ದೇಶದ ಸ್ಥಿತಿಯ ಹೊಸತನಕ್ಕೆ ಮಕ್ಕಳಿಗೆ ಉತ್ತಮ ವಾತಾವರಣ ಅಗತ್ಯ

0
278

ಹೊಸನಗರ : ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ದೇಶದ ಸ್ಥಿತಿ ಉತ್ತಮವಾಗಿರಬೇಕಾದರೆ ಉತ್ತಮ ವಾತಾವರಣವಿರುವ ಸಮಾಜ ಅಸ್ತಿತ್ವದಲ್ಲಿರಬೇಕು ಮಕ್ಕಳು ಸರಿಯಾದ ಹಾದಿಯಲ್ಲಿ ಸಾಗಬೇಕಾದ ವ್ಯವಸ್ಥೆ ಅತ್ಯಗತ್ಯ.

ಬೆಳೆವ ಸಿರಿ ಮೊಳಕೆಯಲ್ಲಿ ಎಂಬ ಮಾತಿನಂತೆ ಉತ್ತಮ ಸಮಾಜದ ನಿರ್ಮಾಣ ಗುರಿಯನ್ನು ಹೊಂದಬೇಕಾದರೆ ದೇಶದ ಮಕ್ಕಳ ಶೈಕ್ಷಣಿಕ ಅಭ್ಯುದಯದ ಹೊಣೆಯನ್ನು ಸರ್ಕಾರ ಹೊರಬೇಕಾಗಿದೆ ಎಂದು ಹೊಸನಗರ ತಾಲೂಕಿನ ಜೇನಿ ಗ್ರಾಮ ಪಂಚಾಯಿತಿಯಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಮೇಳದಲ್ಲಿ ಅಭಿಪ್ರಾಯಿಸಲಾಯಿತು.

ಜೇನಿ ಗ್ರಾಮ ಪಂಚಾಯತ್ ವ್ಯಾಪ್ತಿಯ 9 ಶಾಲೆ, ಅಂಗನವಾಡಿ ಮಕ್ಕಳು, ಶಿಕ್ಷಕರು, ಪೋಷಕರು ಪಾಲ್ಗೊಂಡ ಮಹಿಳಾ ಮತ್ತು ಮಕ್ಕಳ ಮೇಳದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಲಕ್ಷ್ಮಣ, ಉಪಾಧ್ಯಕ್ಷೆ ಸರೋಜಿನಿ, ಸದಸ್ಯರಾದ ಅಕ್ಷತಾ, ವಿನೋದ, ಪಿಡಿಒ ನಾಗರಾಜ್, ಸಿ.ಆರ್.ಪಿ ಮಂಜಪ್ಪ, ವಿ ಎ ಕೌಶಿಕ್, ಅಂಗನವಾಡಿ ಕಾರ್ಯಕರ್ತೆಯರಾದ ಜಂಬಳ್ಳಿ ಜಯಶೀಲ, ಮಂಡ್ರಿ ಆಶಾ, ಬಸವಾಪುರದ ಶಶಿಕಲಾ, ಭೀಮನಕೆರೆಯ ಗಂಗಮ್ಮ, ದುಮ್ಮದ ಶಾಲಿನಿ, ಕುಡಗೇರಿಯ ರಶ್ಮಿ, ಕಾಳಿಕಾಪುರದ ಕವಿತಾ, ಪಿ ಕಲ್ಲುಕೊಪ್ಪದ ಪ್ರಭಾವತಿ, ಮಸಗಲ್ಲಿಯ ಪೂರ್ಣಿಮಾ, ಮಳವಳ್ಳಿ ಮತ್ತಿಕೊಪ್ಪದ ಶಿಲ್ಪ, ಮುಳುಗುಡ್ಡೆ ಶೀಲಾವತಿ ಮೊದಲಾದವರು ಪಾಲ್ಗೊಂಡಿದ್ದರು.

ಇಡಿ ಕಾರ್ಯಕ್ರಮವನ್ನು ಮಕ್ಕಳೇ ನಡೆಸುವ ಮೂಲಕ ಕಾರ್ಯಕ್ರಮಕ್ಕೆ ಕಳೆ ನೀಡಿದರು.

ಜಾಹಿರಾತು

LEAVE A REPLY

Please enter your comment!
Please enter your name here