ರಿಪ್ಪನ್ಪೇಟೆ: ದೇಶದ ಅಶಾಂತಿ ತಾಂಡವಾಡುತ್ತಿದ್ದು ಕೊರೊನಾ ಮಹಾಮಾರಿಯಿಂದಾಗಿ ಜಗತ್ತು ತಲ್ಲಣಗೊಂಡಿದ್ದು ಜನರು ತಮ್ಮ ಆರೋಗ್ಯದ ರಕ್ಷಣೆಗೆ ಜಾಗೃತರಾಗಬೇಕು. ಧರ್ಮದ ಪರಿಪಾಲನೆಯಿಂದಾಗಿ ಶಾಂತಿ ನೆಮ್ಮದಿಯೊಂದಿಗೆ ಸುಸಂಸ್ಕೃತ ಸಮಾಜದ ನಿರ್ಮಾಣಕ್ಕೆ ನಾವುಗಳು ಕಟ್ಟಿಬದ್ದರಾಗಬೇಕು ಎಂದು ಕೋಣಂದೂರು ಬೃಹನ್ಮಠದ ಷ.ಬ್ರ.ಶ್ರೀಪತಿಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಜಿ ಹೇಳಿದರು.
ಶಿವಪುರ ಗ್ರಾಮದಲ್ಲಿನ ಇತಿಹಾಸ ಪ್ರಸಿದ್ದ ಈಶ್ವರ ಬಸವೇಶ್ವರ ಪರಿವಾರ ದೇವರುಗಳ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ರುದ್ರಾಭಿಷೇಕ ಮತ್ತು ಧರ್ಮಸಭೆಯ ದಿವ್ಯಸಾನಿಧ್ಯವನ್ನು ವಹಿಸಿ ಅವರು ಆಶೀರ್ವಚನ ನೀಡಿದರು.
ಈ ಸಮಾರಂಭದಲ್ಲಿ ಗ್ರಾಮಸ್ಥರು ಹಾಗೂ ಸಂಬಂಧಿಕರು ಪಾಲ್ಗೊಂಡಿದ್ದರು.
Related