ನಿಮ್ಮ ನೆಚ್ಚಿನ ‘ಮಲ್ನಾಡ್ ಟೈಮ್ಸ್’ ನ್ಯೂಸ್ ವೆಬ್‌ಸೈಟ್‌ಗೆ ತುಂಬಿತು ಎರಡು ವರ್ಷ: ಹರಸಿ ಬೆಳೆಸಿದ ನಿಮಗಿದೋ ಸಾಷ್ಟಾಂಗ ನಮಸ್ಕಾರ

0
546

ಶಿವಮೊಗ್ಗ: ಜನ್ಮದಿನದ ಸಡಗರ ಅಂದ್ರೆ ಯಾರಿಗೆ ತಾನೇ ಖುಷಿ ಆಗಲ್ಲ ಹೇಳಿ? ಕಳೆದ 2 ವರ್ಷಗಳಿಂದ ಮಲೆನಾಡಿಗರ ಮನಗಳಲ್ಲಿ ಸ್ಥಾನ ಪಡೆದಿರೋ ನಿಮ್ಮ ನೆಚ್ಚಿನ ‘ಮಲ್ನಾಡ್ ಟೈಮ್ಸ್’ ನ್ಯೂಸ್ ವೆಬ್‌ಸೈಟ್‌ಗೆ ಇಂದಿಗೆ ಎರಡು ಸಂವತ್ಸರ ತುಂಬಿದ ಸಾರ್ಥಕತೆ. ನಮ್ಮನ್ನು ಹರಸಿ ಬೆಳೆಸಿದ ‘ಮಲ್ನಾಡ್ ಟೈಮ್ಸ್’ಗೆ ಅಂದ್ರೆ ನಿಮಗಿದೋ ಸಾಷ್ಟಾಂಗ ನಮಸ್ಕಾರ.

ಅತ್ಯಂತ ಕಡಿಮೆ ಸಮಯದಲ್ಲೇ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಜನತೆಯ ಮನಗೆದ್ದು ಇದೀಗ ಪ್ರತಿ ತಿಂಗಳು 2 ಲಕ್ಷಕ್ಕೂ ಅಧಿಕ ಓದುಗರನ್ನು ಹೊಂದುವ ಮೂಲಕ ಮಲೆನಾಡಿನ ನಂಬರ್ 1 ನ್ಯೂಸ್ ವೆಬ್‌ಸೈಟ್ ಆಗಿ ಹೊರಹೊಮ್ಮಿ ಯಶಸ್ವಿಯಾಗಿ ಇಂದಿಗೆ 2 ವರ್ಷ ಯಶಸ್ವಿಯಾಗಿ ಪೂರೈಸಿ 3ನೇ ವಸಂತಕ್ಕೆ ಕಾಲಿಟ್ಟಿದೆ.

2019ರ ಅಕ್ಟೋಬರ್ 03 ನಿಮ್ಮ ಪ್ರಾರಂಭಗೊಂಡು ಹೊಸತನ, ವಿನೂತನ ವಿನ್ಯಾಸದೊಂದಿಗೆ ನೇರ, ನಿಖರ, ನಿಷ್ಪಕ್ಷಪಾತ, ಸಾಮಾಜಿಕ ಕಾಳಜಿ, ಬಡವರ ಧ್ವನಿಯಾಗಿ ಬೆಳೆದು ಬಂದಿದೆ.

ಸುದ್ದಿ ಪ್ರಪಂಚ ವಿಶಾಲವಾಗಿ ಬೆಳೆಯುತ್ತಿದೆ. ನಿಷ್ಪಕ್ಷಪಾತ ಸುದ್ದಿ, ಸ್ಪಷ್ಟ ಮಾಹಿತಿ ಕೊಡುವುದು ಸವಾಲಿನ ಕೆಲಸ. ಪೂರ್ವಾಗ್ರಹವಿಲ್ಲದೆ, ಆಮಿಷ, ಒತ್ತಡಗಳಿಗೆ ಜಗ್ಗದೆ, ಯಾವ ಮುಲಾಜಿಲ್ಲದೇ, ನೊಂದವರಿಗೆ ನೆರವಾಗಿ, ಅನ್ಯಾಯವನ್ನು ಖಂಡಿಸಿ ಸುದ್ದಿ ಬಿತ್ತರಿಸೋ ಅಗತ್ಯತೆ ಮಲೆನಾಡಿಗರಿಗಿದ್ದರೆ ಅವರ ಅಗತ್ಯವನ್ನು ಪರಿಪೂರ್ಣವಾಗಿ ಈಡೇರಿಸೋ ಹೊಣೆ ಹೊರಲು ಸಜ್ಜಾಗಿದೆ ನಿಮ್ಮ ಮಲ್ನಾಡ್ ಟೈಮ್ಸ್.

ತುಂಬು ಹೃದಯದ ಧನ್ಯವಾದಗಳು

ನಿಮ್ಮೆಲ್ಲರ ಪ್ರೋತ್ಸಾಹ, ಆಶೀರ್ವಾದ, ಪ್ರೀತಿಯಿಂದಾಗಿ ಇಂದು ಸಾರ್ಥಕತೆಯ 3ನೇ ವರ್ಷಕ್ಕೆ ಕಾಲಿಟ್ಟಿದೆ. ನಮ್ಮ ಈ ಯಶಸ್ಸಿಗೆ ಕಾರಣರಾದ ಮಲೆನಾಡಿನ ಸಮಸ್ತ ಓದುಗರಿಗೆ, ಜಾಹೀರಾತುದಾರರಿಗೆ ಮತ್ತೊಮ್ಮೆ ನಮ್ಮ ಟೀಂ ವತಿಯಿಂದ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ.

ಜಾಹಿರಾತು

LEAVE A REPLY

Please enter your comment!
Please enter your name here