ನೂತನ ರಾಷ್ಟ್ರೀಯ ಶಿಕ್ಷಣ ನೀತಿ ದೇಶವನ್ನು ಅದೋಗತಿಯತ್ತ ಕೊಂಡೊಯ್ಯಲಿದೆ: ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಗಂಭೀರ ಆರೋಪ

0
540

ಹೊಸನಗರ: ಯಾವುದೇ ಮಾನದಂಡ ಇಲ್ಲದೆ ಸಾಧಕ ಬಾದಕ ಪರಾಮರ್ಶಿಸದೆ ಶಿಕ್ಷಣ ತಜ್ಞರನ್ನು ವಿಪಕ್ಷಿಯರನ್ನು ಗಣನೆಗೆ ತೆಗೆದುಕೊಳ್ಳದೆ ಕೇವಲ ಆರ್.ಎಸ್.ಎಸ್. ರವರನ್ನು ಮಾತ್ರ ಸಮಿತಿಯಲ್ಲಿ ಸೇರಿಸಿಕೊಂಡ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಚಿಸಿದ ಕೇಂದ್ರ ಸರ್ಕಾರ ದೇಶದ ಆರ್ಥಿಕ ಸ್ಥಿತಿಯನ್ನು ಅದೋಗತಿಗೆ ಕೊಂಡೊಯ್ಯಲಿದೆ ಎಂದು ಮಾಜಿ ಶಿಕ್ಷಣ ಸಚಿವ ಹಾಗೂ ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ಅವರು ಗಂಭೀರ ಆರೋಪಿಸಿದರು.

ಅವರು ಇಲ್ಲಿನ ಗಾಂಧಿ ಮಂದಿರ (ಕಾಂಗ್ರೆಸ್ ಕಚೇರಿ) ದಲ್ಲಿಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ನೂತನ ಶಿಕ್ಷಣ ನೀತಿ ಹಲವಾರು ನ್ಯೂನತೆಗಳಿಂದ ಕೂಡಿದ್ದು ಇದು ದೇಶದ ಆರ್ಥಿಕತೆ ಮೇಲೆ ಇವರ ಆತಂಕ ಉಂಟು ಮಾಡಲಿದೆ. ದೇಶದ ಲೋಕಸಭಾ ಸದಸ್ಯರು ರಾಜ್ಯಸಭಾ ಸದಸ್ಯರು, ಶಾಸಕರು 7 ಸಾವಿರ ಗಳಷ್ಟಿದ್ದರೂ ಯಾರನ್ನು ವಿಶ್ವಾಸಕ್ಕೆ ಪಡೆಯದೆ ಏಕಪಕ್ಷೀಯವಾಗಿ ನೂತನ ಶಿಕ್ಷಣ ನೀತಿ ರೂಪಿಸಿ ಜಾರಿಗೆ ತಂದಿರುವುದು ಖಂಡನಾರ್ಹ ಎಂದರು.

ಶಿಕ್ಷಣ ಯೋಜನೆ ಖಾಸಗೀಕರಣಕ್ಕೆ ಪ್ರಚೋದನೆ ನೀಡುತ್ತಿರುವ ಅಕ್ಷಮ್ಯ ಅಪರಾಧವಾಗಿದೆ. ದೇಶಾದ್ಯಂತ ಮೂರುವರೆ ಸಾವಿರಕ್ಕೂ ಹೆಚ್ಚು ಭಾಷೆಗಳಿದ್ದು 22 ರಾಜ್ಯ ಭಾಷೆಗಳಿದ್ದರೂ ಮಾತೃಭಾಷೆಗೆ ಪ್ರಾತಿನಿಧ್ಯ ನೀಡದಿರುವುದು ವಿಪರ್ಯಾಸವಾಗಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಆರ್.ಎಸ್.ಎಸ್ ಅಜೆಂಡಾ ಆಗಿದೆ ಪರಾಮರ್ಶಿಸದೆ ಶಂಕುಸ್ಥಾಪನೆ ಮಾಡದೆ ಉದ್ಘಾಟನೆ ಮಾಡಿದ ಇವರ ನೀತಿ ಹಾಸ್ಯಸ್ಪದವಾಗಿದೆ. ನೂತನ ನೀತಿಯಿಂದ ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಲಿದೆ ನೂತನ ಶಿಕ್ಷಣ ವ್ಯವಸ್ಥೆ ಶ್ರೀಮಂತರ ಹಾಗೂ ಬಲಾಢ್ಯರ ಸ್ವತ್ತಾಗಿದೆ.

ಮೋದಿಯಿಂದ ಏನು ಆಗಿಲ್ಲ ಆಗುವುದಿಲ್ಲ ಅವರ ಬಗ್ಗೆ ಜನತೆ ಇನ್ನು ಕನಸು ಕಾಣುತ್ತಿರುವುದು ಜನರ ಮುಗ್ಧತೆಗೆ ಹಿಡಿದ ಕನ್ನಡಿಯಾಗಿದೆ ವಿಮಾನ ನಿಲ್ದಾಣ ಬಿಎಸ್ಎನ್ಎಲ್, ರೈಲ್ವೆ, ವಿದ್ಯುತ್ ಯೋಜನೆಗಳು ಬ್ಯಾಂಕುಗಳ ಖಾಸಗಿಕರಣ ಇವೇ ಮೊದಲಾದವುಗಳು ಮೋದಿಯವರ ಸಾಧನೆಯಾಗಿದೆ. ಮೋದಿಯವರ ಸಾಧನೆ ಸರಮಾಲೆಗಳು ಏಕಮುಖ ನೀತಿ ಹಿಟ್ಲರ್ ನೆಪೋಲಿಯನ್ ರವರನ್ನು ನೆನಪಿಸುತ್ತಿದೆ. ಅವರ ನೀತಿಗಳು ಯಾವುದೇ ವೇದಿಕೆಯಲ್ಲಿ ಚರ್ಚೆ ಆಗದೆ ಅನುಷ್ಠಾನಗೊಳ್ಳುತ್ತಿದೆ.

ಬಾರ್, ಮರಳು, ಜೂಜು ದಂಧೆಗೆ ಮುಕ್ತ ಅವಕಾಶ:

ಮೇಲಿನವುಗಳು ಕೇಂದ್ರ ಸರ್ಕಾರದ ಸಾಧನೆಯಾಗಿದ್ದರೆ ಅಕ್ರಮ ಮರಳು ಸಾಗಾಟ, ಅಕ್ರಮ ಗಣಿಗಾರಿಕೆ, ಅಕ್ರಮ ಮದ್ಯ ಮಾರಾಟ, ಮದ್ಯದಂಗಡಿಗಳಿಗೆ ಪರವಾನಗಿ, ಕಾನೂನು ಬಾಹಿರ ಚಟುವಟಿಕೆಗಳಿಗೆ ಆಶ್ರಯ ಅಕ್ರಮಗಳ ವಿರುದ್ಧ ಪೊಲೀಸರ ಕ್ರಮ ಕೈಗೊಂಡಲ್ಲಿ ಪೊಲೀಸರ ವಿರುದ್ಧ ಶಾಸಕರ ಪ್ರತಿಭಟನೆ, ಮಹಾಮಾರಿ ಕೋವಿಡ್-19 ನಿರೋಧಕ ಲಸಿಕೆ ವಿತರಣೆಯಲ್ಲಿ ರಾಜಕಾರಣ ಇವೇ ಮೊದಲಾದವುಗಳು ರಾಜ್ಯ ಸರ್ಕಾರದ ಸಾಧನೆಗಳಾಗಿವೆ. ತೀರ್ಥಹಳ್ಳಿ ಹಾಗೂ ಹೊಸನಗರ ಕ್ಷೇತ್ರಗಳಲ್ಲಿ ಮಟ್ಕಾ, ಗಾಂಜಾ ಅಕ್ರಮ ಮರಳು ಸಾಗಾಟ ಮದ್ಯ ಮಾರಾಟಗಳಿಗೆ ಮುಕ್ತ ಅವಕಾಶಗಳಿವೆ ಇವುಗಳಿಗೆ ಗೃಹ ಸಚಿವರ ಮಾಜಿ ಸಚಿವರ ಶ್ರೀರಕ್ಷ ಇರುವುದು ದುರಂತವೆಂದರು.

ಬಗರ್‌ಹುಕುಂ ಸಮಿತಿಜಾರಿಗೊಂಡಿಲ್ಲ. ವಸತಿ ಫಲಾನುಭವಿಗಳಿಗೆ ಅನುದಾನ ಬಿಡುಗಡೆಯಾಗಿಲ್ಲ. ಪಡಿತರಚೀಟಿ ಅರ್ಜಿಗಳು ವಿಲೇಆಗುತ್ತಿಲ್ಲ. ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿವೆ. ಇದೇ ಬಿಜೆಪಿಯ ಸಾಧನೆಯಾಗಿದ್ದು, ಅಚ್ಚೇದಿನ್ ನೀರೀಕ್ಷೆಯಲ್ಲಿದ್ದ ಜನ ಸಾಮಾನ್ಯರು ಈಗ ಅನುಭವಿಸುವಂತಾಗಿದೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ ನಾಗರಾಜ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಂಡಿ ರಾಮಚಂದ್ರ, ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಬಿ.ಆರ್ ಪ್ರಭಾಕರ್, ತಾಲೂಕು ಪಂಚಾಯತ್ ಮಾಜಿ ಸದಸ್ಯ ಬಿ.ಜಿ ಚಂದ್ರಮೌಳಿ, ಶ್ರೀನಿವಾಸ ಕಾಮತ್, ಮಹಾಬಲರಾವ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ.ಎಂ ಸದಾಶಿವ ಶ್ರೇಷ್ಟಿ, ಕರುಣಾಕರ ಶೆಟ್ಟಿ, ತುರುಗೋಡು ನಾಗರಾಜ್, ಸಂತೋಷ್, ಪಟ್ಟಣ ಪಂಚಾಯತ್ ಸದಸ್ಯ ಕೆ.ಕೆ ಅಶ್ವಿನಿ ಕುಮಾರ್, ಸಣ್ಣಕ್ಕಿ ಮಂಜು, ಕೃಷ್ಣಯ್ಯ ಶೆಟ್ಟಿ, ಉಬೇದ್, ಜಯನಗರ ಗುರು ಮೊದಲಾದವರು.

ವರದಿ: ಉಡುಪಿ ಎಸ್ ಸದಾನಂದ ಹೊಸನಗರ 8277173177
ಜಾಹಿರಾತು

LEAVE A REPLY

Please enter your comment!
Please enter your name here