ಸಾಗರ: ಪತಿ ಮನೆಯವರ ಕಿರುಕುಳ ತಾಳಲಾರದೇ ವಿಷ ಸೇವಿಸಿ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಜೋಗದಲ್ಲಿ ನಡೆದಿದೆ.
ಸಂಧ್ಯಾ (25) ಮೃತ ದುರ್ದೈವಿಯಾಗಿದ್ದು, ಸೋಮವಾರ ರಾತ್ರಿ ಸಂಧ್ಯಾ ವಿಷ ಸೇವಿಸಿದ್ದು, ಕೂಡಲೇ ಆಕೆಯನ್ನ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ದಾಖಲು ಮಾಡಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಗೃಹಿಣಿ ಕೊನೆಯುಸಿರೆಳೆದಿದ್ದಾರೆ.
ಕಳೆದ 2 ವರ್ಷಗಳ ಹಿಂದೆ ಸಂಧ್ಯಾ ಅವರಿಗೆ ಮಧುಸೂದನ್ ಜೊತೆ ವಿವಾಹವಾಗಿದ್ದರು. ಪತಿ ದಿನನಿತ್ಯ ಮದ್ಯ ಸೇವಿಸಿ ಬಂದು ಪತ್ನಿಗೆ ಕಿರುಕುಳ ನೀಡುತ್ತಿದ್ದ ಎಂದು ಸಂಧ್ಯಾ ಪೋಷಕರು ಆರೋಪಿಸಿದ್ದಾರೆ.