ನಾಳೆ ಆರ್ಯವೈಶ್ಯ ಸಂಸ್ಕೃತಿ ಸದನ ಕಲ್ಯಾಣ ಮಂಟಪ ಉದ್ಘಾಟನೆ

0
162

ಶಿವಮೊಗ್ಗ: ಜೂನ್ 12 ರಂದು ಬೆಳಗ್ಗೆ 9 ಗಂಟೆಗೆ ಆರ್ಯವೈಶ್ಯ ಸಂಸ್ಕೃತಿ ಸದನ ಕಲ್ಯಾಣ ಮಂಟಪ ಉದ್ಘಾಟನೆಗೊಳ್ಳಲಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಹೇಳಿದರು.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ಯವೈಶ್ಯ ಮಹಾಜನ ಸಮಿತಿ, ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನ ಗಾಂಧಿ ಬಜಾರ್ ಶಿವಮೊಗ್ಗ ಇವರ ವತಿಯಿಂದ ಸೋಮಿನಕೊಪ್ಪ ರಸ್ತೆಯ ದೇವರಾಜ ಅರಸ್ ಬಡಾವಣೆಯಲ್ಲಿ ಸುಮಾರು ಎರಡೂವರೆ ಕೋಟಿ ರೂ. ವೆಚ್ಚದಲ್ಲಿ ಭವ್ಯವಾದ ಆರ್ಯವೈಶ್ಯ ಸಂಸ್ಕೃತಿ ಸದನ ಕಲ್ಯಾಣ ಮಂಟಪ ನಿರ್ಮಿಸಲಾಗಿದೆ ಎಂದರು.

ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮತ್ತು ಮದುವೆ ಮುಂತಾದ ಶುಭ ಕಾರ್ಯಗಳಿಗೆ ಈ ಭವನ ಸುಸಜ್ಜಿತವಾಗಿ ನಿರ್ಮಾಣಗೊಂಡಿದ್ದು, 20 ಕೊಠಡಿಗಳನ್ನು ಹೊಂದಿದೆ. ಜೂ. 8 ಮತ್ತು 9 ರಂದು ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿಗಳ ಸಾನಿಧ್ಯದಲ್ಲಿ ಹೋಮ ಮತ್ತು ಹವನ ಸೇರಿ ವಿವಿಧ ಧಾರ್ಮಿಕ ಪೂಜಾ ಕಾರ್ಯಗಳು ಪೂರ್ಣಗೊಂಡಿವೆ ಎಂದರು.

ಜೂ. 12 ರಂದು ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಸಂಸದನಬಿ.ವೈ. ರಾಘವೇಂದ್ರ, ಶಾಸಕರಾದ ಆಯನೂರು ಮಂಜುನಾಥ್, ಎಸ್. ರುದ್ರೇಗೌಡ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಭಾಗವಹಿಸಲಿದ್ದು, ಡಿ.ಎಸ್. ಅರುಣ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಭಾ ಕಾರ್ಯಕ್ರಮದಲ್ಲಿ ದಾನಿಗಳಿಗೆ ಗೌರವ ಸಮರ್ಪಣೆ ನಡೆಯಲಿದೆ ಎಂದರು.

ಬೆಳಗ್ಗೆ 11 ರಿಂದ ಆರ್ಯ ವೈಶ್ಯ ಜನಾಂಗದ ನಮ್ಮ ಊರಿನ 500 ಕ್ಕೂ ಅಧಿಕ ಹೆಣ್ಣುಮಕ್ಕಳಿಗೆ ಮಡಿಲಕ್ಕಿ ಕಟ್ಟುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಟ್ಟಡ ಸಮಿತಿ ಚೇರ್ಮನ್ ಭೂಪಾಳಂ ಎಸ್. ಶಶಿಧರ್, ಉಪಾಧ್ಯಕ್ಷ ಡಿ.ಎಂ. ಅರವಿಂದ್, ಕಾರ್ಯದರ್ಶಿ ಕೆ.ಜಿ. ನಟ ರಾಜ್, ಸಹ ಕಾರ್ಯದರ್ಶಿ ಎಸ್.ಜೆ. ಅಶ್ವತ್ಥನಾರಾಯಣ್, ನಿರ್ದೇಶಕರಾದ ಎಂ.ಜೆ. ಮಂಜುನಾಥ್, ಶಂಕರನಾರಾಯಣ ಶೆಟ್ಟಿ, ಎಸ್.ಪಿ. ಪ್ರಶಾಂತ್ ಮೊದಲಾದವರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here