ದ್ವಿತೀಯ ಪಿಯು ವಿಜ್ಞಾನ ವಿಭಾಗದ ಕಂಪ್ಯೂಟರ್ ಸೈನ್ಸ್‌ನಲ್ಲಿ ಸೌರಭ್ ರವರಿಗೆ 100 ಅಂಕ ; ಅಭಿನಂದನೆ

0
337

ಹೊಸನಗರ: ಹೊಸನಗರದ ಗಜಾನನ ಬಸ್ ಏಜೆಂಟರಾದ ಕುಮಾರ ಹೆಚ್.ಆರ್ ಮತ್ತು ವಿಜಯಲಕ್ಷ್ಮಿ ದಂಪತಿಗಳ ಪುತ್ರರಾದ ಸೌರಭ್ ಹೆಚ್ ಆರ್‌ರವರು 2022ನೇ ಸಾಲೀನ ದ್ವಿತೀಯ ಪಿಯುಸಿಯಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ 100ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ.

ಇವರು ದೇವರ್ಸ ವಠಾರದ ವಾಸಿಯಾಗಿದ್ದು ಕನ್ನಡದಲ್ಲಿ 94 ಅಂಕ, ಇಂಗ್ಲೀಷ್‌ನಲ್ಲಿ 92 ಅಂಕ, ಭೌತಶಾಸ್ತ್ರದಲ್ಲಿ 89, ಅರ್ಥಶಾಸ್ತ್ರದಲ್ಲಿ 89 ಅಂಕ, ಗಣಿತದಲ್ಲಿ 99 ಅಂಕ ಹಾಗೂ ಕಂಪ್ಯೂಟರ್ ಸೈನ್ಸ್‌ನಲ್ಲಿ 100ಕ್ಕೆ 100 ಅಂಕಗಳನ್ನು ಪಡೆದಿರುತ್ತಾರೆ.

ಅಭಿನಂದನೆ:

ದ್ವಿತೀಯ ಪಿಯುಸಿಯಲ್ಲಿ ಅದರಲ್ಲಿಯೂ ಕಂಪ್ಯೂಟರ್ ಸೈನ್ಸ್‌ನಲ್ಲಿ 100ಕ್ಕೆ 100 ಅಂಕಗಳನ್ನು ಪಡೆದಿದ್ದು ಇವರನ್ನು ಹೊಸನಗರದ ಕೋಟೆಗಾರ್ ವಿದ್ಯಾವರ್ಧಕ ಸಂಘದ ಗೌರವಾಧ್ಯಕ್ಷರಾದ ಬಿ.ಗೋವಿಂದಪ್ಪ, ಅಧ್ಯಕ್ಷರಾದ ಶಶಿಧರ್ ನಾಯ್ಕ್, ಕಾರ್ಯದರ್ಶಿ ಹೆಚ್.ಆರ್ ಸುರೇಶ್, ನಿರ್ದೆಶಕರಾದ ಗುತ್ತಿಗೆದಾರರಾದ ಕೆಂಚನಮನೆ ಮಹಾಬಲ ಹಾಗೂ ಎಲ್ಲ ನಿರ್ದೆಶಕ ಸದಸ್ಯರು ಅಭಿನಂದಿಸಿ ಮುಂದಿನ ದಿನದಲ್ಲಿ ಇನ್ನೂ ಹೆಚ್ಚು ಅಂಕಗಳನ್ನು ಪಡೆಯಲಿ ಎಂದು ಹಾರೈಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here