ರಿಪ್ಪನ್ಪೇಟೆ: ದೇವಾಲಯಗಳು ಭಕ್ತಿಯ ಕೇಂದ್ರಗಳಾಗದೆ ಸಮಾಜದ ಸಂಘಟನೆಯ ಶಕ್ತಿ ಕೇಂದ್ರಗಳಾಗಬೇಕು. ಧರ್ಮದ ಕಾರ್ಯದೊಂದಿಗೆ ಸಮಾಜದ ಕಟ್ಟಕಡೆಯ ಕುಟುಂಬವನ್ನು ಅಭಿವೃದ್ದಿ ಪಡಿಸುವ ಮೂಲಕ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದರಿಂದ ಬದುಕಿನಲ್ಲಿ ಶಾಂತಿ ನೆಮ್ಮದಿಯನ್ನು ಕಾಣಲು ಸಾಧ್ಯವೆಂದು ಮಳಲಿಮಠದ ಡಾ. ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಜಿ ಹೇಳಿದರು.
ಸಮೀಪದ ಹಾಲುಗುಡ್ಡೆ ಗ್ರಾಮದ ಶ್ರೀಹಾಲೇಶ್ವರ ದೇವಸ್ಥಾನ ಸೇವಾ ಸಮಿತಿಯವರು ಆಯೋಜಿಸಲಾದ ಮಹಾಶಿವರಾತ್ರಿ ಕಾರ್ಯಕ್ರಮದ ಅಂಗವಾಗಿ ಶ್ರೀಹಾಲೇಶ್ವರ ಸ್ವಾಮಿಗೆ ಮಹಾರುದ್ರಾಭಿಷೇಕ, ಕ್ಷೀರಾಭಿಷೇಕ, ಅಭಿಷೇಕ ಮಹಾಪೂಜೆಯನ್ನು ಮಳಲಿಮಠದ ಶ್ರೀಗಳು ನೇರವೇರಿಸಿ, ನಂತರ ನಡೆದ ಹಾಲೇಶ್ವರ ಬಯಲು ರಂಗಮಂದಿರ ಉದ್ಘಾಟನೆ ವಾರ್ಷೀಕೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿ, ಮಹಾಶಿವರಾತ್ರಿ ಉಪವಾಸದೊಂದಿಗೆ ಶಿವನಾಮ ಸ್ಮರಣೆಯಿಂದ ಭಕ್ತರ ಇಷ್ಟಾರ್ಥಗಳು ಸಿದ್ದಿಸುವವು. ಅಲ್ಲದೆ ಇದೇ ಸಂದರ್ಭದಲ್ಲಿ ದೇವಸ್ಥಾನ ಸೇವಾ ಸಮಿತಿಯವರು ಸರ್ಕಾರದ ಅನುದಾನದಡಿಯಲ್ಲಿ ನಿರ್ಮಿಸಲಾದ ರಂಗಮಂದಿರದ ಉದ್ಘಾಟನೆ ಮಾಡಿಸುವ ಮೂಲಕ ಗ್ರಾಮದಲ್ಲಿನ ಶುಭ ಕಾರ್ಯಗಳಿಗೆ ದೇವಸ್ಥಾನದ ಬಯಲು ರಂಗಮಂದಿರ ಉತ್ತಮ ವೇದಿಕೆಯನ್ನಾಗಿ ಮಾಡಿರುವುದು ಶ್ಲಾಘನೀಯವೆಂದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಜಯದೇವಪ್ಪಗೌಡರು ವಹಿಸಿದ್ದರು.
ಮುಖ್ಯ ಅತಿಥಿಗಳಗಿ ಶೇಖರಪ್ಪಗೌಡ, ಯೋಮಕೇಶ್ ಗೌಡ, ಕೃಷ್ಣಮೂತಿಗೌಡ, ಕೇಶವಮೂರ್ತಿಗೌಡ, ವಾಸಪ್ಪಗೌಡ, ಚಂದ್ರಶೇಖರಗೌಡ, ಮಲ್ಲಿಕಾರ್ಜುನಗೌಡ, ಷಣ್ಮುಖಪ್ಪಗೌಡ, ಬಾಳೂರು ಗ್ರಾ.ಪಂ.ಸದಸ್ಯ ರಾಜುಗೌಡ, ವೇದಾ, ಜಿ.ಡಿ.ಮಲ್ಲಿಕಾರ್ಜುನ, ಗ್ರಾಮದ ಹಿರಿಯರು ಪಾಲ್ಗೊಂಡಿದ್ದರು.
ಮಲ್ಲಿಕಾರ್ಜುನ ಪ್ರಾರ್ಥಿಸಿದರು. ಹೆಚ್.ಎಸ್.ರವಿ ಸ್ವಾಗತಿಸಿ, ನಿರೂಪಿಸಿದರು.
Related