23.2 C
Shimoga
Sunday, November 27, 2022

ನಿಧಿಯಾಸೆ ; ಶಿವಲಿಂಗ ಕೆತ್ತನೆಯ ಕಲ್ಲಿನ ಮೂರ್ತಿ ಸ್ಥಳ ಧ್ವಂಸ !

ಹೊಸನಗರ : ನಿಧಿಯಾಸೆಗಾಗಿ ಶಿವಲಿಂಗ ಕೆತ್ತನೆಯ ಕಲ್ಲಿನ ಮೂರ್ತಿ ಇರುವ ಸ್ಥಳವನ್ನು ಧ್ವಂಸಗೊಳಿಸಿದ ಘಟನೆ ತಾಲ್ಲೂಕಿನ ಬಿದನೂರು ನಗರ ಸಮೀಪದ ನೇತ್ರಬೈಲು ಗುಡ್ಡದಲ್ಲಿ ನಡೆದಿದೆ.

ಶ್ರೀಧರಪುರದಲ್ಲಿರುವ ಬಿದನೂರು ದೊರೆ ಶಿವಪ್ಪನಾಯಕ ಮತ್ತು ಅರಸರ ಸಮಾಧಿಗಳ ಸ್ಥಳದಿಂದ ಒಂದು ಕಿ.ಮೀ ದೂರದಲ್ಲಿ ಈ ಘಟನೆ ನಡೆದಿದ್ದು, ಶಿವಲಿಂಗ ಕಲ್ಲಿನ ಕೆಳಭಾಗದಲ್ಲಿ ಆರೇಳು ಅಡಿ ಅಗೆಯಲಾಗಿದೆ.

ಶ್ರೀಧರಪುರದಲ್ಲಿರುವ ಬಿದನೂರು ದೊರೆ ಶಿವಪ್ಪನಾಯಕ ಮತ್ತು ಅರಸರ ಸಮಾಧಿಗಳ ಸ್ಥಳದಿಂದ ಒಂದು ಕಿ.ಮೀ ದೂರದಲ್ಲಿ ಈ ಘಟನೆ ನಡೆದಿದ್ದು, ಶಿವಲಿಂಗ ಕಲ್ಲಿನ ಕೆಳಭಾಗದಲ್ಲಿ ಆರೇಳು ಅಡಿ ಅಗೆಯಲಾಗಿದೆ. ಅಲ್ಲದೇ ಸುತ್ತಲೂ ದಾರ ಕಟ್ಟಿ, ಕುಂಬಳಕಾಯಿ, ತೆಂಗಿನಕಾಯಿ ಒಡೆಯಲಾಗಿದೆ. ಶಿವಲಿಂಗ ಮೂರ್ತಿಗೆ ಭಸ್ಮ ಬಳಿದಿದ್ದು, ಸುತ್ತಲೂ ಬಣ್ಣ ಹಾಕಲಾಗಿದೆ. ಹೊರಭಾಗ ಮತ್ತು ಲಿಂಗದ ಸಮೀಪ‌ ಹಣತೆ ಇಟ್ಟು ಬೆಳಗಿಸಲಾಗಿದೆ. ಅಲ್ಲದೇ ಸ್ಥಳದಲ್ಲಿ ವಾಮಚಾರ ಮಾಡಿರುವ ಕುರುಹು ಕಂಡು ಬಂದಿದೆ.

ಸ್ಥಳೀಯರು ತಮ್ಮ ಕೆಲಸಗಳಿಗೆ ಗುಡ್ಡಕ್ಕೆ ಹೋದಾಗ ಘಟನೆ ಬೆಳಕಿಗೆ ಬಂದಿದೆ. ವಾರದ ಹಿಂದೆ ಗ್ರಹಣದ ವೇಳೆ ಈ ಕೃತ್ಯ ನಡೆಸಿರಬಹುದು ಎಂದು ಶಂಕಿಸಲಾಗಿದೆ.

ಮಾಹಿತಿ ತಿಳಿಯುತ್ತಿದಂತೆ ಪಿಎಸ್‌ಐ ನಾಗರಾಜ್ ಭೇಟಿ ನೀಡಿ ಪರಿಶೀಲಿಸಿದರು. ಎಪಿಎಂಸಿ ಮಾಜಿ ಸದಸ್ಯ ಕಣ್ಕಿ‌ ಮಹೇಶ್, ಬಿಜೆಪಿ ಯುವಮೋರ್ಚಾ ಅಧ್ಯಕ್ಷ ನಿತಿನ್ ನಗರ, ಗೋಪಾಲಶೆಟ್ಟಿ, ಮಧುಕರ ಶೆಟ್ಟಿ, ನಾಗೇಂದ್ರ, ಅನೂತ್ ಪ್ರವೀಣ್ ಇದ್ದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!