ಶಿವಮೊಗ್ಗ: ನಗರದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದ ಸ್ವಾಮಿಗೌಡರು ನಿವೃತ್ತರಾಗಿದ್ದು, ಅವರನ್ನು ಸಾರಿಗೆ ಅಧಿಕಾರಿ ದೀಪಕ್ ಎಲ್. ಅವರ ಮನೆಗೆ ತಮ್ಮ ವಾಹನದಲ್ಲಿಯೇ ತಾವೇ ಚಾಲನೆ ಮಾಡಿಕೊಂಡು ಹೋಗಿ ಕಳಿಸಿಕೊಟ್ಟ ಹೃದಯಸ್ಪರ್ಶಿ ಘಟನೆ ನಡೆದಿದೆ.
ಸಾರಿಗೆ ಕಚೇರಿಯಲ್ಲಿ ಸ್ವಾಮಿಗೌಡರು ಹಲವು ವರ್ಷಗಳಿಂದ ವಾಹನ ಚಾಲಕರಾಗಿ ಕಾರ್ಯನಿರ್ವಹಿಸಿದ್ದರು. ನಿನ್ನೆ ಅವರು ನಿವೃತ್ತರಾಗಿದ್ದು, ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಅವರಿಗೆ ಆತ್ಮೀಯ ಬೀಳ್ಕೊಡುಗೆ ನೀಡಲಾಯಿತು. ಈ ಸಂದರ್ಭದಲ್ಲಿ ಅವರ ಮುಂದಿನ ನಿವೃತ್ತಿ ಜೀವನ ಸುಖಕರವಾಗಿರಲಿ, ಆರೋಗ್ಯವಾಗಿರಲಿ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾರೈಸಿದರು.
ನಂತರ ಸ್ವಾಮಿಗೌಡ ಅವರನ್ನು ಆರ್.ಟಿ.ಒ. ದೀಪಕ್ ಅವರೇ ವಾಹನ ಚಾಲನೆ ಮಾಡಿಕೊಂಡು ಹೋಗಿ ಮನೆಗೆ ಬಿಟ್ಟು ಬಂದಿದ್ದಾರೆ.
ಈ ಸಂದರ್ಭದಲ್ಲಿ ಮೋಟಾರು ವಾಹನ ನಿರೀಕ್ಷಕ ಮಲ್ಲೇಶಪ್ಪ ಮೊದಲಾದವರಿದ್ದರು.
Related