‘ನಮ್ಮ ಜಮೀನಿನಲ್ಲಿ ಮದ್ಯಪಾನ ಮಾಡಬೇಡಿ ಬೇರೆ ಕಡೆ ಹೋಗಿ’ ಎಂದಿದ್ದಕ್ಕೆ ಬೀಯರ್ ಬಾಟಲಿಯಿಂದ ಹಲ್ಲೆ !

0
731

ರಿಪ್ಪನ್‌ಪೇಟೆ: ನಮ್ಮ ಜಮೀನಿನಲ್ಲಿ ಮದ್ಯಪಾನ ಮಾಡಬೇಡಿ ಬೇರೆ ಕಡೆ ಹೋಗಿ ಎಂದಿದ್ದಕ್ಕೆ ಜಮೀನು ಮಾಲೀಕನ ಮೇಲೆ ಇಬ್ಬರು ಯುವಕರು ಹಲ್ಲೆ ನಡೆಸಿದ ಘಟನೆ ಇಲ್ಲಿನ ಕೆರೆಹಳ್ಳಿ ಗ್ರಾಮದಲ್ಲಿ ನಡೆದಿದೆ.

ಘಟನಾ ವಿವರ :

ಜೂ.07 ರಂದು ಕೆರೆಹಳ್ಳಿ ನಿವಾಸಿ ಸತೀಶ್ (53) ಎಂಬುವವರು ಮಧ್ಯಾಹ್ನ 12;20 ಸುಮಾರಿಗೆ ತಮ್ಮ ಜಮೀನು ಸರ್ವೇ ನಂ:24/4 ರಲ್ಲಿ ಶುಂಠಿಯನ್ನು ಬಿತ್ತನೆ ಮಾಡಲು ಪಟ್ಟೆ ಮಾಡುತ್ತಿದ್ದಾಗ ಅವರ ಜಮೀನಿನಲ್ಲಿ ಇಬ್ಬರು ಹುಡುಗರು ಮದ್ಯಪಾನ ಮಾಡುತ್ತಾ ಊಟವನ್ನು ಮಾಡುತ್ತಿದ್ದರು, ಆಗ ಸತೀಶ್ ಅವರಿಗೆ ‘ಇಲ್ಲಿ ಮದ್ಯಪಾನ ಮಾಡಬೇಡಿ ಬೇರೆ ಕಡೆಗೆ ಹೋಗಿ’ ಎಂದು ಹೇಳಿದಾಗ ಅವರು ‘ಆಯ್ತು’ ಅಂತಾ ಹೇಳಿದ್ದರಿಂದ ಸತೀಶ್ ಜಮೀನಿನಲ್ಲಿ ಕೆಲಸವನ್ನು ಮುಂದುವರೆಸಿದ್ದು, ನಂತರ ಮಧ್ಯಾಹ್ನ 12-45 ಸುಮಾರಿಗೆ ಅವರಿಬ್ಬರು ಬೀಯರ್ ಬಾಟಲಿಗಳನ್ನು ಜಮೀನಿನಲ್ಲಿ ಒಡೆಯುತ್ತಿದ್ದಾಗ ಸತೀಶ್ ರವರು ಅವರ ಬಳಿಗೆ ಹೋಗಿ ‘ಬಾಟಲಿಯನ್ನು ತಮ್ಮ ಜಮೀನಿನಲ್ಲಿ ಒಡೆಯಬೇಡಿ ಗಾಜಿನ ಚೂರುಗಳಿಂದ ತೊಂದರೆ ಆಗುತ್ತದೆ’ ಎಂದು ಹೇಳುತ್ತಿದ್ದಾಗ ಅವರಲ್ಲಿ, ಒಬ್ಬ ಹುಡುಗ ಸತೀಶ್ ಮೇಲೆ ತನ್ನ ಕೈಯಲಿದ್ದ ಬೀಯರ್ ಬಾಟಲಿಯಿಂದ ಬಲವಾಗಿ ಎಡಗೆನ್ನೆಗೆ ಹೊಡೆದು ಗಾಯಪಡಿಸಿದ್ದು, ಮತ್ತೆ ಹೊಡೆಯಲು ಬಂದಾಗ ಸತೀಶ್ ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಆಗ ಆತನು ಕೈಯಿಂದ ಸತೀಶ್ ಎಡ ಎದೆಗೆ ಗುದ್ದಿ ಸತೀಶ್ ಹಿಂಭಾಗ ತಿರುಗಿಕೊಂಡಾಗ ಇನ್ನೊಬ್ಬ ಹುಡುಗ ಕೈಯಿಂದ ಬೆನ್ನಿಗೆ ಹೊಡೆದ್ದಾನೆ. ಆಗ ಸತೀಶ್ ಜೋರಾಗಿ ಕೂಗಿಕೊಳ್ಳುತ್ತಿದ್ದಾಗ ಅಲ್ಲೆ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಸಂದೀಪ್ ಮತ್ತು ಮುರುಳೀಧರ್ ಎಂಬುವವರು ಬಂದು ಗಲಾಟೆ ಬಿಡಿಸಿದ್ದಾರೆ.

ನಂತರ ಆ ಹುಡುಗರು ‘ಮತ್ತೊಮ್ಮೆ ಸಿಗು ನಿನ್ನ ಜೀವ ತೆಗೆಯುತ್ತೇವೆಂದು’ ಸತೀಶ್ ರವರಿಗೆ ಬೆದರಿಕೆ ಹಾಕಿದ್ದು, ಗಾಯವಾಗಿದ್ದ ಸತೀಶ್ ನನ್ನು ಸಂದೀಪ್ ರವರು ತಮ್ಮ ಬೈಕ್ ನಲ್ಲಿ ಚಿಕಿತ್ಸೆಗೆಂದು ರಿಪ್ಪನ್‌ಪೇಟೆ‌ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿರುತ್ತಾರೆ.

ಸತೀಶ್ ಮೇಲೆ ಹಲ್ಲೆ ಮಾಡಿದ ಯುವಕರನ್ನು ಶಿವಮೊಗ್ಗದ ನಿವಾಸಿಗಳಾದ ಅಮಾನುಲ್ಲಾ ಮತ್ತು ಕಿರಣ್ ಎಂದು ಗುರುತಿಸಲಾಗಿದ್ದು, ಗಾಯಾಳು ಸತೀಶ್ ನೀಡಿದ ದೂರಿನನ್ವಯ ರಿಪ್ಪನ್‌ಪೇಟೆ ಠಾಣೆಯಲ್ಲಿ IPC 1860 (U/s-308,324,323,506,34) ಅಡಿ ಪ್ರಕರಣ ದಾಖಲಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here