ಹೊಸನಗರ: ಸಂವಿಧಾನದ ಶಿಲ್ಪಿ ಭಾರತ ದೇಶದ ಮಹಾನ್ ನಾಯಕ ಹೊಸ ಭಾರತದ ನಿರ್ಮಾತೃ, ಅಸ್ಪೃಶ್ಯತೆ ಅಸಮಾನತೆ ವಿರುದ್ದ ಹೋರಾಡಿದ ಮಹಾನ್ ಚೇತನ ಡಾ|| ಬಾಬಾ ಸಾಹೇಬ ಡಾ|| ಬಿ.ಆರ್ ಅಂಬೇಡ್ಕರ್ರವರು ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಚಂದ್ರಮೌಳಿಗೌಡ ರವರು ಹೇಳಿದರು.
ಹೊಸನಗರದ ಕಾಂಗ್ರೆಸ್ ಕಛೇರಿಯಾದ ಗಾಂಧಿ ಮಂದಿರದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ್ರವರ ನೇತೃತ್ವದಲ್ಲಿ ಬಾಬಾ ಸಾಹೇಬ್ ಡಾ|| ಬಿ.ಆರ್ ಅಂಬೇಡ್ಕರ್ರವರ 130ನೇ ಜನ್ಮ ದಿನಚರಣೆಯನ್ನು ಆಚರಿಸಲಾಗಿದ್ದು ಈ ಸಂದರ್ಭದಲ್ಲಿ ಅವರು ಮಾತನಾಡಿದರು.
ಪ್ರಧಾನ ಕಾರ್ಯದರ್ಶಿ ಸದಾಶಿವ ಶ್ರೇಷ್ಠಿ, ಹಿರಿಯರಾದ ಶ್ರೀನಿವಾಸ್ ಕಾಮಾತ್, ಪಟ್ಟಣ ಪಂಚಾಯಿತಿ ಸದಸ್ಯರಾದ ಅಶ್ವಿನಿಕುಮಾರ್, ಸಿಂಥಿಯಾ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಸಾರ್ಬಡಿ ಸುರೇಶ, ವರ್ತಕ ಗುರುರಾಜ್, ಪ್ರವೀಣ್ ಬೃಂದಾವನ, ದಲಿತ ಮುಖಂಡರಾದ ಅಣ್ಣಪ್ಪ, ಲೋಕೇಶ್, ಟೀಕಪ್ಪ, ನಿತ್ಯಾನಂದ ರಾಜಮೂರ್ತಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.