23.2 C
Shimoga
Sunday, November 27, 2022

ನೇಣಿಗೆ ಶರಣಾದ ನವವಿವಾಹಿತೆ ! ಕುಟುಂಬಸ್ಥರ ಆರೋಪವೇನು ?

ಶಿವಮೊಗ್ಗ: ಅಶ್ವಥ್ ನಗರದ 5ನೇ ತಿರುವಿನಲ್ಲಿ ಕಾರ್ ಶೆಡ್ ನಲ್ಲಿ ನವ್ಯಶ್ರೀ(23) ಎಂಬ ನವವಿವಾಹಿತ ಗೃಹಿಣಿಯೋರ್ವಳು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.


ನಗರದ ಪ್ರತಿಷ್ಠಿತ ಹೊಮ್ನರಡಿ ಆಸ್ಪತ್ರೆಯ ಸೊಸೆಯಾಗಿ ಸುಂದರ ಕನಸುಗಳನ್ನು ಹೊತ್ತು ಬಂದ ನವ್ಯಶ್ರೀ, 6ತಿಂಗಳು ಕಳೆಯುವ ಮುನ್ನವೇ ನೇಣು ಬಿಗಿದುಕೊಂಡು ಸಾವನ್ನಪ್ಪಿವುದು ಹಾಲು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.


ತುಳಸಿ ಹಬ್ಬಕ್ಕೆ ಅಕ್ಕಪಕ್ಕದ ಮನೆಗೆ ಹರಸಿನ ಕುಂಕಮಕ್ಕೆ ಹೋಗಿ ಬಂದಿದ್ದ ನವ್ಯಶ್ರೀ, ಎಲ್ಲರೊಂದಿಗೂ ನಗುಮೊಗದಿಂದಲೇ ಮಾತನಾಡಿದ್ದಾರೆ. ನವ್ಯ ಶ್ರೀ ನೇಣು ಬಿಗಿದುಕೊಳ್ಳುವ ಮುನ್ನ ಇನ್ ಸ್ಟಾಗ್ರಾಮ್ ನಲ್ಲಿ ರೀಲ್ಸ್ ಬಿಡುಗಡೆ ಮಾಡಿದ್ದಾರೆ. ಹಿಂದಿ ಹಾಡಿಗೆ ರೀಲ್ಸ್ ಬಿಡುಗಡೆ ಮಾಡಿ ನಂತರ ನೇಣಿಗೆ ಕೊರಳೊಡ್ಡಿದ್ದಾಳೆ.


ಎಂಇಎಸ್ ಕಾಲೇಜಿನಲ್ಲಿ ಎಂಕಾಂ ಮುಗಿಸಿರುವ ನವ್ಯಶ್ರೀ (23). ಆಕಾಶ್ ಹೊಮ್ಮರಡಿಗೆ 6 ತಿಂಗಳ ಹಿಂದೆ ಶಿವಮೊಗ್ಗದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು.


ಆಕಾಶ್ ಅವರು ತಾಯಿ ಹೊಮ್ಮರಡಿ ಆಸ್ಪತ್ರೆ ಹೊಂದಿದ್ದರೆ, ಮಗ ಆಕಾಶ್ ಕೊಪ್ಪದಲ್ಲಿರುವ ಅಡಿಕೆ ತೋಟ ನೋಡಿಕೊಂಡಿದ್ದಾರೆ. ನಿನ್ನೆ ಇನ್ ಸ್ಟಾಗ್ರಾಂ ರೀಲ್ಸ್ ನಲ್ಲಿ ನವ್ಯಶ್ರೀ ಕಣ್ಣೀರಿಟ್ಟಿದ್ದಾಳೆ ಎಂದು ಅನುಮಾನ‌ ವ್ಯಕ್ತವಾಗುತ್ತಿದೆ. ಏನು ತೊಂದರೆ ಇಲ್ಲದೆ ಇದ್ದರೆ ಸಹೋದರಿ ಕಣ್ಣೀರು ಹಾಕಿದ್ದಾಳೆ ಏಕೆ ಎಂದು ಸಹೋದರ ಹೃದಯ್ ಅನುಮಾನ ವ್ಯಕ್ತಪಡಿಸಿದ್ದಾರೆ. ಕಣ್ಣೀರಿಟ್ಟ ಸಹೋದರಿ ನವ್ಯಶ್ರೀ ನೇಣಿಗೆ ಶರಣಾಗಿದ್ದೇಕೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.


ನಿನ್ನೆ ರೀಲ್ಸ್ ಬಿಡುಗಡೆ ಮಾಡಿದ್ದ ನವ್ಯಶ್ರೀಗೆ ಯಾಕೆ ತೆಳ್ಳಗೆ ಆಗಿದ್ದಾಳೆ ಎಂದು ಸಹೋದರ ಪ್ರಶ್ನಿಸಬೇಕೆಂದು ಆಕೆಯ ಮೊಬೈಲ್ ಗೆ ಕಾಲ್ ಮಾಡಿದ್ದಾನೆ. ಕಾಲ್ ರಿಸೀವ್ ಮಾಡದೇ ಇದ್ದಾಗ ಆಮೇಲೆ ಮಾತನಾಡೋಣ ಎಂದು ಸುಮ್ಮನಾಗಿದ್ದಾರೆ. ಇದಕ್ಕೂ ಮೊದಲು ತಾಯಿ ಹತ್ತಿರ ಸಣ್ಣಪುಟ್ಟ ಸಮಸ್ಯೆ ಹೇಳಿಕೊಂಡಿರಬಹುದು ಎಂಬ ಅನುಮಾನ ಕೂಡ ವ್ಯಕ್ತಪಡಿಸಿದ್ದಾರೆ.


ನಂತರ 8-45 ಕ್ಕೆ ಅತ್ತೆ ಜಯಶ್ರೀ ಗೆ ಸಹೋದರ ಹೃದಯ್ ಕರೆ ಮಾಡಿ, ಸಹೋದರಿ ಫೋನ್ ರಿಸೀವ್ ಮಾಡುತ್ತಿಲ್ಲವೇಕೆ ಎಂದು ಕೇಳಿದ್ದಾರೆ. ಅದಕ್ಕವರು ಇಲ್ಲೇ ಅಲ್ಲೇ ಇಟ್ಟಿರಬೇಕೆಂದು ಉದಾಸೀನದಿಂದ ತಿಳಿಸಿದ್ದಾರೆ. ಅನುಮಾನದಿಂದ ಸಹೋದರ, ತಂದೆ , ತಾಯಿ ಚಿಕ್ಕಮಗಳೂರಿನ ದೇವನಹಳ್ಳಿಯಿಂದ ಹೊರಟುಬಂದಿದ್ದಾರೆ. ಕಾರ್ ಶೆಡ್ ನಲ್ಲಿ ಲೈಟ್ ಆನ್ ಗಿದ್ದು ಲಾಕಾಗಿದ್ದನ್ನು ಗಮನಿಸಿದ ಸಹೋದರ ಅಲ್ಲಿಗೆ ತೆರಳಿ ನೋಡಿದಾಗ ಸಾವನ್ನಪ್ಪಿರುವುದು ತಿಳಿದು ಬಂದಿದೆ.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!