ಪಡಿತರದಾರರ ದಿಕ್ಕು ತಪ್ಪಿಸುತ್ತಿರುವ ಅನಾಮಿಕ ಕರಪತ್ರ

0
324


ರಿಪ್ಪನ್‌ಪೇಟೆ: ಸಮೀಪದ ಹೆದ್ದಾರಿಪುರ ಗ್ರಾಮದಲ್ಲಿನ ನ್ಯಾಯಬೆಲೆ ಅಂಗಡಿ ಕಳೆದ 35 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು ಈ ನ್ಯಾಯಬೆಲೆ ಅಂಗಡಿಯ ಕಾರ್ಡ್ದಾರರನ್ನು ಪಕ್ಕದ ನ್ಯಾಯಬೆಲೆ ಅಂಗಡಿಯವರು ತನ್ನ ಕಡೆ ಸೆಳೆಯವು ಉದ್ದೇಶದಲ್ಲಿ ಅನಾಮಿಕವಾದ ಕರಪತ್ರವನ್ನು ಹಂಚಿ ಪಡಿತರ ಫಲಾನುಭವಿಗಳ ದಿಕ್ಕು ತಪ್ಪಿಸುವ ಕಾರ್ಯದಲ್ಲಿ ತೊಡಗಿದ್ದಾರೆಂದು ಹೆಚ್.ಕೆ.ನಾಗರಾಜ್ ಆರೋಪಿಸಿದ್ದಾರೆ.


ರಿಪ್ಪನ್‌ಪೇಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಎಫ್‌ಎಸ್‌ಡಿ /ಎಫ್‌ಪಿಎಸ್/ಸಿಆರ್-86/20-21 ಪ್ರಸ್ತಾವನೆಯಲ್ಲಿ ವಿವರಿಸಿರುವಂತೆ ಎಲ್ಲಾ ಅಂಶಗಳನ್ನು ಗಣನೆಗೆ ತಗೆದುಕೊಂಡು ವಡಾಹೊಸಳ್ಳಿ ಗ್ರಾಮದಲ್ಲಿ ಹೊಸದಾಗಿ ತರೆಯಲಾಗಿರುವ ನ್ಯಾಯಬೆಲೆ ಅಂಗಡಿಗೆ ಹೆದ್ದಾರಿಪುರ ನ್ಯಾಯಬೆಲೆ ಅಂಗಡಿಯಿಂದ ವರ್ಗಾವಣೆ ಮಾಡಿದ 187 ಪಡಿತರ ಚೀಟಿಗಳನ್ನು ಅಂಗಡಿ ಸಂಖ್ಯೆ-21 ಹೆಚ್.ಕೆ.ನಾಗರಾಜ್ ಬಿನ್ ಕೃಷ್ಣಪ್ಪ ಶೆಟ್ಟಿ ಮಾಲೀಕತ್ವದ ಮೂಗುಡ್ತಿ ಗ್ರಾಮ ಹೆದ್ದಾರಿಪುರ ನ್ಯಾಯಬೆಲೆ ಅಂಗಡಿಗೆ ವಾಪಾಸ್ಸು ವರ್ಗಾಯಿಸಿ ಈ ಹಿಂದಿನಂತೆ ಪಡಿತರ ಹಂಚಿಕೆ ಮಾಡುವಂತೆ ರಾಜ್ಯ ಉಚ್ಛನ್ಯಾಯಾಲಯ ಆದೇಶಿಸಲಾಗಿದ್ದು ನ್ಯಾಯಾಲಯದ ಆದೇಶದಂತೆ ಶಿವಮೊಗ್ಗ ಜಿಲ್ಲಾ ಅಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕರು ಹೆಚ್.ಕೆ.ನಾಗರಾಜ್‌ಇವರಿಗೆ ಪಡಿತರ ವಿತರಣೆಗೆ ಅವಕಾಶ ಕಲ್ಪಿಸಲಾಗಿದ್ದರೂ ಕೂಡಾ ವಡಾಹೊಸಳ್ಳಿ ನ್ಯಾಯಬೆಲೆ ಅಂಗಡಿಯವರು ಅನಾಮಿಕ ಕರಪತ್ರವನ್ನು ಪ್ರಕಟಿಸಿ ಗ್ರಾಹಕರಿಗೆ ಹಂಚಿ ದಿಕ್ಕುತಪ್ಪಿಸುವ ಹುನ್ನಾರ ನಡೆಸುತ್ತಿದ್ದಾರೆಂದು ನಾಗರಾಜ್ ನ್ಯಾಯಾಲಯದ ಆದೇಶ ಪ್ರತಿಯನ್ನು ಮಾಧ್ಯಮ ಪ್ರತಿನಿಧಿಗಳಿಗೆ ಬಿಡುಗಡೆ ಮಾಡಿದರು.

ಜಾಹಿರಾತು

LEAVE A REPLY

Please enter your comment!
Please enter your name here