ನಕ್ಸಲ್ ನಾಯಕ ಬಿ.ಜಿ ಕೃಷ್ಣಮೂರ್ತಿ ಮತ್ತು ಸಾವಿತ್ರಿ ಕೇರಳ ಪೊಲೀಸ್ ಬಲೆಗೆ !

0
792

ಚಿಕ್ಕಮಗಳೂರು : ಮಲೆನಾಡು ಭಾಗದಲ್ಲಿ ನಕ್ಸಲ್ ಚಳುವಳಿಯ ಮುಂಚೂಣಿ ನಾಯಕ ಬಿ.ಜಿ ಕೃಷ್ಣಮೂರ್ತಿ ಹಾಗೂ ಸಾವಿತ್ರಿಯನ್ನು ಕೇರಳ ಪೊಲೀಸರು ಬಂಧಿಸಿರುವ ಬಗ್ಗೆ ವರದಿಯಾಗಿದೆ.

ಮಂಗಳವಾರ ಸಂಜೆಯ ವೇಳೆ ಕೇರಳದ ಸುಲ್ತಾನಬತ್ತೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂಧಿಸಿದ್ದಾರೆ ಎನ್ನಲಾಗಿದ್ದು, ನಕ್ಸಲ್‌ ಹೋರಾಟದ ಮುಂಚೂಣಿಯ ನಾಯಕತ್ವ ವಹಿಸಿದ ಸುಮಾರು 2003 ರಿಂದಲೂ ಭೂಗತನಾಗಿದ್ದ ಬಿ.ಜಿ. ಕೃಷ್ಣಮೂರ್ತಿ ಬಂಧಿಸಲಾಗಿದೆ.

2018ರಲ್ಲಿ ತನ್ನ ತಂದೆ ಗೋಪಾಲ ರಾವ್‌ (81) ನಿಧನರಾದಾಗಲೂ ಸಹ ಕೃಷ್ಣಮೂರ್ತಿ ಅಂತ್ಯಕ್ರಿಯೆಯಲ್ಲಿ ಭಾಗಿವಹಿರಲಿಲ್ಲ.

ತಾಲ್ಲೂಕಿನ ಬುಕ್ಕಡಿಬೈಲಿನಲ್ಲಿ ಬಿ.ಜಿ.ಕೃಷ್ಣಮೂರ್ತಿ ಶೃಂಗೇರಿಯ ಜೆಸಿಬಿಎಂ ಕಾಲೇಜಿನಲ್ಲಿ ಪದವಿ ಮುಗಿಸಿದ ನಂತರ ಶಿವಮೊಗ್ಗದಲ್ಲಿ ಎಲ್‌ಎಲ್‌ಬಿ ಪದವಿಯನ್ನು ಪಡೆದಿದ್ದರು. ವಿದ್ಯಾರ್ಥಿಯಾಗಿದ್ದ ಸಮಯದಿಂದಲೂ ಮಾವೋ ವಿಚಾರಧಾರೆಯಿಂದ ಪ್ರಭಾವಿತರಾಗಿದ್ದ ಕೃಷ್ಣಮೂರ್ತಿ, 2000ರಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನ ವಿರೋಧಿ ಹೋರಾಟ ಸಂದರ್ಭದಲ್ಲಿ ಚುರುಕುಗೊಂಡ ನಕ್ಸಲ್‌ ಚಟುವಟಿಕೆಗೆ ಸೇರ್ಪಡೆಗೊಂಡ ಬಿ.ಜಿ.ಕೃಷ್ಣಮೂರ್ತಿ ಮತ್ತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ.

ಸದ್ಯ 48 ವರ್ಷದ ಬಿ.ಜಿ ಕೃಷ್ಣಮೂರ್ತಿ ಮೇಲೆ ರಾಜ್ಯದ ಅನೇಕ ಪೋಲಿಸ್ ಠಾಣೆಯಲ್ಲಿ ಸುಮಾರು 53 ಕೇಸ್ ಗಳಿದ್ದು, ಸುಳಿವು ಕೊಟ್ಟವರಿಗೆ ಬಹುಮಾನವನ್ನು ಸಹ ಘೋಷಿಸಲಾಗಿತ್ತು. ಜೊತೆಗೆ ಬಂಧಿಸಲಾಗಿರುವ 36 ವರ್ಷದ ಸಾವಿತ್ರಿ ಮೇಲೆಯೂ 22 ಪ್ರಕರಣಗಳಿದ್ದು, ಕೆಲ ವರ್ಷಗಳು ಮಲೆನಾಡು ಹಾಗೂ ಪಶ್ಚಿಮಘಟ್ಟ ಪ್ರದೇಶದಲ್ಲಿ ನಕ್ಸಲ್ ಚಟುವಟಿಕೆಯು ಪ್ರಬಲವಾಗಿತ್ತು.

ಈ ಹಿಂದೆ ನಕ್ಸಲ್ ನಾಯಕಿಯಾಗಿದ್ದ ಕನ್ಯಾಕುಮಾರಿಯಿಂದ ಹಿಡಿದು ನೂರ್ ಶ್ರೀಧರ್, ನಿಲ್ಗುಳಿ ಪದ್ಮನಾಭ ವರೆಗಿನ ಸುಮಾರು 15 ಮಂದಿ ನಕ್ಸಲರು ಶರಣಾಗತಿ ಮೂಲಕ ಚಳವಳಿಯಿಂದ ಮುಖ್ಯವಾಹಿನಿಗೆ ಮರಳಿದ ಪರಿಣಾಮ ಮಲೆನಾಡು ಹಾಗೂ ಪಶ್ಚಿಮಘಟ್ಟ ಪ್ರದೇಶದಲ್ಲಿ ನಕ್ಸಲ್ ಚಟುವಟಿಕೆ ದುರ್ಬಲಗೊಂಡಿತ್ತು.

ಪಕ್ಕದ ಕೇರಳ ರಾಜ್ಯದಲ್ಲಿ ಈ ನಾಯಕರು ಕೇಂದ್ರಿಕೃತಗೊಂಡು ಭೂಗತರಾಗಿ ನಕ್ಸಲ್ ಚಟುವಟಿಕೆ ನಡೆಸುತ್ತಿದ್ದು ಪೊಲೀಸರಿಗೆ ಸಿಂಹ ಸ್ವಪ್ನವಾಗಿ ಕಾಡುತ್ತಿರುತ್ತಿದ್ದರು.

ಬಂಧಿತ ಇಬ್ಬರೂ ಚಿಕ್ಕಮಗಳೂರು ಜಿಲ್ಲೆಯವರು ಆಗಿರುವುದರಿಂದ ಹೆಚ್ಚಿನ ವಿಚಾರಣೆಗೆ ಜಿಲ್ಲೆಗೆ ಕರೆತರುವ ಸಾಧ್ಯತೆಗಳು ಇದ್ದು, ಜಿಲ್ಲೆಯ ಪೊಲೀಸರು ಕೇರಳ ಪೊಲೀಸರು ನಿರಂತರ ಸಂಪರ್ಕದಲ್ಲಿದ್ದಾರೆ ಎಂಬ ಮಾಹಿತಿ ದೊರೆತ್ತಿದೆ.

ಜಾಹಿರಾತು

LEAVE A REPLY

Please enter your comment!
Please enter your name here