ನಳಿನ್ ಕುಮಾರ್ ಕಟೀಲ್‌ಗೆ ಸೀರೆ ಉಡಿಸಿದರೆ ಅವರು ಗಂಡಸು ಅಲ್ಲ, ಹೆಂಗಸು ಅಲ್ಲ: ಬೇಳೂರು ಗೋಪಾಲಕೃಷ್ಣ ವಾಗ್ದಾಳಿ

0
456

ಶಿವಮೊಗ್ಗ: ನಳಿನ್ ಕುಮಾರ್ ಕಟೀಲ್‌ಗೆ ಸೀರೆ ಉಡಿಸಿದರೆ ಅವರು ಗಂಡಸು ಅಲ್ಲ, ಹೆಂಗಸು ಅಲ್ಲ ಎಂದು ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ವಾಗ್ದಾಳಿ ನಡೆಸಿದರು.

ಪೆಸ್ ಟ್ರಸ್ಟ್‌ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರವರು ರಾಹುಲ್ ಗಾಂಧಿಯವರ ಬಗ್ಗೆ ಹೇಳಿಕೆ ಖಂಡಿಸಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇಡೀ ಮಂಗಳೂರಿಗೆ ಬೆಂಕಿ ಹಚ್ಚುತ್ತೇನೆ ಎಂದಿದ್ದ ಕಟೀಲು ಕೋಮು ಗಲಭೆ ಸೃಷ್ಟಿಸಲು ಪ್ರಯತ್ನಿಸಿದ್ದರು. ಅವರದೇ ಪಕ್ಷದ ನಾಯಕರು ಎನ್ನಿಸಿಕೊಂಡವರು, ವಿಧಾನಸಭೆಯಲ್ಲಿ ಬ್ಲೂ ಫಿಲಂ ನೋಡಿದ್ದಾರೆ. ಬಿಜೆಪಿಯಲ್ಲೇ ಅತ್ಯಾಚಾರಿಗಳಿದ್ದಾರೆ. ಅವರೇ ಹಲವು ಸ್ಕ್ಯಾಂಡಲ್ ಗಳಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಅವರಿಗೆ ಕಾಂಗ್ರೆಸ್ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ. ಇವೆಲ್ಲದರ ಬಗ್ಗೆ ಗೊತ್ತಿರುವ ಕಟೀಲು, ನಮ್ಮ ಕೇಂದ್ರ ನಾಯಕರ ಬಗ್ಗೆ ಟೀಕೆ ಮಾಡಿದ್ದಾರೆ. ಒಬ್ಬ ರಾಜ್ಯಾಧ್ಯಕ್ಷನಾಗಿ ಅವರ ಹೇಳಿಕೆ, ಸರಿಯಲ್ಲ ಎಂದರು.

ಇವರ ಪಕ್ಷದಲ್ಲೇ ಕೊಳೆತು ನಾರುತ್ತಿದೆ. ಸಚಿವ ಈಶ್ವರಪ್ಪ ಹಿರಿಯರಿದ್ದಾರೆ. ಅವರು ಕೂಡ ನಮ್ಮ ನಾಯಕರ ವಿರುದ್ಧ ಅವಾಚ್ಯ ಭಾಷೆಗಳನ್ನು ಬಳಸುತ್ತಿದ್ದಾರೆ. ಬೇಳೂರು ನಿಮಗೆ ಬೈದರೇ, ನೀವು ತಡೆದುಕೊಳ್ಳಲು ಆಗಲ್ಲ. ಕಾಂಗ್ರೆಸ್ ಇರುವುದಿಲ್ಲ ಎಂದು ಹೇಳಿಕೆ ನೀಡುತ್ತಿರುವವರೇ ಮುಂದಿನ ಚುನಾವಣೆಯಲ್ಲಿ ಇರುವುದಿಲ್ಲ. ಮುಖ್ಯಮಂತ್ರಿ ಬೊಮ್ಮಾಯಿಯವರು ನೈತಿಕ ಪೊಲೀಸ್ ಗಿರಿ ಬಗ್ಗೆ ಮಾತನಾಡಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳು ಹಗುರವಾಗಿ ಮಾತನಾಡಬೇಡಿ ಎಂದು ಸಲಹೆ ನೀಡಿದರು.

ಕುಮಾರಸ್ವಾಮಿ ವಿರುದ್ಧವೂ ಹರಿಹಾಯ್ದ ಬೇಳೂರು:

ಅವರ ಪಕ್ಷವೇ ಸರಿಯಾದ ರೀತಿಯಲ್ಲಿ ಇಲ್ಲ. ಅವರದೇ ಪಕ್ಷ ಸಂಘಟನೆ ಇಲ್ಲ. ಇವರು ನಮ್ಮ‌ಪಕ್ಷದ ಬಗ್ಗೆ ಮಾತನಾಡುತ್ತಿದ್ದಾರೆ. ಇದು ಸರಿಯಲ್ಲ, ಕುಮಾರಸ್ವಾಮಿಯವರು ಬಹಳ ಎಚ್ಚರದಿಂದ ಹೇಳಿಕೆ ನೀಡಲಿ. ಮುಸ್ಲಿಂರ ಓಟು ಸೆಳೆಯಲು ಕುಮಾರಸ್ವಾಮಿ ಆರ್.ಎಸ್.ಎಸ್. ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ. ಅವರು ಕಾಂಗ್ರೆಸ್‌ನ ಸೋಲಿಸಲು ಈ ರೀತಿ ಮಾಡುತ್ತಿದ್ದಾರೆ. ಜೆಡಿಎಸ್ ಮತ್ತು ಬಿಜೆಪಿ ಎರಡೂ ಒಂದೆ ಎಂದು ಕಿಡಿಕಾರಿದರು.

ಷಡಾಕ್ಷರಿ ಮನೆ ಮೇಲೂ ಐಟಿ ದಾಳಿ ಮಾಡಲಿ:

ಯಡಿಯೂರಪ್ಪ ಅವರ ಪಿಎಗಳವರ ಮನೆಗಳ ಮೇಲೆ ಐಟಿ‌ ದಾಳಿ ಮಾಡಲಾಗಿದೆ. ಆದರೆ, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಮನೆ ಮೇಲೆ ದಾಳಿ ಮಾಡಲಿ. ನೂರಾರು ಕೋಟಿ ರೂ. ಲೂಟಿ ಮಾಡಿರುವ ದುಡ್ಡು ಷಡಾಕ್ಷರಿ ಬಳಿ ಇದೆ. ಸಂಸದ ಬಿ.ವೈ. ರಾಘವೇಂದ್ರ ಮತ್ತು ವಿಜಯೇಂದ್ರ ಅವರ ಹಣವೆಲ್ಲವೂ ಷಡಾಕ್ಷರಿ ಬಳಿ ಇದೆ. ಷಡಾಕ್ಷರಿ ಯಡಿಯೂರಪ್ಪ ಅವರ ಪಿಎ ಆಗಿದ್ದವರು. ಅವರ ವ್ಯವಹಾರವೆಲ್ಲವೂ ಅವರೇ ನೋಡಿಕೊಂಡಿದ್ದಾರೆ. ಹಾಗಾಗಿ ಷಡಾಕ್ಷರಿ ಮನೆ ಮೇಲೂ ಐಟಿ ರೈಡ್ ಮಾಡಲಿ ಎಂದು ಹೇಳಿದರು.

ಜಾಹಿರಾತು

LEAVE A REPLY

Please enter your comment!
Please enter your name here