ನಿನ್ನೆ ಶಿವಮೊಗ್ಗ, ಇಂದು ಭದ್ರಾವತಿಯಲ್ಲೂ ಯುವಕನೊಬ್ಬನ ಮೇಲೆ ಹಲ್ಲೆ !

0
725

ಭದ್ರಾವತಿ: ನಿನ್ನೆ ಶಿವಮೊಗ್ಗ ಆಯ್ತು, ಇಂದು ಭದ್ರಾವತಿಯಲ್ಲೂ ಯುವಕನೊಬ್ಬನ ಮೇಲೆ ಹಲ್ಲೆ ನಡೆದಿದ್ದು, ಚಾಕು ಇರಿತಕ್ಕೆ ಯತ್ನ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

27 ವರ್ಷದ ಸುನೀಲ್ ಎಂಬಾತನ ಮೇಲೆ ಇಂದು ಬೆಳಗ್ಗೆ ಭದ್ರಾವತಿಯಲ್ಲಿ ಅನ್ಯಕೋಮಿನ ಯುವಕರು ಏಕಾಏಕಿ ಹಲ್ಲೆ ಮಾಡಿದ್ದಾರೆ.

ಸೋಮವಾರ ಭದ್ರಾವತಿಯಲ್ಲಿ ಸುನೀಲ್ ಗುಡುಗುಡಿ ಆಟ ಆಡುತ್ತಿದ್ದ. ಈ ವೇಳೆ ಮುಬಾರಕ್ ವಿಡಿಯೋ ಮಾಡಿಕೊಂಡಿದ್ದ. ಸುನೀಲ್ ಇದನ್ನು ಪ್ರಶ್ನಿಸಿದ್ದು, ಇವರಿಬ್ಬರು ಕಿರಿಕ್ ಮಾಡಿಕೊಂಡಿದ್ದರು. ಇದರ ಪ್ರತೀಕಾರವಾಗಿ ಡಿಚ್ಚಿ ಮುಬಾರಕ್ ಇಂದು ಸುನೀಲ್ ಮೇಲೆ ಹಲ್ಲೆ ಮಾಡಿದ್ದಾರೆ.

ಪ್ರೇಮ್ ಸಿಂಗ್ ಮೇಲೆ ಚಾಕು ಇರಿತ ನಡೆದ ಪ್ರಕರಣ ಸಂಬಂಧ ಶಿವಮೊಗ್ಗದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಶಿವಮೊಗ್ಗಕ್ಕೆ ಆರ್.ಎ.ಪಿ ತುಕಡಿ ಆಗಮಿಸಿದ್ದು, ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿದೆ. ಪರಿಸ್ಥಿತಿಯನ್ನ ನಿಯಂತ್ರಣಕ್ಕೆ ತರುವ ಕೆಲಸ ಆಗ್ತಿದೆ. ಇದರ ನಡುವೆ ಭದ್ರಾವತಿಯಲ್ಲಿ ಸುನೀಲ್ ಎಂಬಾತನ ಮೇಲೆ ಹಲ್ಲೆ ನಡೆದಿದೆ.

ಎಂದಿನಂತೆ ನೆಹರು ನಗರದ ಸುನೀಲ್ ಇಂದು ಬೆಳಗ್ಗೆ ಕೆಲಸಕ್ಕೆ ಹೋಗುತ್ತಿದ್ದರು. ಆಗ ಅನ್ಯಕೋಮಿನ ಯುವಕರು ಹಲ್ಲೆ ಮಾಡಿದ್ದು, ಚಾಕುವಿನಿಂದ ಇರಿಯಲು ಯತ್ನಿಸಿದ್ದಾರೆ. ಸುನೀಲ್ ಭಜರಂಗದಳದ ಕಾರ್ಯಕರ್ತ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಸುನೀಲ್ ನನ್ನು ಭದ್ರಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮುಬಾರಕ್ ಅಲಿಯಾಸ್ ಡಿಚ್ಚಿ (26) ಹಲ್ಲೆ ಮಾಡಿದ್ದಾನೆ. ಸುನೀಲ್ ಕೆಲಸಕ್ಕೆ ಮನೆ ಮುಂದಿನ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಅಡ್ಡಗಟ್ಟಿದ ಮುಬಾರಕ್ ಎಡಗೈ, ಭುಜ ಮತ್ತು ತಲೆಗೆ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ.

ಈ ಘಟನೆ ಸಂಬಂಧ ಭದ್ರಾವತಿ ಹಳೇನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here