ದ್ವಿತೀಯ ಪಿಯು ರಿಸಲ್ಟ್ ; ಶಿವಮೊಗ್ಗ ಜಿಲ್ಲೆಯ ಟಾಪರ್’ಗಳ ಪಟ್ಟಿ ಬಿಡುಗಡೆ

0
777

ಶಿವಮೊಗ್ಗ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲೆ ರಾಜ್ಯ ಮಟ್ಟದಲ್ಲಿ 8ನೇ ಸ್ಥಾನದಲ್ಲಿದ್ದು, ಯಥಾಸ್ಥಿತಿಯನ್ನು ಕಾಯ್ದುಕೊಂಡಿದೆ.

ಶೇ.70.14ರಷ್ಟು ಉತ್ತೀರ್ಣ:

ಒಟ್ಟು 19033 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಶೇ.70.14ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪರೀಕ್ಷೆ ಬರೆದ ಬಾಲಕರಲ್ಲಿ ಶೇ.59.49 ಮಂದಿ ಉತ್ತೀರ್ಣಗೊಂಡಿದ್ದರೆ, ಹಾಜರಾದ ವಿದ್ಯಾರ್ಥಿನಿಯರಲ್ಲಿ ಶೇ.71.71ರಷ್ಟು ಮಂದಿ ಉತ್ತೀರ್ಣರಾಗಿದ್ದಾರೆ. ಎಂದಿನಂತೆ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.

ಇಂಗ್ಲೀಷ್ ಮಾಧ್ಯಮದಲ್ಲಿ ಬರೆದ ವಿದ್ಯಾರ್ಥಿಗಳಲ್ಲಿ ಶೇ.72.60 ಮಂದಿ ಮತ್ತು ಕನ್ನಡ ಮಾಧ್ಯಮದಲ್ಲಿ ಬರೆದ ವಿದ್ಯಾರ್ಥಿಗಳ ಪೈಕಿ ಶೇ. 56.59 ಮಂದಿ ಉತ್ತೀರ್ಣರಾಗಿದ್ದಾರೆ. ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಲ್ಲಿ ಶೇ.53.56 ರಷ್ಟು ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಲ್ಲಿ ಶೇ.55.20 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಹೆಚ್ಚು ತೇರ್ಗಡೆ:

ವಿಜ್ಞಾನ ವಿಭಾಗದಲ್ಲಿ ಶೇ.74.68 ರಷ್ಟು, ವಾಣಿಜ್ಯ ವಿಭಾಗದಲ್ಲಿ ಶೇ.67.50 ಮತ್ತು ಕಲಾ ವಿಭಾಗದಲ್ಲಿ 55.84 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, ಗ್ರಾಮೀಣ ಪ್ರದೇಶದ ಶೇ.65.98 ಮತ್ತು ಪಟ್ಟಣ ಪ್ರದೇಶದ ಶೇ.66.21ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಟಾಪರ್’ಗಳ ಪಟ್ಟಿ :

ಜಾಹಿರಾತು

LEAVE A REPLY

Please enter your comment!
Please enter your name here