ನ. 13 ಮತ್ತು 14 ರಂದು ಕಾಫಿನಾಡಿನಲ್ಲಿ “ರ‍್ಯಾಲಿ ಆಫ್ ಚಿಕ್ಕಮಗಳೂರು” ಆಯೋಜನೆ

0
192

ಚಿಕ್ಕಮಗಳೂರು: ಮೋಟಾರ್ ಸ್ಪೋರ್ಟ್ಸ್ ಕ್ಲಬ್‌ನಿಂದ ರಾಷ್ಟ್ರ ಮಟ್ಟದ ಟಿಎಸ್‌ಡಿ “ರ‍್ಯಾಲಿ ಆಫ್ ಚಿಕ್ಕಮಗಳೂರು” ಅನ್ನು ಇಂದೆ ತಿಂಗಳು 13 ಮತ್ತು 14 ರಂದು ಚಿಕ್ಕಮಗಳೂರಿನಲ್ಲಿ ಆಯೋಜಿಸಲಾಗಿದೆ ಎಂದು ಮೋಟಾರ್ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷರಾದ ಜಯಂತ್‌ ಪೈ ತಿಳಿಸಿದ್ದರು.

ನಗರದ ಪ್ರೆಸ್ ಕ್ಲಬ್‌ನಲ್ಲಿ ಮಾತನಾಡಿ, ಈ ರ‍್ಯಾಲಿಯ ಪ್ರಾಯೋಜಕತ್ವ ವನ್ನು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಆರೇಂಜ್ ಅಡ್ವೆಂಚರ್ ಕ್ಲಬ್, ಸಿರಿನೇಚರ್‌ರೋಸ್ಟ್, ದಿ ಕಾಫಿ ಕೋರ್ಟ್ ಮೂಡಿಗೆರೆ, ಪೈ ಕಮೋಂಡಿಟಿಸ್ ವಹಿಸಿಕೊಳ್ಳಲಿದ್ದಾರೆ ಎಂದರು.

ಟೈಪ್ ಆಫ್ ಡಿಸ್ಟೆನ್ಸ್ ಫಾರ್ಮೆಟ್‌ನಲ್ಲಿ ರ‍್ಯಾಲಿ ನಡೆಯಲಿದ್ದು ಲೆಗ್ 1 ರಂದು 180 ಕಿ.ಮೀ ಮತ್ತು ಲೆಗ್ 2 ರಂದು 60 ಕಿ.ಮೀ ಒಟ್ಟು 240 ಕಿಮೀ ರ‍್ಯಾಲಿಯು ಚಿಕ್ಕಮಗಳೂರಿನ ಸುತ್ತಮುತ್ತ ಪ್ರದೇಶದಲ್ಲಿ ನಡೆಯಲ್ಲಿದ್ದು, ನವೆಂಬರ್ 13ರ ಮಧ್ಯಾಹ್ನ 3 ಗಂಟೆಗೆ ಸಿರಿ ನೇಚರ್ ರೂಸ್ಟ್ ನಿಂದ ರ‍್ಯಾಲಿ ಪ್ರಾರಂಭವಾಗಿ ಸಂಜೆ 7.30ಕ್ಕೆ ಮೂಡಿಗೆರೆಯ ದಿ. ಕಾಫಿಕೋರ್ಟ್ ತಲುಪಲಿದೆ. ರಾತ್ರಿ 8.30ಕ್ಕೆ ಅಲ್ಲಿಂದ ಪ್ರಾರಂಭವಾಗಿ ರಾತ್ರಿ 10.30ಕ್ಕೆ ಚಿಕ್ಕಮಗಳೂರು ತಲುಪಲಿದೆ.

ನವೆಂಬರ್ 14 ರ ಬೆಳಗ್ಗೆ 7ಕ್ಕೆ ಸಿರಿ ನೇಚರ್ ರೂಟ್ಸ್ ನಿಂದ ಪ್ರಾರಂಭವಾಗಿ ಅಲ್ಲಿಯೇ 10.30ಕ್ಕೆ ಪೂರ್ಣಗೊಳ್ಳಲಿದ್ದು ನಂತರ ಬಹುಮಾನ ವಿತರಣೆ ನಡೆಯಲಿದೆ ಎಂದು ಹೇಳಿದರು.

ರ‍್ಯಾಲಿಯಲ್ಲಿ ಪ್ರೊ ಎಕ್ಸ್ಪರ್ಟ್ ವಿಭಾಗ, ಪ್ರೋಸ್ಟಾಕ್, ಕಪಲ್, ಕಾರ್ಪರೇಟ್, ನಾವೀಸ್, ಮಹಿಳಾ ಮತ್ತು ಸ್ಥಳೀಯರಿಗಾಗಿ ಚಿಕ್ಕಮಗಳೂರು ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. ವಿಜೇತರಿಗೆ ಟ್ರೋಫಿ ಮತ್ತು 2.50 ಲಕ್ಷ ರೂ. ಮೊತ್ತದ ನಗದು ಬಹುಮಾನ ನೀಡಲಾಗುವುದು. ದೇಶದ ವಿವಿಧ ಕಡೆಯಿಂದ ಸುಮಾರು 40 ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಈರೋಡ್‌ನ ಕಾರ್ತಿಕ್ ಮಾರುತಿ, ಸಂತೋಷ್, ನಾಗರಾಜನ್, ವಿನೋದ್, ಪ್ರಕಾಶ್, ರವಿ, ಸಾಗರ್, ಮಹಿಳಾ ವಿಭಾಗ ದಲ್ಲಿ ದೆಹಲಿಯ ಜಸ್ಮಿತ್‌ಕೌರ್, ಮುಂ ಬಯಿಯ ಸ್ನೇಹಸಬರ್‌ವಾಲ್, ಜ್ಯೋತಿ ಅಯ್ಯಂಗಾರ್, ಶಿವಾನಿ ಪೃಥ್ವಿ, ಅಪರ್ಣಪಾಠಕ್, ಲಲಿತಗೌಡ ಭಾಗವಹಿಸಲಿದ್ದಾರೆ ಎಂದರು.

ಜಾಹಿರಾತು

LEAVE A REPLY

Please enter your comment!
Please enter your name here