20.6 C
Shimoga
Friday, December 9, 2022

ನ. 23 ರಂದು ಕುಂಬಾರ ಸಮಾಜದ ಜಿಲ್ಲಾ ಮಟ್ಟದ ಜಾಗೃತಿ ಸಮಾವೇಶ

ಶಿಕಾರಿಪುರ: ಕುಂಬಾರ ಸಮಾಜದ ಜಿಲ್ಲಾ ಮಟ್ಟದ ಜಾಗೃತಿ ಸಮಾವೇಶ ನ.23 ಬುಧವಾರ ಬೆಳಗ್ಗೆ 11ಕ್ಕೆ ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ನಡೆಯಲಿದೆ ಎಂದು ತಾಲೂಕು ಕುಂಬಾರ ಸಂಘದ ಅಧ್ಯಕ್ಷ ಕೆ.ಎಸ್.ಸಂಗಪ್ಪ ಹೇಳಿದರು.


ಪಟ್ಟಣದಲ್ಲಿ ಶನಿವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ, ಹಾವೇರಿ, ದಾವಣಗೆರೆ ಹೊರತುಪಡಿಸಿ ರಾಜ್ಯದ ಎಲ್ಲೆಡೆ ಕುಂಬಾರ ಸಮಾಜಕ್ಕೆ 2ಎ ಜಾತಿ ಪ್ರಮಾಣ ಪತ್ರ ನೀಡಲಾಗುತ್ತದೆ. ಈ ಜಿಲ್ಲೆಯ ಕುಂಬಾರ ಜನಾಂಗ ಮಾಂಸಾಹಾರ ಸೇವಿಸುವುದಿಲ್ಲ ಎನ್ನುವ ಕಾರಣ ಅಧಿಕಾರಿಗಳು ಹೇಳುತ್ತಿದ್ದಾರೆ ಅದು ಸರಿಯಲ್ಲ ಎನ್ನುವ ಕುರಿತು ಅರಿವು ಮೂಡಿಸುವುದು ಸಮಾವೇಶದ ಪ್ರಮುಖ ಉದ್ದೇಶ. ತಾಲೂಕಿನಲ್ಲಿ ಕುಂಬಾರ ಸಮಾಜಕ್ಕೆ ಸಮುದಾಯ ಭವನ ನಿರ್ಮಿಸಬೇಕು ಅದಕ್ಕಾಗಿ ನಿವೇಶನ ನೀಡಬೇಕು ಎನ್ನುವ ಬೇಡಿಕೆ ಕಳೆದ 10ವರ್ಷದಿಂದ ಇದ್ದು ಅದಕ್ಕೆ ಕೂಡಲೆ ಸ್ಪಂದಿಸುವುದಕ್ಕೆ ಒತ್ತಾಯಿಸುವುದು. ಕುಂಬಾರ ಅಭಿವೃದ್ಧಿ ನಿಗಮ ಬಿ.ಎಸ್.ಯಡಿಯೂರಪ್ಪ ಸ್ಥಾಪನೆ ಮಾಡಿದ್ದರು ಆದರೆ ಈಗ ಅದನ್ನು ದೇವರಾಜ ಅಭಿವೃದ್ಧಿ ನಿಗಮದ ಜತೆ ಸೇರ್ಪಡೆಗೊಳಿಸಿದ್ದು ಅದು ಸರಿಯಲ್ಲ ಎನ್ನುವುದು ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗಾಗಿ ನಮ್ಮ ಸಮಾಜದ ಜನರಲ್ಲಿ ಅರಿವು ಮೂಡಿಸುವುದು ಜನಪ್ರತಿನಿಧಿಗಳ ಗಮನಕ್ಕೆ ನಮ್ಮ ಬೇಡಿಕೆ ಕುರಿತು ಮನವರಿಕೆ ಮಾಡುವುದು ಜಾಗೃತಿ ಸಮಾವೇಶದ ಉದ್ದೇಶವಾಗಿದೆ ಎಂದರು.


ಕುಂಬಾರ ಸಂಘದ ಕಾರ‍್ಯದರ್ಶಿ ಜಿ.ಯುವರಾಜ್ ಮಾತನಾಡಿ, ಜಾಗೃತಿ ಸಮಾವೇಶದ ಸಾನಿಧ್ಯ ಶ್ರೀ ಬಸವಕುಂಬಾರ ಗುಂಡಯ್ಯ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಬಿ.ಎಸ್.ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ, ಮಾಜಿ ಮಂತ್ರಿ ಕೆ.ಎಸ್.ಈಶ್ವರಪ್ಪ, ಜಿಲ್ಲಾ ಕುಂಬಾರ ಸಮಾಜದ ಅಧ್ಯಕ್ಷ ಲೋಕಪ್ಪ ಮತ್ತಿತರರು ಹಾಜರಿರುತ್ತಾರೆ. ಜಿಲ್ಲೆಯ ಎಲ್ಲ ಕುಂಬಾರ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.

ಮುಖಂಡರುಗಳಾದ ಕೆ.ವಿ.ಮಹೇಶ್, ಕೆ.ಚಂದ್ರಪ್ಪ, ರಾಜೇಂದ್ರ ಚಕ್ರಸಾಲಿ ಮತ್ತಿತರರಿದ್ದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!