ದೇಶ ಸೇವೆ ಮಾಡುವುದರಲ್ಲಿ ನನಗೆ ತೃಪಿಯಿದೆ: ಮಾಜಿ ಸೈನಿಕ ಧರ್ಮಪ್ಪ ಕೆ.ಬಿ.

0
747

ಹೊಸನಗರ: ದೇಶ ಸೇವೆ ಮಾಡುವುದರಲ್ಲಿ ನನಗೆ ತೃಪ್ತಿಯಿದೆ ಎಂದು ಮಾಜಿ ಸೈನಿಕ ಧರ್ಮಪ್ಪ ಕೆ.ಬಿಯವರು ಹೇಳಿದರು.

ತಾಲ್ಲೂಕಿನ ಬೇಹಳ್ಳಿ ಮುಂಬಾರು ಹಾಲಮ್ಮ ಬೈರನಾಯ್ಕ್ರವರ ಮನೆಯ ಆವರಣದಲ್ಲಿ ಮಾಜಿ ಸೈನಿಕರಾದ ಧರ್ಮಪ್ಪನವರಿಗೆ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿದ್ದು ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,‌ ನಾನು ಬಡ ಕುಟುಂಬದಲ್ಲಿ ಹುಟ್ಟಿ ನಮ್ಮ ತಂದೆ-ತಾಯಿಗಳ ಹಾಗೂ ನಮ್ಮ ಜೀವನ ನಿರ್ವಹಣೆಗಾಗಿ ಸೈನಿಕ ಕೆಲಸಕ್ಕೆ ಹೋಗಿದ್ದು ಆದರೆ ಅಲ್ಲಿಗೆ ಹೋದ ಮೇಲೆ ನನಗೆ ಅರಿವಾಯಿತ್ತು ಸೈನಿಕ ಕೆಲಸ ಮಾಡುವುದರಿಂದ ನಮ್ಮ ಜೀವನ ನಿರ್ವಹಣೆಯ ಜೊತೆಗೆ ದೇಶದ ಜನರ ಪ್ರಾಣ ರಕ್ಷಣೆ ಮಾಡಬಹುದು. ಆದ್ದರಿಂದ ಪ್ರತಿಯೊಂದು ಕುಟುಂಬದ ಒಬ್ಬಬ್ಬ ಮಕ್ಕಳನ್ನು ದೇಶದ ಹಿತಕ್ಕಾಗಿ ದೇಶ ಸೇವೆಗೆ ಕಳುಹಿಸಿ ನಮ್ಮ ದೇಶವನ್ನು ರಕ್ಷಿಸಬೇಕೆಂದು ಕೇಳಿಕೊಂಡರು.

ಈ ಸಮಾರಂಭದ ಅಧ್ಯಕ್ಷತೆಯನ್ನು ಹೊಸನಗರ-ಸಾಗರ ಕ್ಷೇತ್ರದ ಶಾಸಕರಾದ ಹರತಾಳು ಹಾಲಪ್ಪನವರು ವಹಿಸಿ ಧರ್ಮಪ್ಪನವರಿಗೆ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ತೀರ್ಥಹಳ್ಳಿ ಶಾಸಕರಾದ ಆರಗ ಜ್ಞಾನೇಂದ್ರ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಕಲಗೋಡು ರತ್ನಾಕರ್, ಸುರೇಶ್ ಸ್ವಾಮಿರಾವ್, ಸ್ವಾಮಿರಾವ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಆಲವಳ್ಳಿ ವೀರೇಶ್, ಎರಗಿ ಉಮೇಶ್, ಸಾಗರ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸುವರ್ಣ ಟೀಕಪ್ಪ, ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷರಾದ ಲೇಕನಮೂರ್ತಿ, ಡಾ|| ಸುರೇಶ್, ರೈತ ಹೋರಾಟಗಾರರಾದ ಶಿವರಾಮ್, ಮಾಜಿ ಸೈನಿಕರಾದ ಉಮೇಶ್ ಕೊಡಸೆ, ಯೋಗೇಶ್ ಹಾಗೂ ಚೌಡಪ್ಪ ಹುಂಚರೋಡ್ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು ಊರಿನ ಪ್ರಮುಖರು ಉಪಸ್ಥಿತರಿದ್ದರು.

ವರದಿ: ಹೆಚ್.ಎಸ್.ನಾಗರಾಜ್
ಜಾಹಿರಾತು

LEAVE A REPLY

Please enter your comment!
Please enter your name here