ಪತ್ನಿಗೆ ವಿಡಿಯೋ ಕಾಲ್ ಮಾಡಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಸೆಂಟ್ರಲ್ ಜೈಲ್ ವಾರ್ಡರ್ !

0
2819

ಶಿವಮೊಗ್ಗ: ಪತಿಯ ಆತ್ಮಹತ್ಯೆಯನ್ನು ಮೊಬೈಲ್ ವಿಡಿಯೋ ಕಾಲ್ ಮೂಲಕ ನೋಡಿದ ಪತ್ನಿ ಅಲ್ಲಿನ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು ಬದುಕಿಸಲಾಗದ ಸನ್ನಿವೇಶ ಶಿವಮೊಗ್ಗ ಕಾರಾಗೃಹ ಆವರಣದ ಕ್ವಾಟ್ರಸ್‌ನಲ್ಲಿ ನಡೆದಿದೆ.

ಇತ್ತೀಚೆಗಷ್ಟೆ ಕೇಂದ್ರ ಕಾರಾಗೃಹದಲ್ಲಿ ವಾರ್ಡರ್ ಆಗಿದ್ದ ಬೆಳಗಾವಿ ಜಿಲ್ಲೆಯ ಯರ್ನಾಡ ಗ್ರಾಮದ ಅಶ್ವಾಕ್ ವಿ ಠಗರಿ (25) ಪತ್ನಿ ಎದುರೇ ಬೆಡ್ ರೂಮಿನ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ನತದೃಷ್ಟ.

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದ್ದು, ಈತ ಸಾಯುವ ದೃಶ್ಯವನ್ನು ತನ್ನ ಹೆಂಡತಿ ಹಾಗೂ ಆಕೆಯ ಮನೆಯವರಿಗೆ ವಿಡಿಯೋ ಕಾಲ್ ತೋರಿಸುತ್ತಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕಳೆದ 2 ವರ್ಷಗಳಿಂದ ಕೆಎಸ್‌ಆರ್‌ಪಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇತ್ತೀಚೆಗೆ ಜೈಲಿಗೆ ಬಂದಿದ್ದ ಆತ ಹಾಗೂ ಆತನ ಪತ್ನಿ ನಡುವಿನ ಜಗಳ ನಡೆದಿತ್ತು. ಈ ಹಿನ್ನೆಲೆಯಲ್ಲಿ ಆತನ ಪತ್ನಿ ತವರು ಮನೆಗೆ ಹೋಗಿದ್ದರು.

ನಿನ್ನೆ ಸಂಜೆ ಅಶ್ವಾಕ್ ಪತ್ನಿಗೆ ವಿಡಿಯೋ ಕಾಲ್ ಮಾಡಿದ್ದಾನೆ ಅಲ್ಲಿ ಪತ್ನಿ ಹಾಗೂ ಅವರ ಕುಟುಂಬದ ಅತ್ತೆ, ಮಾವನ ಜೊತೆ ಜಗಳವಾಡಿದ್ದಾರೆ. ಜಗಳ ಮಿತಿಮೀರಿದಾಗ ಕಿಟಕಿ ಬಳಿ ಮೊಬೈಲ್ ಇಟ್ಟು ನೇಣುಹಾಕಿಕೊಳ್ಳುವ ದೃಶ್ಯವನ್ನು ಕಾಣುವಂತೆ ನೋಡಿಕೊಂಡಿದ್ದಾನೆ. ಕೂಡಲೇ ಆತನ ಪತ್ನಿ ಜೈಲಿನ ಅಧೀಕ್ಷರಿಗೆ ಫೋನ್ ಮಾಡಿದ್ದಾರೆ. ಜೈಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮನೆ ಬಾಗಿಲು ಹೊಡೆದು ಒಳಗೆ ಹೋಗುವಷ್ಟರಲ್ಲಿ ಅಶ್ವಾಕ್ ಪ್ರಾಣಪಕ್ಷಿ ಹಾರಿಹೋಗಿತ್ತು.

ಕೇವಲ ಒಂದು ವರ್ಷದ ಹಿಂದೆ ಮದುವೆ ಆಗಿದ್ದ ಆತನಿಗೆ ಒಂದು ಮಗು ಕೂಡ ಇದೆ. ಈ ಸಂಬಂಧ ತುಂಗಾ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಪತ್ನಿ ಆತಂಕದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here