24.3 C
Shimoga
Friday, December 9, 2022

ಪತ್ನಿ ಕೊಲೆ ಮಾಡಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ ಜೊತೆಗೆ ₹ 50 ಸಾವಿರ ದಂಡ !

ಶಿವಮೊಗ್ಗ : ಪತ್ನಿ ಕೊಲೆ ಮಾಡಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ ಜೊತೆಗೆ 50 ಸಾವಿರ ರೂ‌. ದಂಡ ವಿಧಿಸಿ ಕೋರ್ಟ್‌ ತೀರ್ಪು ನೀಡಿದೆ.

ಏನಿದು ಘಟನೆ ?
ಹಾಲ್‌ ಲಕ್ಕವಳ್ಳಿ ಗ್ರಾಮದ ವಾಸಿ ಮಂಜುನಾಥನು ತನ್ನ ಹೆಂಡತಿಗೆ ಕೌಟುಂಬಿಕ ಕಿರುಕುಳ ನೀಡಿ 2018 ರ ನ.16ರಂದು ಜಗಳ ತೆಗೆದು ಕೊಲೆ ಮಾಡಿದ ಬಗ್ಗೆ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.


ಆಗಿನ ತನಿಖಾಧಿಕಾರಿಗಳಾದ ದೊಡ್ಡಪೇಟೆ ವೃತ್ತದ ಸಿಪಿಐ ವಸಂತ್ ಕುಮಾರ್ ರವರು ಪ್ರಕರಣದ ತನಿಖೆ ಕೈಗೊಂಡು ಈ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.


ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರಾದ ಮಮತ ರವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದು, 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದ ನ್ಯಾಯಾಧೀಶರಾದ ಮಾನು ಕೆ. ಎಸ್ ರವರು ಇಂದು ಆರೋಪಿ ಶಿವಮೊಗ್ಗದ ಹಾಲ್ ಲಕ್ಕವಳ್ಳಿ ಗ್ರಾಮದ ಮಂಜುನಾಥ @ ಮಂಜ (36) ಈತನ ವಿರುದ್ಧ ಕಲಂ 302 ಐಪಿಸಿ ಕಾಯ್ದೆ ಅಡಿಯಲ್ಲಿ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆ ಮತ್ತು 50 ಸಾವಿರ ರೂ ದಂಡ, ದಂಡವನ್ನು ಕಟ್ಟಲು ವಿಫಲನಾದರೆ ಹೆಚ್ಚುವರಿಯಾಗಿ 06 ತಿಂಗಳು ಸಾದಾ ಕಾರವಾಸ ಶಿಕ್ಷೆ ನೀಡಿ ಆದೇಶ ನೀಡಿರುತ್ತಾರೆ.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!