ನಾನು ಮುಖ್ಯಮಂತ್ರಿಯಾಗಿ ಬಂದಿಲ್ಲ, ಭಕ್ತನಾಗಿ ಬಂದಿದ್ದೇನೆ: ಬಸವರಾಜ್ ಬೊಮ್ಮಾಯಿ

0
328

ಶೃಂಗೇರಿ: ಶಂಕರಾಚಾರ್ಯರು ಕೇವಲ ಮಠವನ್ನು ಮಾತ್ರ ಕಟ್ಟದೆ ನಾವೆಲ್ಲರೂ ಒಂದೇ ಎಂಬ ಭಾವನೆಯಲ್ಲಿ ಜನರ ಮನಸ್ಸನ್ನು ಕಟ್ಟುತ್ತಿದ್ದಾರೆ. ನಾನು ಇಲ್ಲಿ ಮುಖ್ಯಮಂತ್ರಿಯಾಗಿ ಬಂದಿಲ್ಲ. ಬದಲಾಗಿ ಭಕ್ತನಾಗಿ ಬಂದ್ದು ಶೃಂಗೇರಿ ಶಾರದಾಂಬೆ ಹಾಗೂ ಹರಿಹರಪುರ ಮಠದ ಶಾರದಾ ಲಕ್ಷ್ಮಿ ನರಸಿಂಹ ಸ್ವಾಮಿ ದೇವರಿಂದ ರಾಜ್ಯವನ್ನು ಮುನ್ನಡೆಸುವ ಹೊಸ ಪ್ರೇರಣೆ ಪಡೆದುಕೊಂಡು ಹೋಗುತ್ತಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಶೃಂಗೇರಿ ಶಾರದಾಂಬೆ ಹಾಗೂ ಕೊಪ್ಪ ತಾಲ್ಲೂಕಿನ ಐತಿಹಾಸಿಕ ಹರಿಹರಪುರ ಮಠಕ್ಕೆ ಭೇಟಿ ನೀಡಿದ ಸಿಎಂ, ಧಾರ್ಮಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಸಮಾಜ ಆದರ್ಶವಾಗಿ ಇರಬೇಕಾದರೆ ದೈವ ಭಕ್ತಿ, ಗುರುಭಕ್ತಿ ಹಾಗೂ ಆತ್ಮವಿಶ್ವಾಸ ಇರಬೇಕು. ಅದು ಬಹಳ ಮುಖ್ಯ. ಉತ್ಕ್ರಷ್ಟವಾದ ಪ್ರೀತಿಯೇ ಭಕ್ತಿ ಹಾಗೂ ಪವಿತ್ರ. ನಾವು ದೇವರ ಬಳಿ ಅಂತಸ್ತು, ಐಶ್ವರ್ಯ ಕೇಳುತ್ತೇವೆ. ಸ್ವಾಮೀಜಿಗಳು ಲೋಕಕ್ಕಾಗಿ ಕೇಳಿ ಕೊಳ್ಳುತ್ತಾರೆ. ನಿಸ್ವಾರ್ಥ ಭಕ್ತಿಯ ಪ್ರಪಂಚದಲ್ಲಿ ನೀವು ಇದ್ದೀರಿ ಎಂದು ತಿಳಿಸಿದರು.

ಭಗವಂತನಿಗೆ ಯಾರಿಗೆ, ಯಾವಾಗ, ಏನು ಕೊಡಬೇಕು ಎಂಬುದು ಗೊತ್ತಿದೆ. ಭಗವಂತ ಜನ್ಮ ನೀಡಿದ್ದಾನೆ. ನಾವು ಏಕೆ ಹುಟ್ಟಿದ್ದೇವೆ ಎಂಬುದಕ್ಕೆ ಉತ್ತರ ನಮ್ಮೊಳಗೆ ಇದೆ. ನಾವು ಅದನ್ನು ತಿಳಿದುಕೊಂಡರೆ ಜೀವನ ಸಾರ್ಥಕ. ಗುರುವಿನ ಬಳಿ ಭಕ್ತಿಯಲ್ಲಿ ಕರಗಿ ಲೀನವಾಗಬೇಕು. ನಾನು ಎಂಬ ಅಸ್ತಿತ್ವವನ್ನು ವಿಸರ್ಜನೆ ಮಾಡಬೇಕು. ನಾನು ಎಂಬುದು ನಿಸರ್ಗದ ಸಣ್ಣ ಕಣ. ಯಾರೂ ಕೂಡ ಸರ್ವ ಸ್ವತಂತ್ರರಾಗಿ ಹುಟ್ಟಲ್ಲ. ಅಪ್ಪ-ಅಮ್ಮ, ಅಕ್ಕ-ತಂಗಿ, ಅಣ್ಣ-ತಮ್ಮ, ಗುರು ಎಲ್ಲರ ಸಹಾಯದಲ್ಲಿ ಬೆಳೆಯುತ್ತಿದ್ದೇವೆ. ಇದು ನಮ್ಮ ಅಕೌಂಟ್‌ನಲ್ಲಿ ಕ್ರೆಡಿಟ್ ಆಗಿರುತ್ತದೆ ಎಂದ ಅವರು ನಂತರ ಶಿವಮೊಗ್ಗದ ಕಡೆ ಪ್ರಯಾಣ ಬೆಳೆಸಿದರು.

ಜಾಹಿರಾತು

LEAVE A REPLY

Please enter your comment!
Please enter your name here