ಪಟ್ಟಾಭಿಷೇಕ 10ನೇ ವರ್ಷದ ವರ್ಧಂತ್ಯುತ್ಸವ | ಅಂತರಾತ್ಮಕ್ಕೆ ಸರಿಹೊಂದುವುದೇ ಧರ್ಮ: ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು

0
217

ರಿಪ್ಪನ್‌ಪೇಟೆ: ವಿವೇಕಶೂನ್ಯ ಮನುಷ್ಯ ಪಶುವಿಗೆ ಸಮಾನವೆಂದು ವಿವೇಕದಿಂದಾಗಿಯೇ ಮನುಷ್ಯನು ತನ್ನ ಗುರಿಯನ್ನು ಹೊಂದಲು ಸಹಕಾರಿಯಾಗುತ್ತದೆ. ತನ್ನ ಎಲ್ಲ ಕ್ರಿಯೆಗಳಲ್ಲಿ ವಿವೇಕವನ್ನು ಬಳಸಿಕೊಳ್ಳುವ ಶಕ್ತಿ ಮನುಷ್ಯನಿಗಿದೆ ಎಂದು ಹೊಂಬುಜ ಮಠದ ಜಗದ್ಗುರು ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರು ಆಶೀರ್ವಚನ ನೀಡಿದರು.

ಹೊಂಬುಜದಲ್ಲಿ ಏರ್ಪಡಿಸಿದ್ದ ಪರಮಪೂಜ್ಯ ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿಗಳ ಪಟ್ಟಾಭಿಷೇಕ 10ನೇ ವರ್ಧಂತ್ಯುತ್ಸವದ ಧಾರ್ಮಿಕ ಸಭೆಯಲ್ಲಿ ಮಾತನಾಡಿ, ಶ್ರೀಕ್ಷೇತ್ರದಲ್ಲಿ ಮಹಾಮಾತೆ ಶ್ರೀ ಪದ್ಮಾವತಿ ಅಮ್ಮನವರ ಬಸದಿಯ ಜೀರ್ಣೋದ್ದಾರ ಕಾರ್ಯವು ನಡೆಯುತ್ತಿದೆ. ಯಾತ್ರಾರ್ಥಿಗಳಿಗೆ ಸವಲತ್ತು ಒದಗಿಸಿಕೊಡುವುದಲ್ಲದೇ ಆಹಾರ, ಔಷಧ, ವಿದ್ಯಾ, ಅಭಯ ದಾನ ಮಾಡುತ್ತಿರುವುದನ್ನು ಮುಂದುವರಿಸಲಾಗಿದೆ. ಜೈನಾಗಮ ಪ್ರಭಾವನಾ ಸತ್ಕಾರ್ಯವನ್ನು ಮಾಡುತ್ತಿದ್ದು ಭಕ್ತವೃಂದದವರ ಸಹಕಾರ ಅಭಿನಂದನೀಯ ಎಂದರು.

ಸಮಾಜದ ಕ್ಷೇಮಾಭ್ಯುದಯದ ಕಾರ್ಯ ಯೋಜನೆಗಳಿಂದ ಆರೋಗ್ಯವಂತ ಸಮಾಜ ನಿರ್ಮಾಣದ ದೂರದೃಷ್ಠಿಯ ಕುರಿತು ಪೂಜ್ಯಶ್ರೀಗಳವರು ಪ್ರಸ್ತಾಪಿಸಿದರು.

ನಮ್ಮ ಜೀವನದಲ್ಲಿ ಅನೇಕ ಸಮಸ್ಯೆಗಳು ಬರುತ್ತವೆ, ಹೋಗುತ್ತವೆ. ನಮ್ಮ ಅಮೂಲ್ಯ ಕ್ಷಣಗಳು ನಮ್ಮ ಪ್ರಗತಿಗಾಗಿ, ಉನ್ನತಿಗಾಗಿ ಬಳಕೆಯಾದಾಗಲೇ ಜೀವನ ಬೆಳಗುತ್ತದೆ. ಎಣ್ಣೆ/ತುಪ್ಪದ ದೀಪಗಳು ಹೊರಗಿನ ಕತ್ತಲೆಯನ್ನು ದೂರಮಾಡಬಹುದು. ಅಂತರಾತ್ಮನ ಕತ್ತಲೆಯನ್ನು ದೂರಮಾಡಲು ನಮಗೆ ಸಮಯೋಚಿತವಾದ ವಿವೇಕ, ಜಾಗೃತಿ ಇಟ್ಟುಕೊಂಡರೆ ನಮ್ಮ ಬಾಳಲ್ಲಿ ನಿತ್ಯ ದೀಪಾವಳಿ ಸಂಭ್ರಮವಾಗುವುದರಲ್ಲಿ ದೂರವಿಲ್ಲ ಎಂದರು.

ಆಡಳಿತಾಧಿಕಾರಿ ಸುಧೀರ ಎ. ಕುಸನಾಳೆ, ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ನೇ. ಮಗದುಮ್ಮ, ಜಿ. ಮಂಜಪ್ಪ, ವಳಗೆರೆ ಪಾರ್ಶ್ವನಾಥ, ತೀರ್ಥಹಳ್ಳಿಯ ಡಾ. ಜೀವಂಧರ್ ಜೈನ್, ಶಿವಮೊಗ್ಗ, ಸಾಗರ, ರಾಜ್ಯದ ವಿವಿಧ ಜಿಲ್ಲೆಗಳ ಜೈನ ಸಮಾಜದವರು, ಸಂಘ-ಸಂಸ್ಥೆಯವರು ಪೂಜ್ಯಶ್ರೀಗಳವರಿಗೆ ಭಕ್ತಿ ಗೌರವ ಸಮರ್ಪಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here