20.6 C
Shimoga
Friday, December 9, 2022

ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ !

ತೀರ್ಥಹಳ್ಳಿ : ಪಟ್ಟಣದಲ್ಲಿ ಕಂಪ್ಯೂಟರ್ ಮಾರಾಟ ಮತ್ತು ಸರ್ವಿಸ್ ಶಾಪ್ ನಡೆಸುತ್ತಿದ್ದ ಸೊಪ್ಪುಗುಡ್ಡೆ ನಿವಾಸಿ ಶ್ರೀಪತಿ ಶೆಣೈ (35) ಬುಧವಾರ ಮಧ್ಯಾಹ್ನ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.

ಇವರು ತನ್ನ ಮೃದು ಸ್ವಭಾವದಿಂದ ಅಪಾರ ಸ್ನೇಹಿತರನ್ನು ಒಳಗೊಂಡಿದ್ದರು. ಇವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜೆಸಿ ಆಸ್ಪತ್ರೆಯಲ್ಲಿ ನಡೆಯಿತು.

ಆಜಾದ್ ರಸ್ತೆಯಲ್ಲಿರುವ ಕಾರ್ಪೊರೇಶನ್ ಬ್ಯಾಂಕ್ ಪಕ್ಕ ಪಟ್ಟಣ ಪಂಚಾಯತ್ ವಾಣಿಜ್ಯ ಮಳಿಗೆಯಲ್ಲಿ ಕಂಪ್ಯೂಟರ್ ಮಾರಾಟ ಮತ್ತು ಸರ್ವಿಸ್ ಶಾಪ್ ಹಾಗೂ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವ ಉದ್ಯಮವನ್ನು ಮಾಡಿಕೊಂಡಿದ್ದರು.

ಮೃತರು ಪತ್ನಿ, ಓರ್ವ ಪುತ್ರ ಮತ್ತು ಅನೇಕ ಸ್ನೇಹ ವಲಯವನ್ನು ಅಗಲಿದ್ದಾರೆ.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!