ಚಿಕ್ಕಮಗಳೂರು: ದೇಶ ಕಂಡ ಮರೆಯಲಾಗದ ಗಾಯಕಿ ಅಲ್ಕಾ ಯಾಗ್ನಿಕ್ ಎಂದು ಚಿತ್ರಕಲಾವಿದೆ ಹಾಗೂ ಕರ್ನಾಟಕ ಲಲಿತಾ ಕಲಾ ಅಕಾಡೆಮಿಯ ಸದಸ್ಯೆ ಲಕ್ಷ್ಮಿ ಅರವಿಂದ್ ಹೇಳಿದರು.
ನಗರದ ಎಂ. ಇ. ಎಸ್. ಕಾಲೇಜಿನಲ್ಲಿ ಪೂರ್ವಿ ಸುಗಮ ಸಂಗೀತ ಅಕಾಡೆಮಿ ಹಾಗೂ ಯುರೇಕಾ ಅಕಾಡೆಮಿಯ ಸಹಯೋಗದಲ್ಲಿ ಆಯೋಜಿಸಿದ್ದ ಅಲ್ಕಾ ಯಾಗ್ನಿಕ್ ಗೀತ ಲಹರಿ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು
ಪೂರ್ವಿ ಸಂಸ್ಥೆ ನಗರದ ಗಾಯಕರಿಗೆ ಹಾಗೂ ಹೊರ ಜಿಲ್ಲೆಯ ಗಾಯಕರಿಗೆ ಉತ್ತಮ ವೇದಿಕೆಯನ್ನು ಕಲ್ಪಿಸಿಕೊಡುತ್ತಿರುವ ಸಂಸ್ಥೆಯಾಗಿದೆ. ಮುಂದಿನ ದಿನಗಳಲ್ಲಿ ಇಲ್ಲಿನ ಗಾಯಕರಿಗೆ ಹೆಚ್ಚಿನ ಅವಕಾಶ ದೊರೆತು ರಾಜ್ಯಾದ್ಯಂತ ಹಾಗೂ ದೇಶಾದ್ಯಂತ ಕಾರ್ಯಕ್ರಮ ನೀಡುವಂತಾಗಲೀ ಎಂದು ಹಾರೈಸಿದರು.
ಅಂಬಳೆಯ ಡಾ. ಬಿ. ಆರ್. ಅಂಬೇಡ್ಕರ್ ವಸತಿ ಶಾಲೆಯ ಪ್ರಾಂಶುಪಾಲೆ ದೀಪ ಮಾತಾನಾಡಿ ಕೆಲಸದ ಒತ್ತಡದ ನಡುವೆ ಸಂಗೀತವನ್ನು ಕೇಳುವುದು ಮನಸ್ಸಿಗೆ ಮುದ ನೀಡುತ್ತದೆ ಎಂದರು ತುಂಬಾ ಒಳ್ಳೆಯ ಹೊಸ ಪ್ರತಿಭೆಗಳು ಈ ಸಂಸ್ಥೆಯ ಮೂಲಕ ಹೊರಹೊಮ್ಮುತ್ತಿವೆ ಎಂದು ಹೇಳಿದರು.
ಗಾಯಕಿ ರೂಪ ಅಶ್ವಿನ್ ಅಧ್ಯಕ್ಷತೆ ವಹಿಸಿದ್ದರು, ಎಂ. ಎಸ್. ಸುಧೀರ್ ಸ್ವಾಗತಿಸಿ, ರಾಯನಾಯ್ಕ ವಂದಿಸಿದರು, ರೂಪ ನಾಯ್ಕ್ ನಿರೂಪಿಸಿದರು. ಗಾಯಕರಾದ ಎಂ. ಎಸ್. ಸುಧೀರ್, ರಾಯನಾಯಕ್, ವೆಂಕಟೇಶ್, ರೂಪ ಅಶ್ವಿನ್, ಚೈತನ್ಯ, ಸಾತ್ವಿಕ್, ಪಂಚಮಿ, ಬೆಂಗಳೂರಿನ ಅನುರಾಧ ಭಟ್, ಶ್ವೇತಾ ಭಾರದ್ವಾಜ್ ಅಲ್ಕಾ ಯಾಗ್ನಿಕ್ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು.
Related