ನಾಳೆಯೇ ನಿರ್ಧಾರವಾಗುತ್ತೆ ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಪಟ್ಟ ಯಾರಿಗೆಂದು !

0
530

ಹೊಸನಗರ: ತಾಲ್ಲೂಕು ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿ ಅದ್ಯಕ್ಷರ ಚುನಾವಣೆ ಜುಲೈ 6ನೇ ಬುಧವಾರ ನಡೆಯಲಿದೆ.

ಬೆಳಿಗ್ಗೆ 11ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಚುನಾವಣೆಯ ಪ್ರಕ್ರಿಯೆ ನಡೆಯಲಿದೆ.

ಈ ಗ್ರಾಮ ಪಂಚಾಯಿತಿಯಲ್ಲಿ 7 ಸದಸ್ಯರು ಬಿಜೆಪಿ ಬೆಂಬಲಿತರಿದ್ದು ಹಾಗೂ 6 ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದಾರೆ. ಒಂದೂವರೆ ವರ್ಷದ ಹಿಂದೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ನಂದಕುಮಾರಿಯವರು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು ಮುಂದಿನ ಒಂದೂವರೆ ವರ್ಷ ಸವಿತಾ ರಮೇಶ್‌ರವರಿಗೆ ಒಪ್ಪಂದದ ಮೇರೆಗೆ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಟ್ಟಿದ್ದರು ಅದರಂತೆ ಚುನಾವಣೆ ನಡೆಯಲಿದೆ.

ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ದಿವ್ಯಾ ಬೃಂದಾವನ ಪ್ರವೀಣ್‌ರವರು ಈ ಬಾರಿ ಅಧ್ಯಕ್ಷ ಪಟ್ಟಕ್ಕೆ ಏರಬೇಕೆಂದು ಹಂಬಲಿಸಿದರೂ ಕಾಂಗ್ರೆಸ್ ಪಕ್ಷದ ಬೆಂಬಲಿತ ಸದಸ್ಯರ ಸಂಖ್ಯೆ 5 ಮಾತ್ರವಿದ್ದು ಅದು ಅಲ್ಲದೇ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಇವತ್ತಿವರೆಗೆ ಚುನಾವಣೆಯ ಸಮೀಪಕ್ಕೆ ಸುಳಿಯದೇ ಇರುವುದರಿಂದ ಬಿಜೆಪಿ ಬೆಂಬಲಿತ 7 ಸದಸ್ಯರು ಇರುವುದರಿಂದ ಸವಿತಾ ರಮೇಶ್‌ರವರು ಅಧ್ಯಕ್ಷರಾಗುವಲ್ಲಿ ಅನುಮಾನವಿಲ್ಲ ಎಂದು ಹೇಳಲಾಗಿದೆ.

ಕೊನೆ ವೇಳೆಗೆ ತಂತ್ರಗಾರಿಕೆ:

ಬಿಜೆಪಿಯ 7 ಜನ ಸದಸ್ಯರು ಒಟ್ಟಿಗೆ ಸಾಗರಕ್ಕೆ ಹೋಗಿರುವುದರಿಂದ ಬಿಜೆಪಿ ಬಲ ಭದ್ರಪಡಿಸಿಕೊಂಡಿದ್ದು ಈ ಗ್ರಾಮ ಪಂಚಾಯಿತಿಯಲ್ಲಿ ಹಿಂದಿನ ಬಾರಿ ಕ್ಷೇತ್ರದ ಶಾಸಕರಾದ ಹರತಾಳು ಹಾಲಪ್ಪನವರಿಗೆ ಸೆಡ್ಡು ಹೊಡೆದು ಗ್ರಾಮ ಪಂಚಾಯಿತಿ ಕಟ್ಟಡವನ್ನು ಉದ್ಘಾಟಿಸಿದ ಇಂದಿನ ಗ್ರಾಮ ಪಂಚಾಯಿತಿ ಸದಸ್ಯ ಕಾಲಸಸಿ ಸತೀಶ್‌ರವರು ಕೊನೆಯ ಗಳಿಗೆಯಲ್ಲಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಸದಸ್ಯೆ ಸವಿತಾ ರಮೇಶ್‌ರವರನ್ನು ಬದಲಾಯಿಸಿ ಕಾಂಗ್ರೆಸ್ ಪಕ್ಷದ ದಿವ್ಯಾ ಬೃಂದಾವನ ಪ್ರವೀಣ್‌ರವರನ್ನು ಅಧ್ಯಕ್ಷರನ್ನಾಗಿ ಮಾಡಿದರೂ ಆಶ್ಚರ್ಯವಿಲ್ಲ ಎಂದು ಹೇಳಲಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here