ನಮ್ಮ ದೇಶದಲ್ಲಿ ಮಸೀದಿಗಳ ಮೇಲೆ ಮೈಕ್ ಅಳವಡಿಕೆ ತಡೆಗಟ್ಟುವ ಕೆಲಸ ಏಕೆ ಮಾಡುತ್ತಿಲ್ಲ?: ಪ್ರಮೋದ್ ಮುತಾಲಿಕ್

0
569

ಶಿಕಾರಿಪುರ: ವಿಶ್ವದ 16 ರಾಷ್ಟ್ರಗಳಲ್ಲಿ ಮಸೀದಿಗಳ ಮೈಕ್ ಅಳವಡಿಕೆಯನ್ನು ತಡೆಗಟ್ಟಿದ್ದು, ಅದರಲ್ಲೂ ಇಂಡೋನೇಷಿಯಾ, ಪಾಕಿಸ್ತಾನ ಸೇರಿದಂತೆ 6 ಮುಸ್ಲಿಂ ರಾಷ್ಟ್ರಗಳಲ್ಲಿ ಧ್ವನಿವರ್ಧಕ (ಮೈಕ್) ಅಳವಡಿಕೆಯನ್ನು ತಡೆಗಟ್ಟಿದ್ದಾರೆ. ನಮ್ಮ ಭಾರತ ದೇಶದ ಮುಸ್ಲಿಂರ ಮಸೀದಿಯ ಮೇಲೆ ಮೈಕ್ ಅಳವಡಿಕೆಯನ್ನು ತಡೆಗಟ್ಟುವ ಕೆಲಸ ಏಕೆ ಮಾಡುತ್ತಿಲ್ಲ. ಅದರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಶ್ರೀ ರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.

ಇಂದು ಪಟ್ಟಣದ ತಾಲ್ಲೂಕು ಕಛೇರಿ ಎದುರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ರಾತ್ರಿ 10-00 ರಿಂದ ಬೆಳಿಗ್ಗೆ 6-00 ಗಂಟೆಯ ವರೆಗೆ ಶಬ್ದ ಮಾಲಿನ್ಯ ತಡೆಗಟ್ಟಬೇಕು. ಇದರ ಬಗ್ಗೆ ಶಬ್ದ ಮಾಲಿನ್ಯ ನಿಯಂತ್ರಣ ಮಂಡಳಿ ಕಟ್ಟುನಿಟ್ಟಿನ ಕಾರ್ಯ ನಿರ್ವಹಿಸುತ್ತಿಲ್ಲ. ಈ ಸಮಯದಲ್ಲಿ ಮೈಕುಗಳಿಗೆ ನಿರ್ಬಂಧ ಇದ್ದರೂ, ಸುಪ್ರೀಂ ಕೋರ್ಟ್ ಆದೇಶ ನೀಡಿದರೂ ಮಸೀದಿಗಳಿಲ್ಲ ಬೆಳಿಗ್ಗೆ 5-00 ಗಂಟೆಯ ವೇಳೆಗೆ ಅಜಾನ್ ಕೂಗುತ್ತಿದ್ದರೂ ಏಕೆ ತಡೆಯುತ್ತಿಲ್ಲ ಎಂದು ಪ್ರಶ್ನಿಸಿದರು.

ರಾಜಕೀಯ ಮುಖಂಡರಿಗೆ ಇದರ ಬಗ್ಗೆ ಮಾಹಿತಿ ನೀಡಿದರೂ ಈ ವಿಷಯ ಸೂಕ್ಷ್ಮ ವಿಷಯವೆಂದು ಹೇಳುತ್ತಿದ್ದಾರೆ. ಇದರಿಂದಾಗಿ ಅನೇಕ ಮುಸ್ಲಿಂರು ಸಂತೋಷದಿಂದ ದಿನಕ್ಕೆ ಐದು ಬಾರಿ ಮೈಕ್ ಮೂಲಕ ಆಜಾನ್ ಕೂಗುತ್ತಿದ್ದಾರೆ. ಪ್ರಾರ್ಥನೆ, ಭಜನೆ ಭಕ್ತಿಗೀತೆಗಳಿಗೆ ನಮ್ಮ ವಿರೋಧವಿಲ್ಲ. ರಾತ್ರಿ 10-00 ಗಂಟೆಯಿಂದ ಬೆಳಗ್ಗೆ 6-00 ಗಂಟೆಯವರೆಗೂ ಮೈಕ್ ಅಳವಡಿಕೆಯ ನಿರ್ಭಂಧವಿದ್ದರೂ ಬೆಳಿಗ್ಗೆ 5-00 ಗಂಟೆಯ ವೇಳೆಗೆ ಅಜಾನ್ ಕೂಗುತ್ತಿದ್ದರೂ ಏಕೆ ತಡೆಯುತ್ತಿಲ್ಲ. ನಿಮ್ಮ ಕೈಯಲ್ಲಿ ಆಗದಿದ್ದರೆ ಹೇಳಿ, ಅನೇಕ ಹಿಂದೂ ಸಂಘಟನೆಗಳು ಒಗ್ಗೂಡಿ ಮಸೀದಿಗಳಲ್ಲಿ ಮೈಕ್ ಅಳವಡಿಕೆಯನ್ನು ತಡೆಗಟ್ಟುವ ಕೆಲಸ ಮಾಡುತ್ತೇವೆ ಎಂದು ಸವಾಲು ಹಾಕಿದರು.

ಆಸ್ಪತ್ರೆ, ಶಾಲಾ ಕಾಲೇಜು, ಜನವಸತಿ ಪ್ರದೇಶ, ನ್ಯಾಯಾಲಯ, ಸರ್ಕಾರಿ ಕಛೇರಿ, ದೇವಸ್ಥಾನ, ಮಸೀದಿ, ಚರ್ಚ್ ಗಳನ್ನು ನಿಶ್ಯಬ್ದ ವಲಯವೆಂದು ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶವಿದ್ದರೂ ಶಬ್ಧ ಮಾಲಿನ್ಯ ನಿರಂತರವಾಗಿ ನಡೆಯುತ್ತಲೇ ಇದೆ. ಇತ್ತೀಚೆಗೆ ನಡೆದ ಗಣೇಶೋತ್ಸವದ ಆಚರಣೆಗೆ ಅನೇಕ ರೀತಿಯ ಕಾರ್ಯಕ್ರಮಗಳನ್ನು ಜಾರಿಗೆ ತಂದು ಗಣೇಶೋತ್ಸವ ಸಂಭ್ರಮ ಸಡಗರಕ್ಕೆ ತಡೆಯೊಡ್ಡುವ ಕೆಲಸ ಮಾಡಿದ್ದೀರಿ. ಪರವಾನಿಗೆ ಇಲ್ಲದ ಮೈಕ್ ತೆರವುಗೊಳಿಸಲು ಸರ್ವೋಚ್ಚ ನ್ಯಾಯಾಲಯದ ಆಜ್ಞೆ ಇದ್ದರೂ ಇದುವರೆಗೂ ಪೋಲೀಸ್ ಇಲಾಖೆ ಏಕೆ ಕ್ರಮ ಕೈಗೊಂಡಿಲ್ಲ ಎಂದರು.

ದೇಶದ ಸಂವಿಧಾನ ಎಲ್ಲರಿಗೂ ಆರೋಗ್ಯ, ನಿದ್ದೆ, ಶಿಕ್ಷಣ, ಪ್ರಾರ್ಥನೆ ಸೇರಿದಂತೆ ಅನೇಕ ಸ್ವಾತಂತ್ರ್ಯ ಹಕ್ಕು ಕೊಟ್ಟಿದೆಯಾದರೂ, ಶಬ್ದ ಮಾಲಿನ್ಯದಿಂದ ಸಂವಿಧಾನದ ಹಾಗೂ ನ್ಯಾಯಾಲಯದ ಆಜ್ಞೆ ಉಲ್ಲಂಘನೆಯಾಗುತ್ತಿದೆ. ವೃದ್ಧರ, ವಿದ್ಯಾರ್ಥಿಗಳ, ಕಾರ್ಮಿಕರ, ರೋಗಿಗಳ, ಸಾಮಾನ್ಯ ಜನರ ನೆಮ್ಮದಿಗೆ ಭಂಗಗೊಳಿಸುತ್ತಿರುವುದು, ಸಂವಿಧಾನ ವಿರೋಧಿಯಾಗುತ್ತಿರುವುದು ತಮ್ಮ ಗಮನಕ್ಕೆ ಬರುತ್ತಿಲವೇ. ಕೂಡಲೇ ಶಬ್ಧ ಮಾಲಿನ್ಯ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟದ ಹಾದಿ ಹಿಡಿಯಲಾಗುವುದು ಎಂದು ಸರ್ಕಾರಕ್ಕೂ ಪೋಲೀಸ್ ಇಲಾಖೆಗೂ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಬಿಜೆಪಿ ಮುಖಂಡ ಧಾರವಾಡ ಗಿರೀಶ್, ಪ್ರವೀಣ್, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಪ್ರಕಾಶ್, ಭಜರಂಗ ದಳದ ಮುಖ್ಯಸ್ಥ ಬೋವರ್ ಲಾಲ್, ಕೃಷಿ ಭೂಮಿ ಉಳಿಸಿ ಹೋರಾಟ ಸಮಿತಿಯ ಅಧ್ಯಕ್ಷ ಈಶ್ವರಪ್ಪ ಹಾಗೂ ಹಿಂದೂ ಸಂಘಟನೆಗಳ ಮುಖ್ಯಸ್ಥರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here