ಧರೆಗುರುಳಿದ ಮರ ; ಆಗುಂಬೆ ಘಾಟಿಯಲ್ಲಿ ಕೆಲಕಾಲ ಬಂದ್ ಆದ ವಾಹನಗಳ ಸಂಚಾರ

0
279

ತೀರ್ಥಹಳ್ಳಿ: ಮರ ಧರೆಗುರುಳಿ ಆಗುಂಬೆ ಘಾಟಿಯಲ್ಲಿ ಕೆಲಕಾಲ ವಾಹನ ಸಂಚಾರ ಬಂದ್ ಆಗಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಮರ ತೆರವು ಮಾಡಿದ್ದಾರೆ.

ಆಗುಂಬೆ ಘಾಟಿಯ ಮೂರನೇ ತಿರುವಿನಲ್ಲಿ ಬುಧವಾರ ಬೆಳಗ್ಗೆ ಮರವೊಂದು ಧರೆಗುರುಳಿತ್ತು. ಅದೃಷ್ಟವಶಾತ್ ಯಾವುದೆ ಅಪಾಯ ಸಂಭವಿಸಿಲ್ಲ. ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದ್ದರಿಂದ ವಾಹನ ಸಂಚಾರ ವ್ಯತ್ಯಯ ಉಂಟಾಗಿತ್ತು. ಘಾಟಿಯಲ್ಲಿ ಕೆಲವು ಹೊತ್ತು ಟ್ರಾಫಿಕ್ ಜಾಮ್ ಉಂಟಾಗಿತ್ತು. ಅಡ್ಡಲಾಗಿ ಬಿದ್ದಿದ್ದ ಮರದ ಕೆಳಗೆ ಸ್ವಲ್ಪ ಜಾಗವಿದ್ದಿದ್ದರಿಂದ ಕಾರುಗಳು, ಬೈಕುಗಳು ಸಂಚರಿಸಿದವು.

ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಮರವನ್ನು ಕತ್ತರಿಸಿದರು. ಆ ಬಳಿಕ ವಾಹನ ಸಂಚಾರ ಪುನಾರಂಭವಾಯಿತು.

ಜಾಹಿರಾತು

LEAVE A REPLY

Please enter your comment!
Please enter your name here