ ಮಹಿಳೆಯ ಸ್ಥಿತಿ ಗಂಭೀರವಾಗಿದ್ದು ಗಾಯಾಳುವನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾದ ಘಟನೆ ಮಾಸ್ತಿಕಟ್ಚೆಯಿಂದ ಒಂದು ಕಿ.ಮೀ. ದೂರದ ಹುಲಿಕಲ್ ಮುಖ್ಯ ರಸ್ತೆಯಲ್ಲಿ ತಡರಾತ್ರಿ ನಡೆದಿದೆ.

ಬೈಕ್ ನಲ್ಲಿ ತೆರಳುತ್ತಿರುವವರ ಮೇಲೆ ಲಾರಿ ಹರಿದಿದ್ದು ಘಟನೆ ಬಳಿಕ ಲಾರಿ ಚಾಲಕ ವಾಹನ ಸಮೇತ ಪರಾರಿಯಾಗಿದ್ದಾನೆ. ಘಟನಾ ಭೀಕರತೆ ನೋಡಿ ಜನ ಬೆಚ್ಚಿಬಿದ್ದಿದ್ದು, ಸುಮಾರು ಎರಡೂವರೆ ಘಂಟೆ ಕಾಲ ವಾಹನ ಸಂಚಾರ ಸ್ಥಗಿತವಾಗಿತ್ತು.


ಮಾಸ್ತಿಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂಪದ ಕೈ ಕೂಲಿ ಕಾರ್ಮಿಕ ರವಿ (47) ಹಾಗೂ ಅವರ ಅಣ್ಣನ ಮಗ ಶ್ರಿಸಿರ ನಾಲ್ಕನೇ ತರಗತಿ ಹುಡುಗ ಮೃತ ದುರ್ದೈವಿಗಳು ಹಾಗೂ ರವಿಯವರ ಪತ್ನಿಯ ಕಾಲಿನ ಮೇಲೆ ಲಾರಿ ಹರಿದಿದ್ದು ಅವರು ಗಂಭೀರ ಸ್ಥಿತಿಯಲ್ಲಿದ್ದಾರೆ.


ಹುಲಿಕಲ್ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ಮುಗಿಸಿ ಮನೆಗೆ ಬರುವಾಗ ಸುಮಾರು ರಾತ್ರಿ 9:35 ರ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ.

ನಗರ ಠಾಣೆಯ ಪೊಲೀಸ್ ಇನ್ಸೆಕ್ಟರ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಮೃತ ದೇಹಗಳನ್ನು ಆಂಬುಲೆನ್ಸ್ ಗೆ ಹಾಕಿದ ನಂತರ ಸುಮಾರು ರಾತ್ರಿ‌12 ಘಂಟೆ ಸಮಯದಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು.


ಕರ್ನಾಟಕಕ್ಕೆ ಪ್ರಧಾನಿ ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತೆಗೆ ಪೊಲೀಸರ ನಿಯೋಜನೆ ಮಾಡಿರುವುದರಿಂದ ಸಮಯಕ್ಕೆ ಸರಿಯಾಗಿ ಪೊಲೀಸರು ಬರಲು ತಡವಾಯಿತು ಎನ್ನಲಾಗಿದೆ.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!