ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿದ್ದವರು ಈಗ ನಾಮನಿರ್ದೇಶನ ಸದಸ್ಯರು!ಹೀಗೂ ಉಂಟೆ?

0
909

ಹೊಸನಗರ: ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಆಡಳಿತ ನಡೆಸಿದ ಹೆಚ್.ಎನ್ ಶ್ರೀಪತಿ ರಾವ್ ಹಾಗೂ ಎಂ.ಎನ್. ಸುಧಾಕರ್ ಅವರು ಇಂದು ಪಟ್ಟಣ ಪಂಚಾಯತಿಯ ನಾಮನಿರ್ದೇಶನ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಅವರೊಂದಿಗೆ ಶಾಸಕರ ವಾಹನ ಸಾರಥಿಯ ಸಹೋದರ ಕೆ.ಎ. ಮಹಮ್ಮದ್ ಯಾಸೀರ್ ರವರು ಸಹ ನಾಮನಿರ್ದೇಶನ ಸದಸ್ಯರಾಗಿ ನೇಮಕಗೊಂಡಿದ್ದಾರೆ.

ಅಧ್ಯಕ್ಷರಾಗಿ ಸೇವೆಸಲ್ಲಿಸಿದ್ದ ಶ್ರೀಪತಿ ರಾವ್ ಹಾಗೂ ಸುಧಾಕರ್ ಅವರಿಗೆ ಇನ್ನು ಹೆಚ್ಚಿನ ಅಧಿಕಾರದ ಹುದ್ದೆಗಳಿಗೆ ನಾಮನಿರ್ದೇಶನ ಮಾಡಬಹುದಾಗಿತ್ತು, ಆದರೆ ಅಧ್ಯಕ್ಷರಾಗಿದ್ದರವರನ್ನು ನಾಮನಿರ್ದೇಶನ ಸದಸ್ಯರನ್ನಾಗಿ ನೇಮಕ ಮಾಡಿದ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here