ನಳಿನ್ ಕುಮಾರ್ ಕಟೀಲ್ ಅವರನ್ನು ಸಂಸದ ಸ್ಥಾನದಿಂದ ವಜಾಗೊಳಿಸಬೇಕು: ಕಾರ್ತಿಕ್ ಜಿ ಚೆಟ್ಟಿಯಾರ್ ಒತ್ತಾಯ

0
236

ಚಿಕ್ಕಮಗಳೂರು: ನಳೀನ್ ಕುಮಾರ್ ಕಟೀಲ್ ರಾಜ್ಯಾಧ್ಯಕ್ಷರಾಗಿ ಹಾಗೂ ಸಂಸದರಾಗಿ ರಾಹುಲ್ ಗಾಂಧಿಯವರ ಬಗ್ಗೆ ಅತ್ಯಂತ ಕೀಳುಮಟ್ಟದ ಹಾಗೂ ಆಧಾರ ರಹಿತ ಹೇಳಿಕೆ ಕೊಟ್ಟಿದ್ದಾರೆ. ಈ ಹೇಳಿಕೆ ಕಟೀಲ್‌ರವರ ಕೊಳಕು‌ ಮನಸ್ಥಿತಿಯನ್ನು ಅನಾವರಣ ಮಾಡಿದೆ. ರಾಹುಲ್ ಗಾಂಧಿಯವರ ಬಗ್ಗೆ ಅವಹೇಳನಕಾರಿಯಾಗಿ ಮಾತಾನಾಡಲು ಕಟೀಲ್‌ರವರಿಗೆ ಯಾವ ನೈತಿಕತೆಯಿದೆ?. ರಾಜೀವ್‌ ಗಾಂಧಿ, ಇಂದಿರಾ ಗಾಂಧಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ. ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಹೆಗ್ಗಳಿಕೆ ನೆಹರೂ ಕುಟುಂಬದವರದ್ದು. ದೇಶಕ್ಕಾಗಿ ಬಿಜೆಪಿಯವರ ತ್ಯಾಗವೇನು.? ಕಟೀಲ್‌ರವರ ಕೊಡುಗೆಯೇನು.? ರಾಹುಲ್ ಗಾಂಧಿ ರವರ ವಿರುದ್ಧ ನಳಿನ್ ಕುಮಾರ್ ಕಟೀಲ್ ರವರು ನೀಡಿರುವ ಕೀಳು ಮಟ್ಟದ ಸುಳ್ಳು ಹೇಳಿಕೆಯನ್ನು ತಕ್ಷಣವೇ ವಾಪಸ್ ಪಡೆದು ಬಹಿರಂಗವಾಗಿ ಕ್ಷಮೆಯಾಚಿಸಬೇಕೆಂದು ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಮಾಹಿತಿ ಮತ್ತು ತಂತ್ರಜ್ಞಾನ ಅಧ್ಯಕ್ಷ ಕಾರ್ತಿಕ್ ಜಿ ಚೆಟ್ಟಿಯಾರ್ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಹುಲ್ ಗಾಂಧಿರವರನ್ನು ಡ್ರಗ್ ಅಡಿಟ್ ಮತ್ತು ಪೆಡ್ಲರ್ ಎಂದು ಕಟೀಲ್ ರವರು ಬಳಸಿರುವಂತಹ ಭಾಷೆಯನ್ನು ಗಮನಿಸಿದಾಗ ಅವರು ಬೆಳೆದು ಬಂದಿರುವ ಸಂಸ್ಕಾರವನ್ನು ತೋರಿಸುತ್ತಿದೆ ಮತ್ತು ಕಟೀಲ್ ರವರು ಓರ್ವ ಸಂಸದರಾಗಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರಾಗಿರುವುದು ದುರದೃಷ್ಟಕರದ ಸಂಗತಿಯಾಗಿದೆ. ಇವರು ಈ ಸ್ಥಾನದಲ್ಲಿ ಮುನ್ನಡೆಯಲು ಅನರ್ಹರಾಗಿದ್ದಾರೆ ಆದ್ದರಿಂದ ಕಟೀಲ್ ರವರನ್ನು ಸಂಸತ್ ಸದಸ್ಯ ಸ್ಥಾನದಿಂದ ವಜಾಮಾಡಬೇಕೆಂದು ರಾಷ್ಟ್ರಪತಿಗಳಿಗೆ ಒತ್ತಾಯಿಸಿದ್ದಾರೆ.

ಹರಕುನಬಾಯಿ ರಾಜಕಾರಣಿಯಾಗಿ ಬಾಲಿಶ ತನದ ಹಾಗೂ ಜೋಕರ್ ರೀತಿಯ ಹೇಳಿಕೆ ನೀಡಿರುವ ಕಟೀಲ್ ರವರಿಗೆ ಮಾನಸಿಕ ಸ್ಥಿಮಿತತೆ ಇಲ್ಲವೇ ಇಲ್ಲ ಎಂಬುದನ್ನು ಅವರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ನಾಲಿಗೆಯ ಚಪಲಕ್ಕೆ ಮಾತನಾಡುತ್ತಿರುವ ಕಟೀಲ್ ಪದೇ – ಪದೇ ಸುಳ್ಳುಗಳನ್ನು ಹೇಳುತ್ತ ಅವರು ಸಂಸದರ ಸ್ಥಾನಕ್ಕೆ ಅಗೌರವ ತರುವಂತ ಕೆಲಸಕ್ಕೆ ಕೈ ಹಾಕಿದ್ದಾರೆ. ಅವರನ್ನು ಸಂಸದ ಸ್ಥಾನದಿಂದ ವಜಾ ಸಹಿತ ಬಿಜೆಪಿ ಪಕ್ಷ ಪ್ರಾಥಮಿಕ ಸದಸ್ಯತ್ವದಿಂದ ವಜಾಗೊಳಿಸಿ ಹಾಗೂ ಕಾನೂನಿನ ಪ್ರಕಾರ ಕ್ರಮ ತೆಗೆದುಗೊಳ್ಳುವಂತೆ ಅವರು ಈ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here