ಧರ್ಮ ಸಂಸ್ಕಾರ ಆಚರಣೆಯಿಂದ ಶಾಂತಿ ನೆಮ್ಮದಿ ಸಾಧ್ಯ

0
230

ರಿಪ್ಪನ್‌ಪೇಟೆ: ಇತ್ತೀಚಿನ ದಿನಮಾನದಲ್ಲಿ ಮನುಷ್ಯನಿಗೆ ಶಾಂತಿ ಸಮದಾನ ಮಾಯವಾಗುವಂತ ದಿನದಲ್ಲಿ ಎಷ್ಟೇ ಮನುಷ್ಯ ಮುಂದುವರಿದರೂ ಧರ್ಮ ಸಂಸ್ಕಾರಗಳ ಆಚರಣೆಯಿಂದ ಶಾಂತಿ ಸಮಾದಾನ ಸಾಧ್ಯ ಹೊಂದಲು ಸಾಧ್ಯವಾಗುತ್ತದೆಂದು ಕೋಣಂದೂರು ಬೃಹನ್ಮಠದ ಷ.ಬ್ರ.ಶ್ರೀಪತಿಪಂಡಿತಾರಾಧ್ಯಾ ಶಿವಾಚಾರ್ಯ ಮಹಾಸ್ವಾಮಿಜಿ ಹೇಳಿದರು.

ಕೆರಗೋಡು ಗ್ರಾಮದಲ್ಲಿನ ಶ್ರೀಬೈರವೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಇಷ್ಟಲಿಂಗ ಮಹಾಪೂಜೆ ಹಾಗೂ ಧರ್ಮಸಭೆಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ಮನಸ್ಸಿಗೆ ಶಾಂತಿ ದೊರಕುವುದು. ಮನುಷ್ಯ ಯಂತ್ರದ ಜೊತೆ ಹೋಗುವುದರಿಂದ ಧರ್ಮಪಾಲನೆಯಿಂದ ವಿಮುಖನಾಗುತ್ತಿದ್ದಾನೆಂದು ವಿಷಾದ ವ್ಯಕ್ತಪಡಿಸಿದ ಶ್ರೀಗಳು, ಧರ್ಮದ ತಳಹದಿಯ ಮೇಲೆ ಮುನ್ನಡೆದರೆ ಜೀವನ ಸಾರ್ಥಕತೆಗೊಳ್ಳಲಿದೆ ಈ ನಿಟ್ಟಿನಲ್ಲಿ ಪ್ರತಿವರ್ಷ ಕೆರಗೋಡು ಶ್ರೀ ಭೈರವೆಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಎಲ್ಲ ಭಕ್ತರು ಸೇರಿ ತಮ್ಮ ಭಕ್ತಿಯ ಸಮರ್ಪಣೆ ಶ್ರೀಗಳ ಇಷ್ಟಲಿಂಗ ಪೂಜೆ ತೀರ್ಥ ಪ್ರಸಾದ ಸಮರ್ಪಣಾ ಕಾರ್ಯಕ್ರಮ ಜರುಗಿಸಿ ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ಜಂಬಳ್ಳಿ ಜೆ.ಎಂ.ಶಾಂತಕುಮಾರ್, ಗಿರೀಶ್‌ ಜಂಬಳ್ಳಿ, ಕೆರಗೋಡು ಶಿವಕುಮರ್, ಶಿವಪ್ಪಗೌಡ, ಮಳವಲ್ಳಿ ಗಂಗಧರ, ಜಯಪ್ಪಗೌಡ, ಚನ್ನಪ್ಪಗೌಡ, ಕೆರಗೋಡು, ಜಂಬಳ್ಳಿ, ಮಳವಳ್ಳಿ ಇನ್ನಿತರ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here