ನಿರ್ಮಾಣ ಹಂತದಲ್ಲೇ 4.38 ಕೋಟಿ ರೂ. ವೆಚ್ಚದ ರಾ.ಹೆ ಘಾಟಿ ರಸ್ತೆ ತಡೆಗೋಡೆ ಕುಸಿತ !

0
911

ಹೊಸನಗರ: ತಾಲೂಕಿನ ನಿಟ್ಟೂರು ಸಮೀಪದ ರಾಷ್ಟ್ರೀಯ ಹೆದ್ದಾರಿ 766 ‘ಸಿ’ ನಾಗೋಡಿ ಘಾಟಿ ರಸ್ತೆ ಕುಸಿತಗೊಂಡು ಅಪಾಯದಲ್ಲಿದೆ.

ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಮಂಗಳೂರು ಭಾಗಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಬರುವ ನಾಗೋಡಿ ಘಾಟಿ ರಸ್ತೆ ಕುಸಿತಗೊಂಡಿದೆ.

ತಾಲೂಕಿನಲ್ಲಿ ಸುರಿದ ಅಲ್ಪ ಮಳೆಗೆ ನಾಗೋಡಿ ಬಳಿ ನಿರ್ಮಾಣ ಹಂತದಲ್ಲಿದ್ದ ತಡೆಗೋಡೆ ಕುಸಿತಗೊಂಡಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ನಡೆಸುತ್ತಿದ್ದ 4.38 ಕೋಟಿ ರೂ. ಕಾಮಗಾರಿ ನೀರಲ್ಲಿ ಹೋಮವಾಗಿದೆ.

ನಾಗೋಡಿ ರಸ್ತೆ ಬಳಿ 92 ಮೀ ಉದ್ದ, 9 ಮೀ. ಅಗಲ ಹಾಗೂ 12 ಮೀ. ಎತ್ತರದ ತಡೆಗೋಡೆ ನಿರ್ಮಿಸಲಾಗುತ್ತಿತ್ತು. ಶೇ. 85ರಷ್ಟು ಕಾಮಗಾರಿ ಪೂರ್ಣಗೊಂಡು 3.71 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿತ್ತು. ಇದೀಗ ನಿರ್ಮಾಣ ಹಂತದಲ್ಲೇ ನಾಗೋಡಿ ತಡೆಗೋಡೆಯ ಒಂದು ಬದಿ ಕುಸಿತಗೊಂಡಿದ್ದು, ಅವೈಜ್ಞಾನಿಕ ಮತ್ತು ಕಳಪೆ ಕಾಮಗಾರಿ ಆರೋಪ ಕೇಳಿಬಂದಿದೆ.

ಕಳೆದ 2 ವರ್ಷದ ಹಿಂದೆ ಸಹ 42 ಲಕ್ಷ ರೂ. ಖರ್ಚು ಮಾಡಿ ನಾಗೋಡಿ ರಸ್ತೆ ಬಳಿ ಮಣ್ಣುಕುಸಿತ ತಪ್ಪಿಸಲು ಕೆಲಸ ಮಾಡಲಾಗಿತ್ತು. ಕಾಮಗಾರಿ ನಡೆದು 2 ತಿಂಗಳಿಗೆ ಸಂಪೂರ್ಣ ಕಾಮಗಾರಿ ನೀರಿನಲ್ಲಿ ಕೊಚ್ಚಿ ಹೋಗಿತ್ತು. ಇದೀಗ 4.38 ಕೋಟಿ ರೂ.‌ ವೆಚ್ಚದ ಕಾಮಗಾರಿ ನಿರ್ವಹಣೆಯಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿರುವ ಆರೋಪ ಕೇಳಿಬಂದಿದೆ. ನಿರ್ಮಾಣ ಹಂತದಲ್ಲೇ ತಡೆಗೋಡೆ ಬಿರುಕು ಬಿಟ್ಟಿದ್ದು, ಒಂದು ಬದಿ ಕುಸಿತಗೊಂಡಿದೆ. ಸೂಕ್ತ ರೀತಿಯಲ್ಲಿ ನಾಗೋಡಿ ರಸ್ತೆ ತಡೆಗೋಡೆ ಕಾಮಗಾರಿ ನಡೆಸಲು ಸ್ಥಳೀಯರು ಒತ್ತಾಯಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here