ನೂರು ಹಾಸಿಗೆಯ ಸುಸಜ್ಜಿತ ಆಸ್ಪತ್ರೆಗಾಗಿ ಶೃಂಗೇರಿ ಬಂದ್ ಹಿನ್ನೆಲೆ ಜನ ಸಂಚಾರ ಸ್ತಬ್ಧ !

0
318

ಶೃಂಗೇರಿ: ಕಾಫಿನಾಡಿನ ಪ್ರಖ್ಯಾತ ಯಾತ್ರಾ ಸ್ಥಳವಾದ ಶೃಂಗೇರಿಯಲ್ಲಿ ನೂರು ಹಾಸಿಗೆಯ ಸುಸಜ್ಜಿತ ಆಸ್ಪತ್ರೆ ನಿರ್ಮಾಣದ ಬೇಡಿಕೆಗಾಗಿ ನಡೆಯುತ್ತಿರುವ ಶೃಂಗೇರಿ ಬಂದ್‌ಗೆ ವ್ಯಾಪಕ ಬೆಂಬಲ ದೊರೆತ್ತಿದ್ದು, ಪಟ್ಟಣದಲ್ಲಿ ಇಂದು ಮುಂಜಾನೆಯಿಂದಲೆ ಎಲ್ಲಾ ರೀತಿಯ ಅಂಗಡಿ ಮುಂಗಟ್ಟುಗಳು ಬಾಗಿಲು ಹಾಕಿದ್ದು ಬಸ್, ಆಟೋರಿಕ್ಷಾ ಸೇರಿದಂತೆ ಯಾವುದೇ ವಾಹನಗಳು ಸಂಚಾರ ನಡೆಸುತ್ತಿಲ್ಲ.

ಸದಾ ಪ್ರವಾಸಿಗರಿಂದ ತುಂಬಿರುತ್ತಿದ್ದ ಶೃಂಗೇರಿ ಪಟ್ಟಣದ ರಸ್ತೆಗಳು ಇಂದು ಬಿಕೋ ಎನ್ನುತ್ತಿವೆ. ಶೃಂಗೇರಿಗೆಯ ಗ್ರಾಮಾಂತರ ಭಾಗದಲ್ಲೂ ಬಂದ್ ಬಿಸಿ ತಟ್ಟಿದರಿಂದ ಸಾರ್ವಜನಿಕ ಮೇಲೆಯಲ್ಲೆ ಉಳಿಯಬೇಕಾಯಿತು.

ಈ ಬಂದ್ ರಾಜಕೀಯ ರಹಿತವಾಗಿ ನಡೆಯುತ್ತಿರುವುದರಿಂದ ಭಾರೀ ಬೆಂಬಲ ವ್ಯಕ್ತವಾಗಿದೆ. ಹೊರಗಿನಿಂದ ಬರುತ್ತಿರುವತಂಹ ಪ್ರವಾಸಿಗರು, ಪ್ರಯಾಣಿ ಬಸ್‌ಗಳನ್ನು ತಾಲ್ಲೂಕಿನ ಹೊರ ಭಾಗದಲ್ಲಿ ಸ್ಥಳೀಯ ಹಳ್ಳಿಯಲ್ಲಿನ ಜನರು ಅಡ್ಡಗಟ್ಟಿ ನಿಲ್ಲಿಸಿ ಬಂದ್‌ಗೆ ಬೆಂಬಲ ನೀಡುತ್ತಿದ್ದು, ಈ ಬಂದ್‌ನಿಂದ ಶೃಂಗೇರಿ ತಾಲ್ಲೂಕು ಸಂಪೂರ್ಣ ಸ್ತಬ್ಧವಾಗಿದೆ.

ಬಂದ್‌ಗೆ 30ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದು, ಮೆಡಿಕಲ್ ಶಾಪ್ ಗಳನ್ನು ಅರ್ಧ ತೆರೆದು ವರ್ತಕರು ಬೆಂಬಲ ಸೂಚಿಸಿದ್ದಾರೆ.

ಬಂದ್ ಬಗ್ಗೆ ಪೂರ್ವಸೂಚನೆ ಇದ್ದ ಕಾರಣದಿಂದ ಹೊರಗಡೆಯಿಂದ ಬರುವ ಪ್ರವಾಸಿಗರ ಸಂಖ್ಯೆಯೂ ಇಳಿಮುಖವಾಗಿದೆ.

ದೇವಾಲಯದ ಮುಂಭಾಗದಲ್ಲಿ ಬ್ಯಾರಿಕೇಡ್ ಗಳನ್ನು ಹಾಕಲಾಗಿದೆ. ಹತ್ತು ಗಂಟೆಯ ನಂತರ ಸ್ವಾಗತ ಕಮಾನಿನ ಆವರಣದಿಂದ ಪ್ರತಿಭಟನಾ ಮೆರವಣಿಗೆ ನಡೆಯಲಿದೆ ಎಂದು ಯುವ ಸಮೂಹ ತಿಳಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here