ನಿಜವಾದ ಸನ್ಮಾನ ಯೋಧ ಹಾಗೂ ಕಾರ್ಮಿಕರಿಗೆ ; ಆರಗ ಜ್ಞಾನೇಂದ್ರ

0
254

ತೀರ್ಥಹಳ್ಳಿ : ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಸರ್ಕಾರ 8 ವರ್ಷಗಳ ಆಡಳಿತ ಪೂರೈಸಿದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಕಟ್ಟಡ ಕಾರ್ಮಿಕರಿಗೆ ಕಿಟ್ ವಿತರಣೆ ಕಾರ್ಯಕ್ರಮ ಪಟ್ಟಣದ ಗೋಪಾಲಗೌಡ ರಂಗಮಂದಿರದಲ್ಲಿ ಮಂಗಳವಾರ ನಡೆಯಿತು.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಗೃಹಸಚಿವ ಆರಗ ಜ್ಞಾನೇಂದ್ರ, ನಿಜವಾದ ಸನ್ಮಾನ ಯಾರಿಗೆ ಆಗಬೇಕು ಎಂದರೆ ಅದು ಯೋಧ ಹಾಗೂ ಕಾರ್ಮಿಕನಿಗೆ ಎಂದು ಹೇಳಿದರು.

ಈಗ ದೇಶದಲ್ಲಿ ನರೇಂದ್ರ ಮೋದಿ ಹಾಗೂ ರಾಜ್ಯದಲ್ಲಿ ಯಡಿಯೂರಪ್ಪ ಬಂದ ನಂತರ ಬಡವ ಎಂದು ತಾತ್ಸಾರ ಮಾಡದೇ ಪ್ರತಿಯೊಬ್ಬ ಶ್ರಮಿಕ ವರ್ಗದವನಿಗೂ ಈ ಸರ್ಕಾರ ಅನುಕೂಲ ಮಾಡಿಕೊಟ್ಟಿದೆ.

ಕೋವಿಡ್ ಸಮಯದಲ್ಲಿ ಪ್ರತಿ ಕುಟುಂಬಕ್ಕೆ ಅಕ್ಕಿ, ಹಲವು ಕಾರ್ಮಿಕರಿಗೆ ಆಹಾರ ಕಿಟ್ ಹೀಗೆ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಈ ಸರ್ಕಾರ ಕೊಟ್ಟಿದೆ. ಈ ದೇಶದ ಕಟ್ಟ ಕಡೆಯ ಬಡಕುಟುಂಬ ಸಮಸ್ಯೆಯನ್ನು ಅರ್ಥ ಮಾಡಿಕೊಂಡಿರುವ ಪ್ರಧಾನಿ ನಮ್ಮಲ್ಲಿದ್ದಾರೆ ಎಂದು ತಿಳಿಸಿದರು.

ನಂತರ ಸಂಸದ ಬಿ ವೈ ರಾಘವೇಂದ್ರ ಮಾತನಾಡಿ, ಸಮಾಜದ ಕಟ್ಟ ಕಡೆಯ ವ್ಯಕ್ತಿಗಳ ಕುಟುಂಬದ ಆಧಾರದ ಪ್ರಗತಿಗಾಗಿ ಕಟ್ಟಡ ಕಾರ್ಮಿಕರು ಹಾಗೂ ಇನ್ನಿತರ ಕುಟುಂಬಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಲಕ್ಷಾಂತರ ರೂಪಾಯಿಗಳ ಅನುದಾನ ಒದಗಿಸುತ್ತಾ ಬರುತ್ತಿದೆ ದುಡಿಯುವ ಎಲ್ಲಾ ವರ್ಗದ ಕಾರ್ಮಿಕರು ಕಾರ್ಮಿಕ ಇಲಾಖೆಯ ಹಾಗೂ ಈ ಶ್ರಮ ಗುರುತಿನ ಚೀಟಿ ನೋಂದಾವಣಿ ಮಾಡಿಕೊಂಡು ಸಕಲ ಸೌಲಭ್ಯ ಪಡೆದುಕೊಳ್ಳಿ ಎಂದರು.

ಐದುನೂರು ಜನ ಅರ್ಹ ಫಲಾನುಭವಿಗಳಿಗೆ, ಗಾರೆ ಕೆಲಸಕ್ಕೆ ಬೇಕಾಗುವ ಸಲಕರಣೆಗಳನ್ನು ನೀಡಿ ಕೋವಿಡ್-19 ಲಾಕ್‌ಡೌನ್‌ ಸಮಯಗಳಲ್ಲಿ ಕಾರ್ಮಿಕರ ಪರಿಸ್ಥಿತಿ ಶೋಚನೀಯ ಸಂಗತಿಯಾಗಿದೆ ಇದನ್ನು ವಿಶೇಷವಾಗಿ ಪರಿಗಣಿಸಿದ ಕೇಂದ್ರ ಹಾಗೂ ರಾಜ್ಯ ಸರ್ಕಾರವು ಉಚಿತವಾಗಿ ಆಹಾರ ಧಾನ್ಯಗಳ ಕಿಟ್‌ನ್ನು ನೀಡಿತ್ತು. ಈಗ ಪುನಃ ಗಾರೆ ಕೆಲಸದ ಉಪಕರಣಗಳನ್ನು ನೀಡುತ್ತಿದೆ. ಕಾರ್ಮಿಕರ ಆರೋಗ್ಯ ಸುಧಾರಣೆಗಾಗಿ ಶಿವಮೊಗ್ಗದಲ್ಲಿ ನೂರು ಬೆಡ್‌ಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಭದ್ರಾವತಿಯಲ್ಲಿ ಕಾರ್ಮಿಕರ ಭವನ ಕೂಡ ನಿರ್ಮಾಣವಾಗುತ್ತಿದೆ. ವಲಸೆ ಕಾರ್ಮಿಕರಿಗಾಗಿ ಐದೂನೂರ ಐವತ್ತು ಮನೆಗಳ ನಿರ್ಮಾಣಕ್ಕೆ ಶಿವಮೊಗ್ಗದಲ್ಲಿ ನೀಲಿ ನಕ್ಷೆ ತಯಾರಾಗಿದೆ. ಗೃಹ ಮಂತ್ರಿ ಆರಗ ಜ್ಞಾನೇಂದ್ರರವರು ತೀರ್ಥಹಳ್ಳಿ ಕ್ಷೇತ್ರದ ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಹಗಲಿರುಳು ಶ್ರಮಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾರ್ಮಿಕ ಇಲಾಖೆ ಅಧಿಕಾರಿ ಮಮ್ತಾಜ್ ಬೇಗಂ, ಆರ್ ಮದನ್, ಬಾಳೆಬೈಲು ರಾಘವೇಂದ್ರ, ಸೊಪ್ಪುಗುಡ್ಡೆ ರಾಘವೇಂದ್ರ, ಸೇರಿದಂತೆ ನೂರಾರು ಕಾರ್ಮಿಕರು ಭಾಗಿಯಾಗಿದ್ದರು.

ವರದಿ: ಶ್ರೀಕಾಂತ್ ವಿ ನಾಯಕ್
ಜಾಹಿರಾತು

LEAVE A REPLY

Please enter your comment!
Please enter your name here