ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಮನೆಗಳ್ಳತನದ ಆರೋಪಿ ಬಾಂಬೆಯಲ್ಲಿ ಅರೆಸ್ಟ್ !

0
592

ಶಿವಮೊಗ್ಗ: ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಮನೆಗಳ್ಳತನದ ಆರೋಪಿಯನ್ನು ಬಾಂಬೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ಘಟನಾ ವಿವರ:

2017ರ ಫೆ. 13 ರಂದು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಗುನ್ನೆ ಸಂಖ್ಯೆ 45/2017 ಕಲಂ 457, 380 ಐಪಿಸಿ ಪ್ರಕರಣದ ಆರೋಪಿ ಶಿವಮೊಗ್ಗದ ಟಿಪ್ಪುನಗರದ ನಿವಾಸಿ ಇಮ್ರಾನ್ ಖಾನ್ @ ಇಮ್ರಾನ್ (36) ಇವನು ಘನ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆ ಮರೆಸಿಕೊಂಡಿರುತ್ತಾನೆ.

ಈ ಆರೋಪಿಯ ಬಂಧನಕ್ಕೆ ನ್ಯಾಯಾಲಯವು ಬಂಧನ ವಾರೆಂಟ್ ಅನ್ನು ಹೊರಡಿಸಿರುತ್ತದೆ ಮತ್ತು ಈತನ ವಿರುದ್ಧ ಶಿವಮೊಗ್ಗ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿರುತ್ತವೆ. ಶಿವಮೊಗ್ಗ ಜಿಲ್ಲೆ ಸೇರಿದಂತೆ ರಾಜ್ಯದ ಇತರೆ ಜಿಲ್ಲೆಯ ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿರುವ ಆರೋಪಿಯಾಗಿರುತ್ತಾನೆ.

ಈತನ ಪತ್ತೆಗಾಗಿ ಅಭಯ್ ಪ್ರಕಾಶ್ ಸೋಮನಾಳ್, ಪಿಐ ಕುಂಸಿ ಮತ್ತು ಸಂಜೀವ್ ಕುಮಾರ್, ಪಿಐ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ 02 ವಿಶೇಷ ತಂಡಗಳನ್ನು ರಚಿಸಿದ್ದು, ಈ ತಂಡಗಳ ನಿರಂತರ ಪ್ರಯತ್ನದಿಂದ ಇಂದು ಆರೋಪಿ ಇಮ್ರಾನ್ ಖಾನ್ @ ಇಮ್ರಾನ್ ನನ್ನು ಮಹಾರಾಷ್ಟ್ರ ರಾಜ್ಯದ ಬಾಂಬೆಯಲ್ಲಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತಾರೆ.

ಜಾಹಿರಾತು

LEAVE A REPLY

Please enter your comment!
Please enter your name here