24.3 C
Shimoga
Friday, December 9, 2022

ನಿಟ್ಟೂರು; ಗ್ರಾಪಂ ಸದಸ್ಯತ್ವಕ್ಕೆ ಇಬ್ಬರು ರಾಜೀನಾಮೆ ! ಯಾಕ್ಗೊತ್ತಾ ?

ಹೊಸನಗರ : ಸಹಜ ಸಾವನ್ನ ಕೊರೊನಾ ಸಾವು ಎಂದು ಸುಳ್ಳು ದಾಖಲೆ ಸೃಷ್ಟಿಸಿರುವ ಆರೋಪದಲ್ಲಿ ಗ್ರಾಮ ಪಂಚಾಯಿತಿ ಅಕ್ರಮ ತಡೆಯುವಲ್ಲಿ ವಿಫಲರಾಗಿ ಇಬ್ಬರು ಸದಸ್ಯರು ರಾಜೀನಾಮೆ ನೀಡಿದ್ದಾರೆ.

ಗ್ರಾಮ ಪಂಚಾಯಿತಿಯಲ್ಲಿ ತಾಂಡವವಾಡುತ್ತಿರುವ ಅಕ್ರಮ, ಭ್ರಷ್ಟಚಾರಕ್ಕೆ ಆತ್ಮಸಾಕ್ಷಿ ಒಪ್ಪದೆ ಗ್ರಾಮ ಪಂಚಾಯತ್ ಸದಸ್ಯತ್ವಕ್ಕೆ ಪುರುಷೋತ್ತಮ್ ಶಾನುಬೋಗ್ ಮತ್ತು ಸ್ವರೂಪ ರಾಘವೇಂದ್ರ ರಾಜೀನಾಮೆ ನೀಡಿದ್ದಾರೆ.

ಪಿಡಿಒ ಸಾಮಾನ್ಯ ಸಭೆಯಲ್ಲಿ ಸದಸ್ಯರ ಗಮನಕ್ಕೆ ಬಾರದೆ ನಡಾವಳಿ ಪುಸ್ತಕದಲ್ಲಿ ನಮೂದಿಸಿರುವ ಆರೋಪ ಕೇಳಿಬಂದಿತ್ತು. ಈ ಹಿಂದೆ 13 ಜನ ಸದಸ್ಯರು ಸಾಮಾನ್ಯ ಸಭೆಯನ್ನ ಬಹಿಷ್ಕರಿಸಿದ್ದರು. ಆದರೆ ನಿನ್ನೆ ಮತ್ತೆ ಸಾಮಾನ್ಯ ಸಭೆಯಲ್ಲಿ ಹಣ ನೀಡಲು ಮರು ಪ್ರಸ್ತಾವನೆ ಸಲ್ಲಿಸಿದ್ದಕ್ಕೆ ರಾಜೀನಾಮೆ ನೀಡಿದ್ದಾರೆ.

ಅಕ್ರಮ ಮಾಡುವವರ ಜೊತೆ ನಾವು ಸದಸ್ಯರಾಗಿ ಮುಂದುವರೆಯುವುದಿಲ್ಲ ಎಂದು ಈ ಇಬ್ಬರು ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದಾರೆ.

ನಿಟ್ಟೂರು ಗ್ರಾಪಂ ಭ್ರಷ್ಟಚಾರದಲ್ಲೇ ಮಿಂದೇಳುತ್ತಿದ್ದು ಸುಳ್ಳು ದಾಖಲೆ ಸೃಷ್ಟಿಸಿ ಪರಿಹಾರ ಕೊಡಿಸಲು ಗ್ರಾ.ಪಂ ಅಧಿಕಾರಿಗಳು, ಸದಸ್ಯರು ಮುಂದಾಗಿರುವ ಆರೋಪ ಕೇಳಿಬಂದಿದೆ.

ಕಿಡ್ನಿ ವೈಫಲ್ಯದಿಂದ ಕಳೆದ ಒಂದೂವರೆ ವರ್ಷದ ಹಿಂದೆ ನಿಟ್ಟೂರು ಗ್ರಾಪಂನ ನೀರು ಗಂಟಿ ಮಜೀದ್ ಎಂಬುವವರು ಸಾವನ್ನಪ್ಪಿದರು. ಆದರೆ ಕೊರೊನಾದಿಂದ ಮಜೀದ್ ಸಾವನ್ನಪ್ಪಿರುವುದಾಗಿ ಅಧ್ಯಕ್ಷರಿಂದ 30 ಸಾವಿರ ರೂ. ಚೆಕ್ ಗೆ ಸಹಿ ಮಾಡಿಸಿ ಮಜೀದ್ ಕುಟುಂಬಸ್ಥರಿಗೆ ಹಣ ಕೊಡಲು ಮುಂದಾಗಿರವ ಆರೋಪ ಕೇಳಿಬಂದಿತ್ತು. ಆದರೆ ಮಜೀದ್ ಕೊರೊನಾದಿಂದ ಧೃಢಪಟ್ಟಿರುವ ಬಗ್ಗೆ ಸ್ಥಳೀಯ ಆರೋಗ್ಯ ಇಲಾಖೆಗೆ ಮಾಹಿತಿಯೇ ಇರಲಿಲ್ಲ ಎಂದು ತಿಳಿಸಿದುಬಂದಿದೆ.

“ನಮ್ಮ ಪಂಚಾಯತ್ ನಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತಡೆಯುವಲ್ಲಿ ವಿಫಲವಾಗಿರುವುದರಿಂದ ನಾನು ನನ್ನ ಪಂಚಾಯತ್ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ.
ಇಲ್ಲಿನ ನೀರುಗಂಟಿ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗ್ರಾಮಪಂಚಾಯತ್ ಮಟ್ಟದಲ್ಲಿ ಯಾವುದೇ ಪೂರಕ ದಾಖಲೆಗಳು ಇಲ್ಲದಿದ್ದರೂ ಅವರಿಗೆ ಪರಿಹಾರ ನೀಡುವಂತೆ ಇಂದಿನ ಮೀಟಿಂಗ್ ನಲ್ಲಿ ಸದಸ್ಯರ ಒಂದು ಗುಂಪು ಮರುಪ್ರಸ್ತಾವನೆ ಸಲ್ಲಿಸಿರುವುದು ವಿಪರ್ಯಾಸವಾಗಿದೆ. ನಡೆಯುತ್ತಿರುವ ಅನ್ಯಾಯವನ್ನು ತಡೆಯಲು ಸಾಧ್ಯವಾಗದೆ, ಅದಕ್ಕೆ ಬೆಂಬಲ ಕೊಡಲು ಆತ್ಮಸಾಕ್ಷಿ ಒಪ್ಪದೇ ಅನಿವಾರ್ಯವಾಗಿ ನನ್ನ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ನನ್ನೊಂದಿಗೆ ಸಹ ಸದಸ್ಯರಾದ ಸ್ವರೂಪ ಉಡುಪರವರೂ ಇದೆ ಅಭಿಪ್ರಾಯ ವ್ಯಕ್ತಪಡಿಸಿ ಅವರೂ ಸಹ ರಾಜೀನಾಮೆ ಸಲ್ಲಿಸಿದ್ದಾರೆ.”
– ಪುರುಷೋತ್ತಮ್ ಶಾನುಬೋಗ್

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!