ನಗರದ ದರ್ಗಾದಲ್ಲಿ ಉರೂಸ್ ಸರಳ ರೀತಿಯಲ್ಲಿ ಆಚರಣೆ: ಎನ್. ವಿನಾಯಕ ಉಡುಪ

0
413

ಹೊಸನಗರ: ಬಹಳಷ್ಟು ವರ್ಷಗಳಿಂದ ಹೊಸನಗರ ತಾಲ್ಲೂಕು ನಗರದ ಹಝ್ರುತ್ ಶೈಖುಲ್ ಅಕ್ಬರ್ ಅನ್ವರ್ ಮಸುಂಷಾ ವಲೀಯುಲ್ಲಾಹಿರವರ 47ನೇ ಉರೂಸ್ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಿಕೊಂಡು ಬರುತ್ತಿದ್ದು ಈ ಬಾರೀ ಏಪ್ರಿಲ್ 2ನೇ ಶುಕ್ರವಾರದಿಂದ 5ನೇ ಸೋಮವಾರ ಉರೂಸ್ ಸಮಾರಂಭವನ್ನು ನಡೆಸಲು ತೀರ್ಮಾನಿಸಲಾಗಿದ್ದು ಆದರೆ ದೇಶದಲ್ಲಿ ಕೊರೊನಾ ಅಲೆ ಅಬ್ಬರವಾಗಿ ಹಬ್ಬುತ್ತಿರುವುದರಿಂದ ಏಪ್ರಿಲ್ 2ನೇ ಶುಕ್ರವಾರದಿಂದ 5ನೇ ತಾರೀಖು ಸೋಮವಾರದವರೆವಿಗೆ ಏರ್ಪಡಿಸಿರುವ ಉರೂಸ್ ಕಾರ್ಯಕ್ರಮವನ್ನು ಸರಳ ರೀತಿಯಲ್ಲಿ ಆಚರಿಸಲು ಕಮಿಟಿರಯಲ್ಲಿ ತೀರ್ಮಾನಿಸಿರುತ್ತೇವೆ ಎಂದು ಉರೂಸ್ ಸಮಿತಿಯ ಅಧ್ಯಕ್ಷರಾದ ಎನ್. ವಿನಾಯಕ ಉಡುಪರವರು ಹೇಳಿದರು.

ತಾಲ್ಲೂಕಿನ ನಗರದ ದರ್ಗಾದ ಆವರಣದಲ್ಲಿ ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ನಾವು ಈ ಬಾರೀ ಅದ್ಧೂರಿಯಾಗಿ ಉರೂಸ್ ಆಚರಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದ್ದು ಅದೇ ಪ್ರಕಾರವಾಗಿ ಮುದ್ರಣ ಪತ್ರವನ್ನು ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯಗಳಿಗೆ ಕಳುಹಿಸಲಾಗಿದ್ದು ಆದರೆ ಮಾರ್ಚ್ 25ರಂದು ಸರ್ಕಾರದ ಸೂತ್ತೋಲೆಯ ಪ್ರಕಾರ ನಾವು ಅದ್ದೂರಿಯಾಗಿ ಉರೂಸ್ ಆಚರಿಸಲು ಸಾಧ್ಯವಿಲ್ಲವಾಗಿದೆ. ಈ ಬಾರಿ ಯಾರು ಹೊರ ತಾಲ್ಲೂಕು ಜಿಲ್ಲೆ ಅಥವಾ ರಾಜ್ಯದಿಂದ ಉರೂಸ್ ಧಾರ್ಮಿಕ ಕಾರ್ಯಕ್ರಮಕ್ಕೆ ಬರಬೇಡಿ, ಬಂದರೆ ನೀವೆ ಜವಬ್ದಾರರಾಗಿದ್ದು ನಾವು ಸಾಂಕೇತಿಕವಾಗಿ ಕಮಿಟಿಯವರೇ ಸೇರಿ ಧಾರ್ಮಿಕ ಕಾರ್ಯಕ್ರಮ ನೆರವೇರಿಸುತ್ತೇವೆ. ಈ ಬಾರಿಯ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ. ಉಳಿಯುವ ವ್ಯವಸ್ಥೆಯಿಲ್ಲ ಯಾವುದೇ ಮನರಂಜನ ಕಾರ್ಯಕ್ರಮಗಳು ಸಾರ್ವಜನಿಕರಿಗೆ ಪೂಜಾ ಕಾರ್ಯಕ್ರಮಗಳು ಇರುವುದಿಲ್ಲ ಕೊರೊನಾ ದೇಶದಿಂದ ಮುಕ್ತಿಯಾದ ಮೇಲೆ ಬಂದು ದೇವರ ದರ್ಶನ ಮಾಡಬೇಕೆಂದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ದರ್ಗಾ ಸಮಿತಿಯ ಅಧ್ಯಕ್ಷರಾದ ಹಾಜೀ ಮಹಮ್ಮದ್, ಕಾರ್ಯದರ್ಶಿ ಕಚಿಗೆಬೈಲು ಸಾಧಿಕ್ ಅಲೀ, ಗೂಳ್ವಡಿ ಮಹಮದ್ ಸಾಬ್, ಕೋಶಾಧಿಕಾರಿ ನಿಟ್ಟೂರು ಅಬ್ದುಲ್ಲ, ಸದಸ್ಯರಾದ ರಿಪ್ಪನ್‌ಪೇಟೆ ಚಾಬುಸಾಬ್, ಇಸೂಬ್‌ಸಾಬ್, ರಹಿಮಾನ್, ಅಬ್ಬಾಸ್, ಯುಸೂಫ್‌ಸಾಬ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ವರದಿ: ಹೆಚ್.ಎಸ್.ನಾಗರಾಜ್
ಜಾಹಿರಾತು

LEAVE A REPLY

Please enter your comment!
Please enter your name here