20.6 C
Shimoga
Friday, December 9, 2022

ನೋನಿ ಹಬ್ಬ ; ಗ್ರಾಮ ದೇವರುಗಳಿಗೆ ಕೋಳಿ, ಕುರಿ, ನೈವೇದ್ಯ

ರಿಪ್ಪನ್‌ಪೇಟೆ: ಗ್ರಾಮೀಣ ಪ್ರದೇಶದಲ್ಲಿ ದೀಪಾವಳಿ ಬಂದಿತ್ತೆಂದರೆ ಒಂದು ವಾರದ ಕಾಲ ಸಡಗರ ಸಂಭ್ರಮ. ಪುರಾತನ ಕಾಲದಿಂದಲೂ ಆಚರಿಸಿಕೊಂಡು ಬರಲಾಗುತ್ತಿರುವ ನೋನಿ ಹಬ್ಬಕ್ಕೆ ಪ್ರಾಣಿ ಬಲಿ ಹಾಗೂ ಹೂವು, ಹಣ್ಣು-ಕಾಯಿಗಳ ಸಮರ್ಪಣೆ ಮಾಡಿದರು.


ಹಲವು ಗ್ರಾಮಗಳಲ್ಲಿ ಮುಟ್ಟಾದರೆ ಮತ್ತು ಸೂತಕವಾದರೆ ಆ ಊರಿನಲ್ಲಿ ಗ್ರಾಮ ದೇವರಿಗೆ ಪೂಜೆ ಪುನಸ್ಕಾರಗಳು ಇಲ್ಲ. ಹೀಗೊಂದು ಪದ್ದತಿ ಸಂಪ್ರದಾಯ ಪುರಾತನ ಕಾಲದಿಂದಲೂ ಕಟ್ಟು ನಿಟ್ಟಾಗಿ ಆಚರಿಸುವುದು ವಾಡಿಕೆಯಾಗಿದೆ.


ಶೀಲವಂತ ಬೂತರಾಯನಿಗೆ ಹಣ್ಣು-ಕಾಯಿ ನೀಡಿದರೆ ಸಾಕು. ಆದರೆ ಕೆಲವು ಗ್ರಾಮ ದೇವರುಗಳಿಗೆ ವರ್ಷದಲ್ಲಿ ಒಂದು ದಿನ ಪೂಜೆ ಮಾಡಿ ಕೋಳಿ ಕುರಿ ಹಂದಿಗಳ ಹರಿಕೆ ಅರ್ಪಿಸಿ ನೈವೇದ್ಯ ಮಾಡುವುದು ಇಲ್ಲಿನ ವೈಶಿಷ್ಟವಾಗಿದೆ.


ಮಕ್ಕಳಿಂದ ಹಿರಿಯರಾಧಿಯಾಗಿ ಧಾರ್ಮಿಕ ಪೂಜಾ ಕೈಕಂರ್ಯದಲ್ಲಿ ಪಾಲ್ಗೊಂಡು ತಮ್ಮ ಹರಕೆ ಸಮರ್ಪಿಸುವುದರೊಂದಿಗೆ ಗ್ರಾಮದ ಎಲ್ಲ ಜನಾಂಗದವರು ಸೇರಿ ಸೌಹಾರ್ದವಾಗಿ ಆಚರಿಸುವ ಗ್ರಾಮ ದೇವರುಗಳಾದ ಚೌಡಿ, ಬೂತಪ್ಪ, ರಣದೇವರು, ಯಕ್ಷಿಣಿ ಹೀಗೆ ಹತ್ತು ಹಲವು ದೇವರುಗಳಿಗೆ ಶ್ರದ್ದಾ ಭಕ್ತಿಯಿಂದ ಪೂಜೆ ಸಲ್ಲಿಸಿ ಪಾಣಿ ಬಲಿಕೊಡುವುದು ಮೂರಾರು ವರ್ಷಗಳಿಂದ ಸಂಪ್ರದಾಯ ಹಾಗೂ ಪದ್ದತಿಯಾಗಿದೆ.


ಗವಟೂರು ಬೂತಪ್ಪ, ಚಿಕ್ಕಬೀತನಕೆರೆ ಬೂತರಾಯ, ವರನಹೊಂಡದ ಬೂತಪ್ಪ, ಮೂಗುಡ್ತಿ ಹೆಗ್ಗೆರೆಯ ಬೂತಪ್ಪ, ಬರುವೆ ರಣದೇವರು, ಯಕ್ಷಿಣಿ, ಬೆನವಳ್ಳಿ, ದೂನ, ನೆವಟೂರು, ಕುಕ್ಕಳಲೆ, ಮಲ್ಲಾಪುರ, ನೇರಲುಮನೆ, ಪೂಜಾರದಿಂದ, ಹುಳಿಗದ್ದೆ, ಚಿಕ್ಕಜೇನಿ, ಕೋಟೆತಾರಿಗ, ನಂದಿಗ, ದೊಡ್ಡಿನಕೊಪ್ಪ, ಕೊಳವಂಕ, ಬಸವಾಪುರ, ಹಾರೋಹಿತ್ತಲು, ಬೆಳ್ಳೂರು, ಹಾರಂಬಳ್ಳಿ, ತಳಲೆ, ಮೂಗುಡ್ತಿ, ಬೆಟ್ಟಿನಕೆರೆ, ಬೆಳಕೋಡು, ಕಾರಗೋಡು, ಹಾಲುಗುಡ್ಡೆ, ಬನ್ನಿನಗರ, ಕೆರೆಹಳ್ಳಿ, ಬೆಳಂದೂರು, ಮಾದಾಪುರ, ಆಲವಳ್ಳಿ ಇನ್ನಿತರ ಹಲವು ಕಡೆಗಳಲ್ಲಿ ಗ್ರಾಮ ದೇವ ಹಬ್ಬವನ್ನು ಶ್ರದ್ದಾಭಕ್ತಿಯಿಂದ ಆಚರಿಸಲಾಯಿತು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!