ಧನ್ವಂತರಿ ಆಸ್ಪತ್ರೆಯ ನಿರ್ಮಾಣಕ್ಕೆ 2 ಕೋಟಿ ರೂ. ಚೆಕ್ ಹಸ್ತಾಂತರ

0
284

ಶೃಂಗೇರಿ: ಶೃಂಗೇರಿಯ ಶಾರದಾ ಪೀಠಂ ಚಾರಿಟೇಬಲ್ ಟ್ರಸ್ಟ್‌ನಿಂದ ನಿರ್ಮಾಣ ಅಗಲಿರುವ ಧನ್ವಂತರಿ ಆಯುರ್ವೇದ ಆಸ್ಪತ್ರೆಗೆ ಕಾರ್ಪೊರೇಟ್ ಸಾಮಾಜಿಕ ಸಹಾಯದ ಅಡಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಸುಮಾರು ಎರಡು ಕೋಟಿ ರೂಪಾಯಿಗಳನ್ನು ದೇಣಿಗೆ ಚೆಕ್ ಅನ್ನು ಶೃಂಗೇರಿ ಮಠದ ಶ್ರೀ ವಿಧುಶೇಖರ ಭಾರತೀ ತೀರ್ಥ ಸ್ವಾಮೀಜಿರವರಿಗೆ ಬ್ಯಾಂಕ್‌ನ ಹಿರಿಯ ಜನರಲ್ ಮ್ಯಾನೇಜರ್ ಶಾಂತನು ಸಿ ಪೆಂಡ್ಸೆರವರು ಹಸ್ತಾಂತರಿಸಿದರು.

ಚೆಕ್ ಸ್ವೀಕರಿಸಿ ಮಾತನಾಡಿದ ಶ್ರೀ ವಿಧುಶೇಖರ ಭಾರತೀ ತೀರ್ಥ ಸ್ವಾಮೀಜಿಯವರು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಈ ದೇಣಿಗೆಯಿಂದ ಆಸ್ಪತ್ರೆ ಕಾರ್ಯ ವೇಗವಾಗಿ ನಡೆಯಲ್ಲಿದ್ದು ಬ್ಯಾಂಕಿನ ಅಧಿಕಾರಿಗಳಿಗೆ ಧನ್ಯವಾದಗಳನ್ನು ಸಲ್ಲಿಸುವೆ, ಇದೆ ರೀತಿಯಲ್ಲಿ ಇತರರು ಸಹ ಆಸ್ಪತ್ರೆ ನಿರ್ಮಾಣಕ್ಕೆ ದೇಣಿಗೆಯನ್ನು ನೀಡಬೇಕೆಂದು ವಿನಂತಿಸುತ್ತೇನೆ ಎಂದರು.

ಬ್ಯಾಂಕಿನ ಜನರಲ್ ಮ್ಯಾನೇಜರ್ ಶಾಂತನು ಸಿ ಪೆಂಡ್ಸೆ ಮಾತನಾಡಿ, ಸಾಮಾಜಿಕ ಕಾರ್ಯಕ್ಕೆ ಶಾರದಾ ಪೀಠವು ಉತ್ತಮವಾದ ಕೊಡುಗೆಯನ್ನು ನೀಡುತ್ತಿದ್ದು ಆಯುರ್ವೇದ ಆಸ್ಪತ್ರೆ ನಿರ್ಮಾಣದಿಂದ ಸಾರ್ವಜನಿಕರಿಗೆ ಅನೂಕುಲ ಆಗಲಿದ್ದು, ಈ ಕಾರ್ಯಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಒಂದು ಸಣ್ಣ ದೋಣಿಯಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಂಗಳೂರು ಸರ್ಕಲ್ ಕಛೇರಿಯ ಮುಖ್ಯ ಜನರಲ್ ಮ್ಯಾನೇಜರ್ ನಂದ ಕಿಶೋರ್, ಚಿಕ್ಕಮಗಳೂರು ಪ್ರಾದೇಶಿಕ ಕಛೇರಿಯ ಮುಖ್ಯ ವ್ಯವಸ್ಥಾಪಕರು ಕೃಷ್ಣ ಜಿ, ಶೃಂಗೇರಿ ಶಾರದಾ ಪೀಠದ ಆಡಳಿತಾಧಿಕಾರಿ ಗೌರಿಶಂಕರ್, ಮಂಗಳೂರು ಸರ್ಕಲ್ ಕಛೇರಿಯ ಪು ಪ್ರಧಾನ ವ್ಯವಸ್ಥಾಪಕರದ ರಾಜೇಶ್ ಗುಪ್ತಾ, ಚಿಕ್ಕಮಗಳೂರು ಉಪ ವ್ಯವಸ್ಥಾಪಕರದ ಅಮೀತ್ ನಾವೆಲ್ ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here