ನಾಲೆಗೆ ಬಿದ್ದ ಅಪರಿಚಿತ ವೃದ್ಧ ದಂಪತಿಗಳನ್ನು ರಕ್ಷಿಸಲು ಹೋಗಿದ್ದ ರಿಪ್ಪನ್‌ಪೇಟೆಯ ಯುವಕ ಶವವಾಗಿ ಪತ್ತೆ !

0
1319

ರಿಪ್ಪನ್‌ಪೇಟೆ: ಮಂಗಳವಾರ ಬೆಳಿಗ್ಗೆ ದಾವಣಗೆರೆ ಜಿಲ್ಲೆ ಸಿದ್ದಾಪುರದ ಚಾನಲ್‌ಗೆ ಬಿದ್ದು ಸಾಯುತ್ತಿದ್ದ ವೃದ್ಧ ದಂಪತಿಗಳನ್ನು ಬದುಕಿಸಬೇಕು ಎಂಬ ಹಂಬಲದಲ್ಲಿ ಚಾನಲ್‌ಗೆ ಜಿಗಿದು ಬದುಕಿಸುವ ಯತ್ನದಲ್ಲಿ ಈತನು ಕೊಚ್ಚಿಕೊಂಡು ಹೋಗಿ ಮೃತಪಟ್ಟಿರುವ ಘಟನೆ ನಡೆದಿದೆ.

ರಿಪ್ಪನ್‌ಪೇಟೆ ನೆಹರು ಬಡಾವಣೆ ನಿವಾಸಿ ಅನೀದ್ (22) ಮೃತಪಟ್ಟ ದುರ್ಧೈವಿಯಾಗಿದ್ದು, ಕಳೆದ 48 ಗಂಟೆಗಳಿಂದ ಅಗ್ನಿಶಾಮಕದಳ ದವರು ಕಾರ್ಯಾಚರಣೆ ನಡೆಸುತ್ತಿದ್ದರೂ ಯುವಕನ ಶವ ಪತ್ತೆಯಾಗಿರಲಿಲ್ಲ, ಇಂದು ನೆಲ್ಲೂರು ಸಮೀಪದ ಹಿರೆಮಳಲಿ ಎಂಬ ಗ್ರಾಮದ ಬಳಿ ಯುವಕನ ಮೃತದೇಹ ಪತ್ತೆಯಾಗಿದೆ.

ಈಗ ಮೃತದೇಹವನ್ನು ಚನ್ನಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಮೃತನ ಅಂತ್ಯಕ್ರಿಯೆ ಇಂದು ಸಂಜೆ ರಿಪ್ಪನ್‌ಪೇಟೆಯ ಖಬರ್ ಸ್ಥಾನ್ ನಲ್ಲಿ ನಡೆಯುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ರಿಪ್ಪನ್‌ಪೇಟೆ ನೆಹರು ಬಡಾವಣೆ ನಿವಾಸಿಯಾಗಿದ್ದ ಅನೀದ್ (22) ತನ್ನ ತಾಯಿ ಮತ್ತು ಅಂಗವಿಕಲ ಸಹೋದರ ಮತ್ತು ಅಂಗವಿಕಲ ಸಹೋದರಿಯೊಂದಿಗೆ ಜೀವನ ಸಾಗಿಸುತ್ತಿದ್ದನು. ಮನೆಯಲ್ಲಿ ದುಡಿಯುವ ಯುವಕನೇ ಸಾವನ್ನಪ್ಪಿರುವುದು ಈ ಬಡ ಕುಟುಂಬಕ್ಕೆ ಸಿಡಿಲು ಬಡಿದ ಹಾಗೆ ಆಗಿದೆ.

ಯಾರೋ ಅಪರಿಚಿತ ವ್ಯಕ್ತಿಗಳನ್ನು ಬದುಕಿಸಲು ಹೋಗಿ ತನ್ನ ಪ್ರಾಣ ಕೊಟ್ಟ ಯುವಕನ ಕುಟುಂಬಕ್ಕೆ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ಧೈರ್ಯ ತುಂಬಿ ಸಹಕಾರ ಮಾಡುವುದರ ಮೂಲಕ ಕಣ್ಣೀರಿನಲ್ಲಿ ಕೈ ತೊಳೆಯುತ್ತಿರುವ ಕುಟುಂಬಕ್ಕೆ ಆಸರೆಯಾಗಬೇಕಿದೆ.

ಜಾಹಿರಾತು

LEAVE A REPLY

Please enter your comment!
Please enter your name here