ಪಕ್ಕದ ಭಟ್ಟ್ರು ಮನೆಗೆ ಟಿ.ವಿ. ನೋಡಲು ಹೋಗುತ್ತಿದ್ದ ಯುವತಿ ಈಗ 7 ತಿಂಗಳ ಗರ್ಭಿಣಿ ! ಯುವತಿ ಸಾಂತ್ವನ ಕೇಂದ್ರಕ್ಕೆ, ಕಾಮುಕ ಭಟ್ ಮಾವನ ಮನೆಗೆ

0
1818

ತೀರ್ಥಹಳ್ಳಿ : ಟಿ.ವಿ.ನೋಡಲು ಬರುತ್ತಿದ್ದ ಪಕ್ಕದ ಮನೆಯ ಯುವತಿಯನ್ನು ರೇಪ್ ಮಾಡಿ ಗರ್ಭವತಿಯನ್ನಾಗಿ ಮಾಡಿದ ಆರೋಪದ ಅಡಿಯಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ತಾಲೂಕಿನ ನಾಲೂರಿನಲ್ಲಿ ಯುವತಿಯೊಬ್ಬಳು 2021 ರ ಡಿಸೆಂಬರ್ ನಲ್ಲಿ ಕಾಲೇಜು ಇಲ್ಲದ ಕಾರಣ ಪಕ್ಕದ ಮನೆಯ ಮುರುಳೀಧರ್ ಭಟ್ ಎಂಬುವರ ಮನೆಗೆ ಟಿವಿ ನೋಡಲು ಹೋಗುತ್ತಿದ್ದಳು. ಟಿವಿ ನೋಡುವ ವೇಳೆ ಯುವತಿಯನ್ನು ಮುರುಳೀಧರ್ ಬಲತ್ಕರಿಸಿರುವುದಾಗಿ ಯುವತಿ ಆರೋಪಿಸಿದ್ದಾಳೆ.

ಇದಾದ ನಂತರ ದಾರಿಯಲ್ಲಿ ಸಿಕ್ಕಾಗಲೆಲ್ಲಾ ಮನೆಗೆ ಬಾ ಎಂದು ಕರೆದಿದ್ದು, ಎರಡು ಮೂರು ಬಾರಿ ಆತನ ಆಹ್ವಾನವನ್ನು ತಿರಸ್ಕರಿಸಿದ ಯುವತಿಗೆ ಮುರಳೀಧರ್ ಮನೆಗೆ ಬಾರದಿದ್ದರೆ ನಿನ್ನನ್ನೂ ಮತ್ತು ನಿನ್ನ ತಾಯಿಯನ್ನು ಜೀವಂತ ಬಿಡುವುದಿಲ್ಲವೆಂದು ಬೆದರಿಕೆ ಹಾಕಿದ್ದನು.

ಈ ಬೆದರಿಕೆಯ ಬೆನ್ನಲ್ಲೇ ಮನೆಗೆ ಬಂದ ಯುವತಿಯನ್ನು ಮತ್ತೆ ಬಲತ್ಕರಿಸಿರುವುದಾಗಿ ಆರೋಪಿಸಲಾಗಿದೆ. ಇದಾದ ನಂತರ ದೇಹದಲ್ಲಿ ಬದಲಾವಣೆಯಾಗಿದ್ದು, ತಾಯಿ ಇದನ್ನು ಗಮನಿಸಿ ತೀರ್ಥಹಳ್ಳಿಯಲ್ಲಿ ಆಸ್ಪತ್ರೆಗೆ ತೋರಿಸಿದಾಗ ಯುವತಿ 7 ತಿಂಗಳ ಗರ್ಭಾವತಿ ಎಂದು ತಿಳಿದು ಬಂದಿದೆ.

ಈಗ ಯುವತಿಯನ್ನು ಸಾಂತ್ವಾನ ಕೇಂದ್ರಕ್ಕೆ ಕಳುಹಿಸಲಾಗಿದ್ದು ಬಲಾತ್ಕಾರ ಪ್ರಕರಣದಲ್ಲಿ ದೂರು ದಾಖಲಾಗಿದೆ. ಆರೋಪಿ ಮುರುಳೀಧರ್ ಭಟ್ ನ್ನು ಆಗುಂಬೆ ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here