ನಾಗರೀಕರಿಗೆ ಕಾನೂನು ಅರಿವು ಮೂಡಿದಾಗ ಸಮಾಜದಲ್ಲಿ ಬದಲಾವಣೆ ಸಾಧ್ಯ: ವಾಟಗೋಡು ಸುರೇಶ್

0
332

ಹೊಸನಗರ: ನಾಗರೀಕರಿಗೆ ಕಾನೂನು ಬಗ್ಗೆ ಅರಿವು ಮೂಡಿದಾಗ ಸಮಾಜದಲ್ಲಿ ಬದಲಾವಣೆ ಆಗಲು ಸಾಧ್ಯ ಎಂದು ಆಲಗೇರಿಮಂಡ್ರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ವಾಟಗೋಡು ಸುರೇಶ್ ರವರು ಹೇಳಿದರು.

ಹರಿದ್ರಾವತಿ ಗ್ರಾಮ ಪಂಚಾಯತಿ ಆವರಣದಲ್ಲಿ ಕಾನೂನು ಸೇವಾ ಪ್ರಾಧಿಕಾರ ದ್ಯೇಯ ಮತ್ತು ಗುರಿ ಹಾಗೂ ಇತರೆ ಕಾನೂನು ಸೇವೆಗಳ ಬಗ್ಗೆ ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಾವೆಲ್ಲರೂ ಕಾನೂನಿಡಿಯಲ್ಲಿ ಕೆಲಸ ನಿರ್ವಹಿಸಬೇಕು ಅಂದರೆ ಹುಟ್ಟಿದ ಮಗುವಿನಿಂದ ಹಿಡಿದು ವೃದ್ಧರವರೆಗೂ ಕಾನೂನಿನ ಚೌಕಟ್ಟಿನಡಿಯಲ್ಲಿ ಜೀವನ ನಿರ್ವಹಣೆ ಮಾಡಿದ್ದಲ್ಲಿ ಸಮಾಜದಲ್ಲಿ ಶಾಂತಿ ಸಹಬಾಳ್ವೆ ಸುವ್ಯವಸ್ಥೆ ಮಾನಸಿಕ ನೆಮ್ಮದಿಯಿಂದ ಬದುಕಲು ಸಾಧ್ಯ ಎಂದರು.

ಗ್ರಾಮೀಣ ಭಾಗದಲ್ಲಿ ನ್ಯಾಯಾಲಯದ ವತಿಯಿಂದ ಈ ತರಹದ ಮಾಹಿತಿ ಕಾರ್ಯಗಾರಗಳು ನಡೆದಾಗ ಜನಸಾಮಾನ್ಯರಿಗೆ ನೇರವಾಗಿ ಮಾಹಿತಿಯನ್ನು ಒದಗಿಸಿದಂತೆ ಆಗುತ್ತದೆ. ಇಂದಿನ ಕಾರ್ಯಕ್ರಮ ಆಯೋಜನೆ ಮಾಡಿದ ನ್ಯಾಯಾಲಯದ ಕ್ರಮ ತುಂಬಾ ಸಂತೋಷವಾಗಿದ್ದು ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಯಾದ ನ್ಯಾಯವಾದಿ ಚಂದ್ರಪ್ಪ ಹೆಚ್ ಮಾತನಾಡಿ, ಮೋಟಾರ್ ವಾಹನ ಕಾಯ್ದೆ, ಜನನ ಮತ್ತು ಮರಣ ನೋಂದಣಿ ಕಾಯ್ದೆ, ಪೋಕ್ಸೋ ಕಾಯ್ದೆ, ಸಾಂಕ್ರಾಮಿಕ ತಡೆ ನಿಷೇಧ ಕಾಯ್ದೆ 2020-21, ಗ್ರಾಹಕರ ಹಿತರಕ್ಷಣಾ ಕಾಯ್ದೆ, ಬಾಲ್ಯ ವಿವಾಹ, ಬಾಲಕಾರ್ಮಿಕ ಕಾಯ್ದೆ, ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಗಳ ಬಗ್ಗೆ ಸುದೀರ್ಘವಾಗಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಲೀಲಾವತಿ ಸುರೇಶ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತಿಯ ಸದಸ್ಯರಾದ ಕೆ ಆರ್ ಮಂಜುನಾಥ್, ವಿಶಾಲ ರಾಜೇಂದ್ರ, ಸೀತಾ ಸಂತೋಷ್, ಗುರುಮೂರ್ತಿ, ಪೂರ್ಣಿಮಾ, ಹೆಚ್.ವಿ ಅಶೋಕ್, ನಿವೃತ್ತ ಶಿಕ್ಷಕರಾದ ಈಶ್ವರಪ್ಪ ಹಾಗೂವಿಧ್ಯಾರ್ಥಿಗಳು, ಗ್ರಾಮಸ್ಥರು ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಅಶೋಕ್ ರವರು ಸ್ವಾಗತಿಸಿ, ಅಂಗನವಾಡಿ ಕಾರ್ಯಕರ್ತರಾದ ಶಕುಂತಲಾರವರು ನಿರೂಪಿಸಿ ವಂದಿಸಿದರು.

ವರದಿ: ಹೆಚ್.ಎಸ್.ನಾಗರಾಜ್
ಜಾಹಿರಾತು

LEAVE A REPLY

Please enter your comment!
Please enter your name here