ನೀರು ನಿರ್ವಹಣೆ ಇಲ್ಲದೆ ಶೌಚಾಲಯದ ದುರ್ನಾತದಲ್ಲಿ ಸರತಿ ಸಾಲಿನಲ್ಲಿ ಪಹಣಿ ದಾಖಲೆಗಾಗಿ ರೈತ ನಾಗರೀಕರ ಪರದಾಟ

0
272

ರಿಪ್ಪನ್‌ಪೇಟೆ: ಹೋಬಳಿ ಕಛೇರಿಯ ಹಿಂಭಾಗದಲ್ಲಿ ಸಾರ್ವಜನಿಕರಿಗಾಗಿ ಸುಸಜ್ಜಿತವಾದ ಶೌಚಾಲಯ ನಿರ್ಮಿಸಲಾದರೂ ಕೂಡಾ ಸರಿಯಾದ ನೀರು ನಿರ್ವಹಣೆ ಇಲ್ಲದೆ‌ ರೈತನಾಗರೀಕರು ಪರದಾಡುವಂತಾಗಿದ್ದು ಕಳೆದ ಹದಿನೈದು ದಿನಗಳಿಂದ ದುರ್ನಾತದಲ್ಲಿ ರೈತರು ಪಹಣಿ ಇನ್ನಿತರ ದಾಖಲೆಗಾಗಿ ಸರತಿ ಸಾಲಿನಲ್ಲಿ ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ ಎಂದು ಬೆಳ್ಳೂರು, ಬುಕ್ಕಿವರೆ, ಅರಸಾಳು, ಕೆಂಚನಾಲ, ಹಾಲುಗುಡ್ಡೆ ರೈತನಾಗರೀಕರು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮಾಡಳಿತದವರು ಎಸ್.ಡಿ.ಎಂ.ಯೋಜನೆ ಮತ್ತು 2019-20 ಸಾಲಿನಲ್ಲಿ ವರ್ಗ ಒಂದರ ಅನುದಾನದಡಿಯಲ್ಲಿ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಸಾರ್ವಜನಿಕ ಶೌಚಾಲಯಕ್ಕೆ ಸರಿಯಾದ ನಿರ್ವಹಣೆ ಇಲ್ಲದೆ ದುರ್ನಾತ ಸೂಸುವಂತಾಗಿದ್ದರೂ ಕೂಡಾ ಹೋಬಳಿ ಕಛೇರಿಯ ಅಧಿಕಾರಿಗಳು ಮಾತ್ರ ಕಣ್ಣಿದ್ದು ಕುರುಡರಂತಾಗಿದ್ದಾರೆಂದು ರೈತ ನಾಗರೀಕರು ತಮ್ಮ ಆಕ್ರೋಶವನ್ನು ಹೊರಹಾಕಿದರು.

ನಿತ್ಯ ಹೋಬಳಿ ಕಛೇರಿಗೆ ರಿಪ್ಪನ್‌ಪೇಟೆ, ಅರಸಾಳು, ಬೆಳ್ಳೂರು, ಬುಕ್ಕಿವರೆ, ತಮ್ಮಡಿಕೊಪ್ಪ, ಹಾರಂಬಳ್ಳಿ, ಮಸರೂರು, ಬೆನವಳ್ಳಿ, ಕೆಂಚನಾಲ, ಆಲವಳ್ಳಿ, ಮಾದಾಪುರ, ಹಾಲುಗುಡ್ಡೆ, ಬೆಳಂದೂರು, ನೆವಟೂರು, ಬಾಳೂರು, ಕುಕ್ಕಳಲೇ, ಮಾವಿನಸರ, ಹರತಾಳು, ಹರಿದ್ರಾವತಿ, ಬಟ್ಟೆಮಲ್ಲಪ್ಪ, ಚಿಕ್ಕಜೇನಿ, ಕೋಡೂರು ಹೀಗೆ ಹುಂಚಾ ಹೋಬಳಿಯ ಹಲವರು ಕಂದಾಯ ಇಲಾಖೆಗೆ ಸಂಬಂಧಪಟ್ಟ ನೂರಾರು ರೈತರು ಮಾಫಿ ಪಾಸ್ ಭೋನ್‌ಪೈಡ್ ಜಾತಿ-ಆದಾಯ ದೃಢೀಕರಣ ವಂಶವೃಕ್ಷ, ಹಿಡುವಳಿ ದೃಢೀಕರಣ, ವೃದ್ಯಾಪ್ಯ ವೇತನ, ಅಂಗವಿಕಲ ವೇತನ, ವಿಧವಾ ವೇತನ ಸಾಮಾಜಿಕ ಭದ್ರತಾ ಯೋಜನೆ ಹೀಗೆ ಹತ್ತು ಹಲವು ಸೌಲಭ್ಯಗಳಿಗಾಗಿ ಅರ್ಜಿ ಸಲ್ಲಿಸಲು ನಿತ್ಯ ನೂರಾರು ಸಂಖ್ಯೆಯಲ್ಲಿ ರೈತರು ಮಹಿಳೆಯರು ವಿದ್ಯಾರ್ಥಿನಿಯರು ಮತ್ತು ಕಛೇರಿಯ ಮಹಿಳಾ ಸಿಬ್ಬಂದಿ ವರ್ಗದವರುಗಳು ಸೇರಿದಂತೆ ಹಲವರು ಕಛೇರಿಗೆ ಬಂದು ಹೋಗುತ್ತಾರೆ. ಆದರೆ ತುರ್ತಾಗಿ ಶೌಚಾಲಯಕ್ಕೆ ಹೋಗಬೇಕಾದರೆ ದುರ್ನಾತದ ನೀರಿಲ್ಲದ ಶೌಚಾಲಯವೇ ಗತಿಯಾಗಿದೆ ಈ ಬಗ್ಗೆ ಪಂಚಾಯ್ತಿ ಪಿಡಿಓರನ್ನು ಸಂಪರ್ಕಿಸಿದರೆ ಪಕ್ಕದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಬೋರ್‌ವೆಲ್ ನೀರು ಬಳಸಲು ಪೈಪ್ ಲೈನ್ ಅಳವಡಿಸಲಾಗಿದೆ. ಅಲ್ಲದೆ ವಾರದ ಎರಡು ಮೂರು ದಿನಗಳಲ್ಲಿ ನಮ್ಮ ಸಿಬ್ಬಂದಿಯೇ ಸ್ವಚ್ಚಗೊಳಿಸುತ್ತಾರೆ ಎಂದರು.

ಹಾಗಾದರೆ ಕಳೆದ ಹದಿನೈದು ದಿನಗಳಿಂದ ನೀರು ನಿರ್ವಹಣೆ ಇಲ್ಲದೆ ರೈತನಾಗರೀಕರು ಏಕೆ ಪರದಾಡುವಂತಾಯಿತು ಎಂದರೆ ಮೌನವಹಿಸುತ್ತಾರೆ ಇದಕ್ಕೆ ಯಾರು ಉತ್ತರಿಸವರೋ ಕಾದು ನೋಡಬೇಕಾಗಿದೆ.

ಒಂದು ಕಡೆ ಸ್ವಚ್ಚಭಾರತ ಎಂದು ಹೇಳಿಕೊಳ್ಳುವ ಮೂಲಕ ಪ್ರಚಾರ ಮಾಡುತ್ತಿದ್ದು ಪ್ರಶಸ್ತಿ ಪುರಸ್ಕೃತಗೊಂಡಿರುವ ರಿಪ್ಪನ್‌ಪೇಟೆ ಗ್ರಾಮಾಡಳಿತದ ಎದುರಿನಲ್ಲಿರುವ ಕಂದಾಯ ಇಲಾಖೆಯ ಶೌಚಾಲಯವೇ ಸ್ವಚ್ಚತೆ ಇಲ್ಲದೆ ದುರ್ನಾತ ಬೀರುವಂತಾಗಿರುವುದು ಸಾರ್ವಜನಿಕರಲ್ಲಿ ಅಪಹಾಸ್ಯಕ್ಕೆ ಕಾರಣವಾಗಿದೆ.

ಇನ್ನಾದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿವರ್ಗ ಗಮನಹರಿಸಿ ಶೌಚಾಲಯವನ್ನು ಸ್ವಚ್ಚಗೊಳಿಸಿ ರೈತನಾಗರೀಕರಿಗೆ ಮುಕ್ತಗೊಳಿಸುವರೆ ಕಾದು ನೋಡಬೇಕಾಗಿದೆ

ಜಾಹಿರಾತು

LEAVE A REPLY

Please enter your comment!
Please enter your name here