ಪಠ್ಯ ಪುಸ್ತಕ ಕ್ರಮ ವಿರೋಧಿಸಿ ಕಿಮ್ಮನೆ ನೇತೃತ್ವದ ಪ್ರತಿಭಟನೆಗೆ ಹೊಸನಗರ ತಾಲ್ಲೂಕಿನಿಂದ 5 ಸಾವಿರ ಕಾರ್ಯಕರ್ತರು ಭಾಗಿ: ಬಿ.ಜಿ. ಚಂದ್ರಮೌಳಿ

0
220

ಹೊಸನಗರ: ಜೂನ್ 15 ರಂದು ಕುಪ್ಪಳಿಯಿಂದ ತೀರ್ಥಹಳ್ಳಿಯವರೆಗೆ ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್‌ರವರ ನೇತೃತ್ವದಲ್ಲಿ ರಾಜ್ಯ ಸರ್ಕಾರದ ಪರಿಷ್ಕತ ಪಠ್ಯ ಪುಸ್ತಕ ವಿರೋಧಿಸಿ ಪ್ರತಿಭಟನಾ ರ‍್ಯಾಲಿಯಲ್ಲಿ ಹೊಸನಗರ ತಾಲ್ಲೂಕಿನಿಂದ ಕಾಂಗ್ರೆಸ್ ಕಾರ್ಯಕರ್ತರು ಸೇರಿ 5ಸಾವಿರಕ್ಕಿಂತ ಹೆಚ್ಚು ಜನರು ಭಾಗಿಯಾಗಲಿದ್ದಾರೆ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಬಿ.ಜಿ ಚಂದ್ರಮೌಳಿಯವರು ಹೇಳಿದರು.

ಅವರು ಕೋಡೂರಿನಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ರಾಜ್ಯ ಸರ್ಕಾರ 4ವರ್ಷಗಳಿಂದ ಒಂದೊಂದು ಹಗರಣದಲ್ಲಿ ಭಾಗಿಯಾಗುತ್ತಿದ್ದು ಅದರಂತೆ ಪಠ್ಯ ಪುಸ್ತಕದಲ್ಲಿಯು ಡಾ|| ಬಾಬಾ ಸಾಹೇಬ್ ಅಂಬೇಡ್ಕರ್, ನಮ್ಮ ಜಿಲ್ಲೆಯವರೆ ಆದ ರಾಷ್ಟ್ರಕವಿ ಕುವೆಂಪು, ಸಾಮಾಜಿಕ ಸುಧಾರಕರಾದ ಬಸವಣ್ಣನಂಥವರನ್ನು ಅವಮಾನಿಸಿರುವುದು ಖಂಡನೀಯ. ಇದನ್ನು ವಿರೋಧಿಸಿ ತೀರ್ಥಹಳ್ಳಿಯಲ್ಲಿ ಪ್ರತಿಭಟನಾ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ. ಈ ರ‍್ಯಾಲಿ ಪಕ್ಷಾತೀತವಾಗಿದ್ದು ಎಲ್ಲ ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಬಹುದಾಗಿದೆ. ಆದ್ದರಿಂದ ಹೊಸನಗರ ತಾಲ್ಲೂಕಿನ ಕನ್ನಡ ಅಭಿಮಾನಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ಈ ಸಂದರ್ಭದಲ್ಲಿ ಕೇಳಿಕೊಂಡರು.

ಜಾಹಿರಾತು

LEAVE A REPLY

Please enter your comment!
Please enter your name here