ದೇಶದ ಅಭಿವೃದ್ಧಿಗೆ ಪ್ರಧಾನಿ ಮೋದಿರವರಿಂದ ನಿರಂತರ ಶ್ರಮ: ಜಗ್ಗೇಶ್

0
181

ಚಿಕ್ಕಮಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 135ಕೋಟಿ ಜನರ ಶ್ರೇಯೋಭಿ ವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ವಿರೋಧ ಪಕ್ಷದವರಿಗೆ ಟೀಕೆ ಮಾಡಲು ವಿಷಯಗಳಿಲ್ಲದೇ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ರಾಜ್ಯಸಭೆ ಸದಸ್ಯ ಜಗ್ಗೇಶ್ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ನಗರದಲ್ಲಿ ಬಿಜೆಪಿ ಯುವ ಮೋರ್ಚಾದಿಂದ ಆಯೋಜಿಸಿದ್ದ ವಿಕಾಸ ತೀರ್ಥ ಬೈಕ್ ರ್ಯಾಲಿಯನ್ನು ಉದ್ಘಾಟಿಸಿ, ಆಜಾದ್ ಪಾರ್ಕ್ ವೃತ್ತದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿರವರು ಅಧಿಕಾರಕ್ಕೆ ಬರುವ ಮುಂಚೆ ಪ್ರಧಾನಮಂತ್ರಿಗಳು ಆಡಂಬರದ ಜೀವನ ನಡೆಸುತ್ತಿದ್ದರು. ಅವರ ಸುತ್ತಮುತ್ತ ಹೊಗಳು ಭಟ್ಟರು ಇರುತ್ತಿದ್ದರು. ಅನೇಕ ವರ್ಷಗಳಿಂದ ಇದೇ ನಡೆದುಕೊಂಡು ಬಂದಿತ್ತು ಎಂದರು.

ಇಂದು ಕುಟುಂಬ ನಿರ್ವಹಣೆಯೇ ಕಷ್ಟ ಇರುವಂತ ಸಂದರ್ಭದಲ್ಲಿ ನರೇಂದ್ರ ಮೋದಿ ಅವರು ದೇಶದ 135 ಕೋಟಿ ಜನರಿಗೆ ಎಳ್ಳಷ್ಟು ತೊಂದರೆಯಾಗದಂತೆ ಶ್ರದ್ಧೆಯಿಂದ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯತ್ತಿದ್ದಾರೆ ಎಂದು ಬಣ್ಣಿಸಿದರು.

ವಿಪಕ್ಷದಲ್ಲಿ ಒಬ್ಬರನ್ನು ನಾಯಕ ಎಂದು ಬಿಂಬಿಸುತ್ತಿದ್ದಾರೆ. ಅವರು ಏನು ಹೇಳುತ್ತಾ ರೆಂದು ಗೋತ್ತಾಗುವುದಿಲ್ಲ, ಬಾಯಿಗೂ ತಲೆಗೂ ಸಂಪರ್ಕವೇ ಇಲ್ಲ. ಅವರಲ್ಲಿ ನಾಯಕತ್ವ ಗುಣವೇ ಇಲ್ಲ ವಿಪಕ್ಷ ನಾಯಕ ರಾಹುಲ್ ಗಾಂಧಿಯನ್ನು ಚೇಡಿಸಿದರು.

ಕಾಯ, ವಾಚ, ಮನಸ್ಸಾ ಶ್ರದ್ಧೆಯಿಂದ ಕೆಲಸ ಮಾಡಿದರೇ ಅಧಿಕಾರ ಹುಡುಕಿಕೊಂಡು ಬರುತ್ತದೆ. ಒತ್ಲಾ ಹೊಡೆದರೇ ಏನು ಬರುವುದಿಲ್ಲ ಎಂದ ಅವರು, ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾದ ಬಳಿಕ ಭಾರತ ವಿಶ್ವಮಟ್ಟದಲ್ಲಿ ಅಗ್ರಸ್ಥಾನ ಪಡೆದಿದೆ ಎಂದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ. ಟಿ. ರವಿ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ದೇಶ ದೊಡ್ಡದು, ಕಾಂಗ್ರೆಸ್‍ನವರಿಗೆ ಕುಟುಂ ಬ ದೊಡ್ಡದು ಎಂದರು.

ಕಾಂಗ್ರೆಸ್‍ನವರಲ್ಲಿ ನಾನು ತಿನ್ನುತ್ತೇನೆ ನೀವು ತಿನ್ನಿ ಎನ್ನುವಂತೆ ಹಗರಣಗಳ ಮೇಲೆ ಹಗರಣ ಮಾಡಿದರು. ಆಡುಮುಟ್ಟದ ಸೊಪ್ಪಿಲ್ಲ, ಕಾಂಗ್ರೆಸ್ ಮಾಡದ ಹಗರಣವಿಲ್ಲ. ಕಾಂಗ್ರೆಸ್‍ನವರು ಸ್ಕ್ಯಾಮ್ ಮಾಡಿದರೇ, ಮೋದಿ ಅವರು ಸ್ಕೀಮ್ ಮಾಡಿದರು ಎಂದು ಟೀಕಿಸಿದರು.

ಆಲೂಗಡ್ಡೆ ಬಿತ್ತಿ ಚಿನ್ನ ತಗೆಯುವ ಕಲೆಯನ್ನು ಕಾಂಗ್ರೆಸ್‍ನವರು ಕರಗತ ಮಾಡಿ ಕೊಂಡಿದ್ದಾರೆ. ಕಾಂಗ್ರೆಸ್‍ನ ಬಹುತೇಕ ನಾಯಕರು ಜೈಲಿನಲ್ಲಿದ್ದಾರೆ. ಕೆಲವರು ಬೇಲ್‍ನಲ್ಲಿ ದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ಜಾಹಿರಾತು

LEAVE A REPLY

Please enter your comment!
Please enter your name here